ಲಾಕ್‍ಡೌನ್ ಸಡಿಲಿಕೆ ದಿನವೇ ದುರಂತ : ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಓರ್ವ ಸಾವು..!

ಇಂದು ರಾಜ್ಯದಾದ್ಯಂತ ಲಾಕ್ ಡೌನ್ ಸಡಿಲಿಕೆಗೊಂಡಿದೆ. ವಲಸೆ ಕಾರ್ಮಿಕರು ಇಂದಿನಿಂದ ಉಚಿತವಾಗಿ ಪ್ರಯಾಣಬೆಳಸುವ ಅವಕಾಶ ನೀಡಿದ ಬೆನ್ನಲ್ಲೆ ಸಾವಿರಾರು ಜನ ಮೆಜೆಸ್ಟಿಕ್ ನಲ್ಲಿ ಸೇರಿದ್ದು ನಿಲ್ದಾದಲ್ಲಿ ಅಪಘಾತ ಸಂಭವಿಸಿ ಓರ್ವ ಸಾವನ್ನಪ್ಪದ್ದಾನೆ.

ಹೌದು.. ಇಂದು ರಾಜ್ಯದ ಬಹುತೇಕ ಭಾಗ ಲಾಕ್ ಡೌನ್ ನಿಂದ ಸಡಿಲಿಕೆಗೊಂಡಿದೆ. ಮೊದಲ ದಿನವೇ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಅಪಘಾತ ಸಂಭವಿಸಿದ್ದು 45 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾನೆ.

ಮೆಜೆಸ್ಟಿಕ್ ಬಸ್ ನಿಲ್ದಾಣದ ಫ್ಲಾಟ್ ಫಾರಂ ನಂಬರ್ 15ರಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಮೃತಪಟ್ಟಿದ್ದಾನೆ. ಕೊಪ್ಪಳ ಘಟಕ ಬಸ್‍ನಿಂದ ಈ ಅಪಘಾತವಾಗಿದೆ. ಘಟನೆ ಬಳಿಕ ನೂರಾರು ಜನ ಸ್ಥಳದಲ್ಲಿ ಜಮಾಯಿಸಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ರಕ್ತ ಶ್ರಾವವಾಗಿದ್ದ ಸ್ಥಳದಲ್ಲಿ ಮಣ್ಣು ಹಾಕಿ ಎಥಾಸ್ಥಿತಿ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ. ಘಟನೆ ನಡೆದ ಬಳಿಕ ಚಾಲಕ ಓಡಿ ಹೋಗಿದ್ದಾನೆ.

ಜನಸಂಖ್ಯೆ ಜಾಸ್ತಿ ಆದ ಪರಿಣಾಮ ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹೊರಡುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಗೆ ಬಸ್ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights