ಪಬ್, ಬಾರ್, ರೆಸ್ಟೋರೆಂಟ್‌ಗಳು ಓಪನ್; ಕಾರ್ಯನಿರ್ವಹಣೆ ಹೇಗೆ?

ಮದ್ಯದಂಗಡಿಗಳನ್ನು ತೆರೆದು ಮದ್ಯ ಮಾರಾಟಕ್ಕೆ ಅವಕಾಶ ನೀಡಿರುವ ರಾಜ್ಯ ಸರ್ಕಾರ, ಈಗ ಪಬ್, ಬಾರ್, ರೆಸ್ಟೋರೆಂಟ್‌ಗಳನ್ನೂ ತೆರೆಯಲು ಅನುಮತಿ ನೀಡಿದೆ.  ಮೇ.17ರವರೆಗೆ ತೆರೆಯಲು ಅವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಚಿಲ್ಲರೆ ದರದಲ್ಲಿ ಮದ್ಯ ಮಾರಾಟ ಮಾಡಬಹುದು. ಆದರೆ, ಮೆಗೆ ಕೊಂಡೊಯ್ಯಬೇಕು, ಅಲ್ಲಿಯೇ ಕುಡಿಯುವಂತಿಲ್ಲ ಎಂದು ತಿಳಿಸಲಾಗಿದೆ.

ಅನುಮತಿ ಕೊಡುತ್ತಿದ್ದಂತೆಯೇ ಪಬ್, ಬಾರ್ ಅಂಡ್ ರೆಸ್ಟೋರೆಂಟ್ ಗಳು ತೆರೆಯಲಾಗಿದ್ದು, ಗ್ರಾಹಕರು ಮದ್ಯ ಖರೀದಿಗೆ ಅಲ್ಲಿಯೂ ಮುಗಿಬಿದ್ದಿದ್ದಾರೆ.

ಲಾಕ್‌ಡೌನ್‌ನ ನಂತರ ಮದ್ಯದಂಗಡಿಗಳನ್ನು ತೆರೆಯಲಾಗಿದ್ದು, ಅಂಗಡಿಗಳು ತೆರೆದ ಸೋಮವಾರದಿಂದ ಈ ವರೆಗೂ ಬೆಂಗಳೂರಿನಲ್ಲಿ ನಗರದಲ್ಲಿ  8 ಕೊಲೆಗಳು ನಡೆದಿವೆ. ಈ ಎಲ್ಲ ಕೊಲೆಗಳೂ ಮದ್ಯದ ಮತ್ತಿನಲ್ಲಿ ನಡೆದ ಕೊಲೆಗಳಾಗಿವೆ.  ಕೊಲೆಗಳು ಮಾತ್ರವಲ್ಲದೇ  ಹಲ್ಲೆ, ಕೊಲೆ ಪ್ರಯತ್ನದ ಪ್ರಕರಣಗಳೂ ನಡೆದಿವೆ. ಗೃಹ ಹಿಂಸಾಚಾರದಂತಹ ಸಾಕಷ್ಟು  ಪ್ರಕರಣಗಳು ನಗರದ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಈ ಎಲ್ಲಾ ಕಾರಣಗಳಿಗಾಗಿ ರಾಜ್ಯದಲ್ಲಿ ಸಂಪೂರ್ಣವಾಗಿ ಮದ್ಯ ನಿಷೇಧ ಮಾಡಬೇಕು ಎಂದು ಆಂದೋಲನಗಳು, ಹೋರಾಟಗಳು ನಡೆಯುತ್ತಲೇ ಇವೆ. ಆದರೆ, ಇದಾವುದಕ್ಕೂ ಕಿವಿಗೊಡದ ಸರ್ಕಾರ, ಮದ್ಯದಂಗಡಿಗಳ ಜೊತೆಗೆ ಬಾರ್‌, ಪಬ್, ರೆಸ್ಟೋರೆಂಟ್‌ಗಳನ್ನು ತೆರೆದು ಮತ್ತಷ್ಟು ಅವಾಂತರ ಸೃಷ್ಟಿಸಲು ಮುಂದಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights