Fact Check: ‘ಸೈಬರಾಬಾದ್ ನಲ್ಲಿ ಕಿತ್ತಳೆ ನಿಷೇಧಿಸಲಾಗಿದೆ’ ವ್ಯಂಗ್ಯಕ್ಕೆ ಬೇಸ್ತು ಬಿದ್ದ ಬಿಜೆಪಿ ಮುಖಂಡ ಸುರೇಂದ್ರ ಪೂನಿಯಾ

ಬಿಜೆಪಿ ಮುಖಂಡ ಮೇಜರ್ ಸುರೇಂದ್ರ ಪೂನಿಯಾ ಅವರು “ಸೈಬರಾಬಾದ್ ಪೊಲೀಸರು ನಗರದಲ್ಲಿ ಕಿತ್ತಳೆ ಮಾರಾಟವನ್ನು ನಿಷೇಧಿಸಿದ್ದಾರೆ” ಎನ್ನುವ ತಲೆಬರಹದೊಂದಿಗೆ ಪತ್ರಿಕೆಯ ಮುಖಪುಟದಂತೆ ಕಾಣುವ ಚಿತ್ರವನ್ನು (ಆರ್ಕೈವ್) ಹಂಚಿಕೊಂಡಿದ್ದಾರೆ. ಪೂನಿಯಾ ಅವರು ಚಿತ್ರಕ್ಕೆ ಸ್ವಲ್ಪ ಎಡವಟ್ಟಾದ ಸಂದೇಶವನ್ನು ಸೇರಿಸಿದ್ದಾರೆ, “ಈಗ ಕಿತ್ತಳೆ ಹಣ್ಣುಗಳನ್ನು ನಿಮಗಾಗಿ ಸಿಕ್ಯುಲರಿಸಂ ಹೆಸರಿನಲ್ಲಿ ಅಪಚಾರ ಮಾಡಲಾಗುತ್ತಿದೆ. ಕೆಲವು ರಾಜ್ಯಗಳಲ್ಲಿ ಪೊಲೀಸರು ಶರಿಯಾವನ್ನು ವಿಧಿಸಲು ಪ್ರಾರಂಭಿಸಿದ್ದಾರೆ ಎಂದು ಕಾಣುತ್ತಿದೆ. ಸಿಂಧೂರ, ಮಂಗಲಸೂತ್ರ, ಬಿಂದಿ ಮತ್ತುಓಂನ್ನು ಸಹ ನಿಷೇಧಿಸುವ ದಿನ ದೂರವಿಲ್ಲ. ಸಿಕ್ಯುಲರಿಸಂ ಜಿಂದಾಬಾದ್.” ಅವರ ಟ್ವೀಟ್ ಸುಮಾರು 14,000 ಲೈಕ್‍ಗಳನ್ನು ಗಳಿಸಿತು ಮತ್ತು ಅದನ್ನುತೆಗೆದುಹಾಕುವ ಮೊದಲು 4,000 ಬಾರಿ ರಿಟ್ವೀಟ್ ಮಾಡಲಾಗಿತ್ತು.

ಕೆಲವು ಇತರ ಬಳಕೆದಾರರು ಕ್ಲಿಪಿಂಗ್‍ನ್ನು ಹಂಚಿಕೊಂಡರು, ಸುದ್ದಿ ನಿಜವೆಂದು ನಂಬಿದ್ದರು.

ಟ್ವಿಟರ್ ಹ್ಯಾಂಡಲ್@theskindoctor13 ಈ ಹಿಂದೆ ಕ್ಲಿಪಿಂಗ್‍ ಒಂದನ್ನು ಟ್ವೀಟ್ ಮಾಡಿ ಸೈಬರಾಬಾದ್ ಪೊಲೀಸರನ್ನುಟ್ಯಾಗ್ ಮಾಡಿತ್ತು.

ವ್ಯಂಗ್ಯಕ್ಕೆ ಬೇಸ್ತು ಬಿದ್ದರು

ಆ ಕ್ಲಿಪಿಂಗ್‍ ಕಂಪ್ಯೂಟರ್ ನಲ್ಲಿ ಮಾಡಿದ ಅಣಕಿನ ಅಪಹಾಸ್ಯ ಪತ್ರಿಕೆ ಎಂಬ ಅಂಶವನ್ನು ಸೂಚಿಸುವ ಸ್ಪಷ್ಟ ಸುಳಿವುಗಳನ್ನು ಪೂನಿಯಾ ಸಂಪೂರ್ಣವಾಗಿ ಕಡೆಗಣಿಸಿದ್ದರು. ಪತ್ರಿಕೆಯ ಹೆಸರು ‘ಡೆಕ್ಕನ್‍ಕ್-ಬ್ರೊನಿಕಲ್’ ಮತ್ತು ‘@theskindoctor13 ಅವರ ವಿಡಂಬನೆ’ ಎಂದು ಸ್ಪಷ್ಟವಾಗಿ ಕೆಳಗೆ ಬಲ ಮೂಲೆಯಲ್ಲಿ ಬರೆಯಲಾಗಿದೆ. ಶರಿಯಾ ಮತ್ತು ‘ಸಿಕ್ಯುಲರಿಸಂ ಬಗ್ಗೆ’ ಹೇಳುವ ಆತುರದಲ್ಲಿ ಪೂನಿಯಾ ಕ್ಲಿಪ್ಪಿಂಗ್ನಲ್ಲಿ ಅಪಹಾಸ್ಯದ, ‘ಯುನೆಸ್ಕೋ ಸೈಬರಾಬಾದ್ ಪೊಲೀಸರನ್ನು ವಿಶ್ವದ ಅತ್ಯಂತ ಜಾತ್ಯತೀತ ಪೊಲೀಸ್‍ಎಂದು ಘೋಷಿಸಿದೆ’ ಎಂದು ಹೇಳಿರುವ ಬರಹವನ್ನುಕೂಡ ಗಮನಿಸಿರಲಿಲ್ಲ.

ಜಾರ್ಖಂಡ್ ನಲ್ಲಿ ಹಣ್ಣು ಮಾರಾಟಗಾರರೊಬ್ಬರು  ‘ಹಿಂದೂ ಹಣ್ಣಿನಅಂಗಡಿ’ ಎಂದಿರುವ ಬೋರ್ಡ್ ಅನ್ನು ಹಾಕಿದ್ದಕ್ಕಾರೆ ಎನ್ನುವ ಸುದ್ದಿಗೆ ಪ್ರತಿಕ್ರಿಯೆಯಾಗಿ ನೀಲಂ ಸಿಂಗ್ ಹೆಸರಿನ ಟ್ವಿಟರ್ ಬಳಕೆದಾರ @theskindoctor ವಿಡಂಬನಾತ್ಮಕ ಕ್ಲಿಪಿಂಗ್ ಮಾಡಿದ್ದಾರೆ. ತೆಲಂಗಾಣದಲ್ಲಿಇದೇ ರೀತಿಯ ಪ್ರಕರಣಗಳು ವರದಿಯಾಗಿವೆ. ಬಳಕೆದಾರರೊಬ್ಬರು ಪೊಲೀಸರನ್ನುಟ್ಯಾಗ್ ಮಾಡಿ ಅತ್ತಾಪುರದಲ್ಲಿ ತರಕಾರಿ ಮಾರಾಟಗಾರರು ತಮ್ಮ ತಳ್ಳುಬಂಡಿಗಳಲ್ಲಿ ಕೇಸರಿ ಧ್ವಜಗಳನ್ನು ಹಾಕಿಕೊಂಡಿದ್ದಾರೆ ಎಂದು ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಸೈಬದರಾಬಾದ್ ಪೊಲೀಸರು ರಾಜೇಂದ್ರ ನಗರ ಪೊಲೀಸ್‍ಠಾಣೆಯನ್ನುಪೊ ಟ್ಯಾಗ್ ಮಾಡಿದ್ದಾರೆ. ಇದರಿಂದಾಗಿ ಶಾಸಕ ಅರವಿಂದ್‍ ಧರ್ಮಪುರಿ ಸೇರಿದಂತೆ ಹಲವಾರು ಬಿಜೆಪಿ ಸದಸ್ಯರು ಪೊಲೀಸ್‍ಠಾಣೆಯನ್ನು ಏಕೆ ಟ್ಯಾಗ್ ಮಾಡಿದ್ದಾರೆ ಎಂದು ಪ್ರಶ್ನಿಸಿ ವಿರೋಧಿಸಿದ್ದಾರೆ.

ವಿಡಂಬನಾತ್ಮಕ ವೃತ್ತಪತ್ರಿಕೆ ಕ್ಲಿಪಿಂಗ್ ತಯಾರಿಸಿದ್ದಕ್ಕಾಗಿ ಸೈಬರಾಬಾದ್ ಪೊಲೀಸರು @theskindoctor13 ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights