ಲವ್ ಜಿಹಾದ್ ಕುರಿತು ಸಿಎಂ ಯೋಗಿ ಹೇಳಿಕೆ ವಿರುದ್ಧ ಸಿಡಿದೆದ್ದ ಹೈದರಾಬಾದ್ ಸಂಸದ..!
ಹರಿಯಾಣದ ನಿಕಿತಾ ಮರ್ಡರ್ ಪ್ರಕರಣದ ನಂತರ ಲವ್ ಜಿಹಾದ್ ಬಗ್ಗೆ ಚರ್ಚೆ ಮತ್ತೊಮ್ಮೆ ಪ್ರಾರಂಭವಾಗಿದೆ. ಲವ್ ಜಿಹಾದ್ ಕುರಿತು ಕಾನೂನು ರೂಪಿಸುವ ಬಗ್ಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದು ಇದಕ್ಕೆ ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸದುದ್ದೀನ್ ಒವೈಸಿ ಯೋಗಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಜೊತೆಗೆ ಸಿಎಂಗೆ ಕಾನೂನಿನ ಬಗ್ಗೆ ಯಾವುದೇ ಜ್ಞಾನವಿಲ್ಲ ಎಂದು ಹೇಳಿದ್ದಾರೆ.
ಬಿಹಾರ್‌ನ ಕತಿಹಾರ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಯೋಗಿಯ ವಿರುದ್ಧ ವಾಗ್ದಾಳಿ ನಡೆಸಿದ ಓವೈಸಿ, “ಯೋಗಿ 21 ನೇ ಲೇಖನವನ್ನು ಓದಿ ಮತ್ತು ಅದು ಏನು ಹೇಳುತ್ತದೆ ಎಂಬುದನ್ನು ದೇಶಕ್ಕೆ ತಿಳಿಸಿ” ಬಿಜೆಪಿ-ಆರ್‌ಎಸ್‌ಎಸ್ ದೇಶದ ಮುಸ್ಲಿಮರ ವಿರುದ್ಧ ದ್ವೇಷವನ್ನು ಪ್ರಚೋದಿಸುತ್ತಿದೆ. ” ಬಿಜೆಪಿ-ಆರ್ಎಸ್ಎಸ್ ಮುಸ್ಲಿಮರ ವಿರುದ್ಧ ಯೋಜಿತ ರೀತಿ ಏನನ್ನಾದರೂ ಹೇಳುತ್ತಲೇ ಇದೆ. ಇದು ಮುಸ್ಲಿಮರ ವಿರುದ್ಧ ದ್ವೇಷವನ್ನು ಪ್ರಚೋದಿಸುತ್ತದೆ ಎಂದಿದ್ದಾರೆ.
“ಈಗ ಈ ಯೋಗಿ ಪ್ರೀತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಉತ್ತರ ಪ್ರದೇಶದ ಸಿಎಂ ಆಗಿದ್ದಾರೆ. ಆದರೆ ಅವರಿಗೆ ಸಂವಿಧಾನ ಎಂಬ ವಿಷಯ ಅರ್ಥವಾಗುತ್ತಿಲ್ಲ. ಅವರಿಗೆ ಏನೂ ತಿಳಿದಿಲ್ಲ. ಸಂವಿಧಾನದಲ್ಲಿ 21 ನೇ ವಿಧಿ ಏನು ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು. ಅವುಗಳನ್ನು ಓದಿ, ಅವರಿಗೆ ಓದಲು ತಿಳಿದಿಲ್ಲದಿದ್ದರೆ ಜ್ಞಾನವುಳ್ಳ, ಸಾಂವಿಧಾನಿಕ ವಕೀಲರಿಂದ ಸಹಾಯ ಪಡೆಯಲಿ ಎಂದು ಕುಟುಕಿದ್ದಾರೆ.

