ಲಾಕ್ ಡೌನ್ ರಂಜಾನ್ ಶಾಪಿಂಗ್ ವೇಳೆ ಬಟ್ಟೆ ಅಂಗಡಿಯ ಮೇಲೆ ಪೋಲೀಸರ ದಾಳಿ ಎಂದು ಪಾಕಿಸ್ತಾನದ ವಿಡಿಯೋ ಹಂಚಿದ ಮಹೇಶ್ ವಿಕ್ರಮ್ ಹೆಗ್ಡೆ
ಬುರ್ಖಾ ಧರಿಸಿದ ಹಲವು ಮಹಿಳೆಯರು ಕಟ್ಟಡದ ಕಿಟಕಿಯಿಂದ ತಪ್ಪಿಸಿಕೊಳ್ಳುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಲಾಕ್ಡೌನ್ ಸಮಯದಲ್ಲಿ ಈ ಮಹಿಳೆಯರು ರಂಜಾನ್ ಖರೀದಿಗೆ ಹೋಗಿದ್ದರು ಎಂದು ಹೇಳಲಾಗಿದೆ. ಪೋಲೀಸರು ಅಂಗಡಿಯನ್ನು ಮೊಹರು ಮಾಡಿದ್ದರಿಂದ, ಕಿಟಕಿಯಿಂದ ಪರಾರಿಯಾದರು ಎಂದು ಕೂಡ ಹಬ್ಬಿಸಲಾಗುತ್ತಿದೆ.
ಬಟ್ಟೆ ಅಂಗಡಿಗೆ ಪೊಲೀಸರ ಧಾಳಿ. ಹೊರಗಡೆಯಿಂದ ಅಂಗಡಿ ಬಾಗಿಲಿಗೆ ಬೀಗ .ಒಳಗಡೆ ಇದ್ದ ಮುಸ್ಲಿಂ ಹೆಂಗಸರು ಹೊರಬರಲು ಹರಸಾಹಸ.
Posted by Mahesh Vikram Hegde on Monday, May 4, 2020
ಪೋಸ್ಟ್ ಕಾರ್ಡ್ ಜನಕ ಮಹೇಶ್ ವಿಕ್ರಮ್ ಹೆಗ್ಡೆ ವಿಡಿಯೋವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. ಇದೇ ರೀತಿಯ ಹೇಳಿಕೆಯೊಂದಿಗೆ ವೀಡಿಯೊವನ್ನು ವಾಟ್ಸಾಪ್ ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್ ಚೆಕ್:
ಮೀಡಿಯಾ ಸ್ಕ್ಯಾನ್ ಇನ್ ವೀಡಿಯೊದ ಸರಳ ರಿವರ್ಸ್ ಇಮೇಜ್ ಹುಡುಕಾಟವನ್ನು ಮಾಡಿದಾಗ, ಅದೇ ವೀಡಿಯೊವನ್ನು ಯೂಟ್ಯೂಬಿನಲ್ಲಿ 30 ಜೂನ್ 2015ರಂದು ಪೋಸ್ಟ್ ಮಾಡಿದ್ದನ್ನು ಕಂಡುಕೊಂಡಿದೆ. ವೀಡಿಯೊದ ಶೀರ್ಷಿಕೆ “ಕರಾಚಿಯ ವೇಶ್ಯಾಗೃಹವೊಂದರಲ್ಲಿ ಎಫ್ಐಎ ದಾಳಿಯ ನಂತರ ಪಲಾಯನ ಮಾಡುತ್ತಿರುವ ಲೈಂಗಿಕ ಕಾರ್ಯಕರ್ತರು” ಎಂದು ಹೇಳುತ್ತದೆ.
ಹೀಗಾಗಿ, ವೀಡಿಯೊ ಪಾಕಿಸ್ತಾನದಿಂದ ಬಂದಿದೆ ಮತ್ತುಇತ್ತೀಚಿನ ಕರೋನ ವೈರಸ್ ಲಾಕ್ಡೌನ್ಗೆ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ. ಇದು ಸುಳ್ಳು ಸುದ್ದಿ ಮತ್ತು ಮಹೆಶ್ ವಿಕ್ರಂ ಹೆಗ್ಡೆ ಅವರು ಸುಳ್ಳು ಸುದ್ದಿಯನ್ನು ವ್ಯಪಕವಾಗು ಹರಡಿರುವುದು ತಿಳಿಯುತ್ತದೆ.
(ಕೃಪೆ) ಮೀಡಿಯ ಸ್ಕ್ಯಾನರ್ . ಇನ್
(ಕನ್ನಡಕ್ಕೆ): ದಿವ್ಯ ಶರ್ಮ

