24 ಗಂಟೆಯಲ್ಲಿ 2,553 ಜನರಿಗೆ ಕೊರೊನಾ : ದೇಶದಲ್ಲಿ ಸೋಂಕಿತರ ಸಂಖ್ಯೆ 42,533ಕ್ಕೆ ಏರಿಕೆ!

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುವ ಲಕ್ಷಣಗಳೇ ಗೋಚರವಾಗುತ್ತಿಲ್ಲ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು. ಕಳೆದ 24 ಗಂಟೆಯಲ್ಲಿ 2,553 ಜನರಿಗೆ ಸೋಂಕು ಹರಡಿರುವುದು ದೃಢಪಟ್ಟಿದ್ದು ಒಟ್ಟಾರೆ ಸೋಂಕಿತರ ಸಂಖ್ಯೆ 42,533ಕ್ಕೆ ಏರಿಕೆಯಾಗಿದೆ.

ಹೌದು…. ಭಾನುವಾರ ಒಂದೇ ದಿನದಲ್ಲಿ 72 ಜನ ಮಹಾಮಾರಿ ಕೊರೊನಾದಿಂದ ಸಾವನ್ನಪ್ಪಿದ್ದು, ಈವರೆಗೆ ದೇಶದಲ್ಲಿ ಸಾವಿನ ಸಂಖ್ಯೆ 1,373ಕ್ಕೇರಿಕೆಯಾಗಿದೆ. ಇನ್ನು ಒಟ್ಟು ಸೋಂಕಿತರ ಪೈಕಿ ಈ ವರೆಗೂ 11,706 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇನ್ನುಳಿದ ಸೋಂಕಿತರು ದೇಶದ ನಿಗದಿತ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದ ಕೇಂದ್ರ ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನೂ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮಹಾರಾಷ್ಟ್ರದಲ್ಲಿ ಗಣನೀಯವಾಗಿದೆ. ಇಲ್ಲಿ ಮತ್ತೆ ಹೊಸದಾಗಿ 678 ಪ್ರಕರಣಗಳು ದಾಖಲಾಗಿದ್ದು, ಒಟ್ಟಾರೆ ಕೊರೋನಾ ಪೀಡಿತರ ಸಂಖ್ಯೆ 12,974ಕ್ಕೇರಿದೆ. ಬಲಿಯಾದವರ ಸಂಖ್ಯೆ 548ಕ್ಕೆ ಏರಿಕೆ ಕಂಡಿದೆ. ದೆಹಲಿಯಲ್ಲಿ ಭಾನುವಾರ 427, ಗುಜರಾತ್  ನಲ್ಲಿ 974, ತಮಿಳುನಾಡಿನಲ್ಲಿ 266 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಆತಂಕ ಹೆಚ್ಚಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights