ಚೀನಾದಲ್ಲಿ ಶಾಲೆಗಳು ಓಪನ್ : ಪುಟ್ಟ ಮಕ್ಕಳಿಗೆ ಉದ್ದ ಕೊಂಬಿನ ಟೋಪಿ ಕಡ್ಡಾಯ

ಕೊರೊನಾ ಹುಟ್ಟೂರಾದ ಚೀನಾ ಸದ್ಯ ಸಹಜ ಸ್ಥಿತಿಗೆ ಬಂದಿದೆ. ಜನ ತಮ್ಮ ಕಾರ್ಯಗಳಲ್ಲಿ ಬ್ಯೂಸಿ ಆಗುತ್ತಿದ್ದಾರೆ. ಶಾಲೆಗಳೂ ಓಪನ್ ಆಗಿವೆ. ವೇಗವಾಗಿ ಹರಡುವ ವೈರಸ್ ನಿಂದ ಮಕ್ಕಳನ್ನು ಕಾಪಾಡುವುದು ಸವಾಲಿನ ಕೆಲಸ. ಹೀಗಾಗಿ ಚೀನಾ ಶಾಲೆಗಳು ಪ್ಲಾನ್ ಒಂದನ್ನ ರೂಪಿಸಿವೆ. ಅದೇನ್ ಗೊತ್ತಾ..

ಶಾಲೆಗೆ ಬರುವ ಪುಟ್ಟ ಮಕ್ಕಳಿಗೆ ಉದ್ದವಾದ ಕೊಂಬಿರುವ ಟೋಪಿಗಳನ್ನು ಹಾಕುವುದು. ಕೊರೊನಾ ಹರಡುವುದನ್ನ ತಡೆಗಟ್ಟಲು ಇರುವ ಉಪಾಯವೆಂದರೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವುದು. ಹೀಗಾಗಿ ಶಾಲೆಗಳಿಗೆ ಬರುವ ಮಕ್ಕಳಿಗೆ ಮಾಸ್ಕ್ ಹಾಗೂ ಉದ್ದವಾದ ಕೊಂಬಿರುವ ಟೋಪಿಗಳನ್ನು ಧರಿಸುವುದು ಕಡ್ಡಾಯವಾಗಿದೆ.

ಪುಟ್ಟ ಮಕ್ಕಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸವಾಲಿನ ಕೆಲಸ. ಹೀಗಾಗಿ ಈ ಟೋಪಿಯನ್ನು ಹಾಕಿದರೆ ಮಕ್ಕಳು ಶಾಲೆಯಲ್ಲಿ ಒಬ್ಬರ ಬಳಿ ಒಬ್ಬರು ಹೋಗಲು ಟೋಪಿ ತಡೆಯಾಗುತ್ತದೆ. ಹೀಗಾಗಿ ಶಾಲೆಗೆ ಬರುವ ಮಕ್ಕಳಿಗೆ ಇಂತಹ ಟೋಪಿ ಕಡ್ಡಾಯ ಮಾಡಲಾಗಿದೆ. ಆ ಟೋಪಿ ಹಾಕಿಕೊಂಡು ಅವರು ಪಾಠ ಕೇಳಬೇಕಿದೆ.

ವಿಶೇಷ ಅಂದರೆ, ಚೀನಾದಲ್ಲಿ ಸಾಂಗ್ ರಾಜವಂಶದ ಅವಧಿಯಲ್ಲಿ ಅಧಿಕಾರಿಗಳು ನ್ಯಾಯಾಲಯದಲ್ಲಿ ಪರಸ್ಪರ ಪಿಸುಗುಟ್ಟುವ ಮತ್ತು ಪಿತೂರಿ ಮಾಡುವುದನ್ನು ತಡೆಯಲು ಇದೇ ರೀತಿಯ ಟೋಪಿಗಳನ್ನು ಧರಿಸಲಾಗುತ್ತಿತಂತೆ. ಈ ವಿಷಯವನ್ನು ಟ್ವಿಟ್ಟರ್‌ನಲ್ಲಿ ಚೀನಾ ಮಹಿಳೆಯೊಬ್ಬರು ಹಂಚಿಕೊಂಡಿದ್ದಾರೆ. ಚೀನಾದಲ್ಲಿ 84,341 ಮಂದಿಗೆ ಕೊರೊನಾ ಸೋಂಕು ತಗುಲಿತ್ತು. 77555 ಜನರು ಅದರಿಂದ ಗುಣಮುಖರಾಗಿದ್ದಾರೆ. 4643 ಜನರು ಮರಣ ಹೊಂದಿದ್ದಾರೆ.
https://twitter.com/chowleen/status/1254590781446410240

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights