ಜಯ ಕರ್ನಾಟಕ ಸಂಘಟನೆಯ ಮುಖ್ಯಸ್ಥ ಮುತ್ತಪ್ಪ ರೈ ಆರೋಗ್ಯ ಸ್ಥಿತಿ ಗಂಭೀರ!
ಕ್ಯಾನ್ಸರ್ ಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಜಯ ಕರ್ನಾಟಕ ಸಂಘಟನೆಯ ಮುಖ್ಯಸ್ಥ ಮುತ್ತಪ್ಪ ರೈ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ.
ಹೌದು… ಕೆಲವು ದಿನಗಳಿಂದ ಮುತ್ತಪ್ಪ ರೈ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರ ಸ್ಥಿತಿ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗುತ್ತು. ಕ್ಯಾನ್ಸರ್ ನಿಂದ ಬಳಲುತ್ತಿರುವ ಈ ಮಾಜಿ ಭೂಗತ ಪಾತಕಿ ಮುತ್ತಪ್ಪ ರೈ ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದರಿಂದ ಕಳೆದ ಏ.28ರಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಪರಿಸ್ಥಿತಿ ಮತ್ತಷ್ಟು ಬಿಗಾಡಿಯಿಸಿದ ಪರಿಣಾಮ ಅವರು ಕಳೆದ ಮೂರು ದಿನಗಳಿಂದ ಕೋಮಾದಲ್ಲಿ ಇದ್ದಾರೆ ಎನ್ನುತ್ತಿವೆ ಆಸ್ಪತ್ರೆಯ ಮೂಲಗಳು.
ಕಳೆದ ಮೂರು ದಿನಗಳಿಂದಲೂ ಅವರು ಕೋಮಾ ಸ್ಥಿತಿಯಲ್ಲೇ ಇರುವ ಕಾರಣ ಅವರಿಗೆ ನೀರು, ಆಹಾರವನ್ನೂ ಸಹಜವಾಗಿ ನೀಡಲು ಸಾಧ್ಯವಾಗಿಲ್ಲ. ಇನ್ನು ವೈದ್ಯರು ವೆಂಟಿಲೇಶನ್ ನಲ್ಲಿ ಇಲ್ಲ, ಉಸಿರಾಟ ಮಾತ್ರ ಸಹಜವಾಗಿಯೇ ನಡೆಯುತ್ತಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಹಿಂದೊಮ್ಮೆ ಭೂಗತ ಜಗತ್ತಿನ ಜೊತೆ ನಂಟನ್ನು ಹೊಂದಿದ್ದ ಮುತ್ತಪ್ಪ ರೈ, ಕೆಲವು ವರ್ಷಗಳ ಹಿಂದೆಯೇ ಅದನ್ನೆಲ್ಲಾ ಬಿಟ್ಟು ಬಂದು ಸಾಮಾನ್ಯ ಜೀವನವನ್ನು ನಡೆಸುತ್ತಿದ್ದರು. ಅಲ್ಲದೆ ಜಯಕರ್ನಾಟಕ ಸಂಘಟನೆಯನ್ನು ಕೂಡಾ ಹುಟ್ಟು ಹಾಕಿ ಕನ್ನಡಕ್ಕಾಗಿ ಹೋರಾಟವನ್ನು ಅವರು ನಡೆಸುವ ಜೊತೆಗೆ ಅನೇಕ ಸಾಮಾಜಿಕ ಕಾರ್ಯಗಳ ಮೂಲಕ ಕೂಡಾ ಅವರು ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.
ಮುತ್ತಪ್ಪ ರೈ ಸ್ಥಿತಿ ಚಿಂತಾಜನಕವಾಗಿದ್ದು ನಾಳೆ ಆಸ್ಪತ್ರೆಯ ವೈದ್ಯರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಿದ್ದಾರೆ ಎಂದು ಪೂರ್ವ ವಲಯ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ಅವರ ನಿಧನದ ಸುದ್ದಿ ಸುಳ್ಳು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.


Just want to say your article is as astounding. The clearness in your post is just nice and i
can assume you’re an expert on this subject.
Fine with your permission allow me to grab your RSS feed to keep up to date with forthcoming post.
Thanks a million and please carry on the rewarding work.