ಭೀಕರ ರಸ್ತೆ ಅಪಘಾತ : 24 ಜನ ವಲಸೆ ಕಾರ್ಮಿಕರು ಸಾವು – 13ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ
ಟ್ರಕ್ ಗಳ ನಡುವೆ ಪರಸ್ಪರ ಢಿಕ್ಕಿ ಸಂಭವಿಸಿದ ಪರಿಣಾಮ 24 ಜನರು ವಲಸೆ ಕಾರ್ಮಿಕರು ಮೃತಪಟದ್ಟು 13ಕ್ಕೂ ಹೆಚ್ಚು ಜನರು ಗಂಭಿರ ಗಾಯಗೊಂಡ ಘಟನೆ ಔರಿಯಾ ಎಂಬಲ್ಲಿ ನಡೆದಿದೆ.
ಲಾಕ್ ಡೌನ್ ನಿಂದಾಗಿ ವಲಸೆ ಕಾರ್ಮಿಕರೆಲ್ಲರೂ ಟ್ರಕ್ ನಲ್ಲಿ ವಿವಿಧ ರಾಜ್ಯಗಳಲ್ಲಿರುವ ತಮ್ಮ ಮನೆಗೆಳಿಗೆ ತೆರಳುತ್ತಿದ್ದರು. ಇಂದು (ಶನಿವಾರ) ಮುಂಜಾನೆ 3:30ರ ವೇಳೆಗೆ ಈ ಭೀಕರ ಅವಘಡ ಸಂಭವಿಸಿದೆ.
ಕೊರೊನಾ ಲಾಕ್ಡೌನ್ನಿಂದಾಗಿ ಪ್ರವಾಸಿ ಕಾರ್ಮಿಕರು ಉದ್ಯೋಗವಿಲ್ಲದೆ ಪರದಾಡುತ್ತಿದ್ದರು. ಹೀಗಾಗಿ ಕಾರ್ಮಿಕರು ರಾಜಸ್ಥಾನದಿಂದ ಟ್ರಕ್ ಮೂಲಕ ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ತಮ್ಮ ಗ್ರಾಮಗಳಿಗೆ ಹೋಗುತ್ತಿದ್ದರು. ಲಾಕ್ಡೌನ್ನಿಂದಾಗಿ ತಮ್ಮ ಮನೆಗೆ ಹೋಗಲು ಯಾವುದೇ ಬಸ್ ವ್ಯವಸ್ಥೆಗಳಿರಲಿಲ್ಲ. ಹೀಗಾಗಿ ಕಾರ್ಮಿಕರು ಆಹಾರ ಪ್ಯಾಕೆಟ್ಗಳನ್ನು ಸಾಗಿಸುತ್ತಿದ್ದ ಟ್ರಕ್ನಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ.
ಗಾಯಗೊಂಡವರನ್ನು ಉತ್ತರಪ್ರದೇಶದ ಔರಿಯಾ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾಧಿಕಾರಿಗಳು ಸೇರಿದಂತೆ ಪೊಲೀಸರು ಸ್ಥಳಕ್ಕಾಗಮಿಸಿದ್ದು ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಕಳೆದೊಂದು ತಿಂಗಳಿಂದ ಹಲವು ವಲಸೆ ಕಾರ್ಮಿಕರು ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ. ಮೇ 14 ರಂದು ಮಹಾರಾಷ್ಟ್ರದಿಂದ ತಮ್ಮ ಊರುಗಳಿಗೆ ತೆರಳುತ್ತಿದ್ದ 8 ಜನ ವಲಸೆ ಕಾರ್ಮಿಕರು ರಸ್ತೆ ಅವಘಡಕ್ಕೆ ತುತ್ತಾಗಿ ಮೃತರಾಗಿದ್ದರು. ಈ ವರೆಗೆ ಕೊರೋನಾ ಸೋಂಕು ತಗುಲದೆ ಇಂತಹ ಅಪಘಾತ ಅಥವಾ ಇನ್ನಿತರ ಕಾರಣಗಳಿಂದಾಗಿ ಮೃತಪಟ್ಟ ಕಾರ್ಮಿಕರ ಸಂಖ್ಯೆ ಸಂಖ್ಯೆ ಕನಿಷ್ಟ 350 ಧಾಟಿದೆ ಎನ್ನಲಾಗುತ್ತಿದೆ.
21 labourers dead and several injured after the truck they were travelling in, collided with another truck in Auraiya. The injured have been shifted to hospital. They were coming from Rajasthan. pic.twitter.com/8l0QcH93Su
— ANI UP (@ANINewsUP) May 16, 2020
ಔರೈಯಾದಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟ ಕಾರ್ಮಿಕರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಗಾಯಗೊಂಡವರಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

