ಡಾ.ಸುಧಾಕರ್ ಪ್ರಕರಣ : ಸಿಬಿಐ ತನಿಖೆಗೆ ಆಂಧ್ರಪ್ರದೇಶ ಹೈಕೋರ್ಟ್ ಆದೇಶ…!
ಡಾ. ಸುಧಾಕರ್ ಅವರ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಆಂಧ್ರಪ್ರದೇಶ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.
ಸರ್ಕಾರಿ ವೈದ್ಯರಿಗೆ ಸುರಕ್ಷತಾ ಸಾಧನಗಳನ್ನು ಒದಗಿಸಲಾಗಿಲ್ಲ ಎಂಬ ಆರೋಪದ ಮೇಲೆ ಈ ಹಿಂದೆ ಅಮಾನತುಗೊಂಡಿದ್ದ ಅರಿವಳಿಕೆ ತಜ್ಞ ಡಾ. ಸುಧಾಕರ್ ಅವರನ್ನು ಮೇ 17 ರಂದು ಅತಿಯಾದ ಬಲ ಪ್ರಯೋಗಿಸಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.
ಡಾ.ಸುಧಾಕರ್ ಅವರನ್ನು ವಶಕ್ಕೆ ತೆಗೆದುಕೊಳ್ಳುವಾಗ ಅತಿಯಾದ ಬಲವನ್ನು ಬಳಸಿದ ಆರೋಪವಿದ್ದು ವಿಶಾಖಪಟ್ಟಣಂ ಪೊಲೀಸ್ ಅಧಿಕಾರಿಗಳ ವಿರುದ್ಧ ಎಂಟು ವಾರಗಳಲ್ಲಿ ತನಿಖೆ ನಡೆಸಿ ತನಿಖಾ ವರದಿ ಸಲ್ಲಿಸುವಂತೆ ಹೈಕೋರ್ಟ್ ಸಿಬಿಐಗೆ ಸೂಚಿಸಿದೆ.
ಅರ್ಜಿದಾರರನ್ನು ಪ್ರತಿನಿಧಿಸುವ ವಕೀಲರ ಪ್ರಕಾರ, ಡಾ. ಸುಧಾಕರ್ ಅವರ ಮೇಲೆ ಆರು ಗಾಯದ ಗುರುತುಗಳಿವೆ. ಆದರೆ ಅವು ಸರ್ಕಾರದ ವರದಿಯಲ್ಲಿ ಕಾಣೆಯಾಗಿದೆ ಎಂದು ವಿಶಾಖಪಟ್ಟಣಂ ಜಿಲ್ಲಾಧಿಕಾರಿ ಸಲ್ಲಿಸಿದ ವರದಿಯನ್ನು ಹೈಕೋರ್ಟ್ ಅರಿತುಕೊಂಡಿದೆ. ಮೇ 17 ರಂದು, ವೈಜಾಗ್ ಪೊಲೀಸರು ಡಾ. ಸುಧಾಕರ್ ಅವರ ಕೈಗಳನ್ನು ಕಟ್ಟಿ, ಹೊಡೆದು ಆಟೋರಿಕ್ಷಾದಲ್ಲಿ ಎಳೆದೊಯ್ದಿದ್ದರು. ಮಾತ್ರವಲ್ಲದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ರಕ್ಕಸ ರಗಳೆಯನ್ನು ಸೃಷ್ಟಿಸಿದ್ದಾರೆಂದು ವರದಿ ನೀಡಿದ್ದಾರೆ.
ಪೊಲೀಸರ ಪ್ರಕಾರ, ಘಟನೆಯ ಸಮಯದಲ್ಲಿ ಅವರು ಮದ್ಯಪಾನ ಮಾಡಿದ್ದರು. ಜೊತೆಗೆ ಮಾನಸಿಕವಾಗಿ ಅಸ್ಥಿರನಾಗಿದ್ದನು. ಅವರನ್ನು ಆಲ್ಕೋಹಾಲ್ ಪರೀಕ್ಷೆಗಾಗಿ ಕಿಂಗ್ ಜಾರ್ಜ್ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಅಲ್ಲಿ ವೈದ್ಯರು ರಕ್ತದಲ್ಲಿ ಆಲ್ಕೋಹಾಲ್ ಇರುವುದನ್ನು ಪ್ರಮಾಣೀಕರಿಸಿದ್ದಾರೆ. ನಂತರ ಮಾನಸಿಕ ಮೌಲ್ಯಮಾಪನಕ್ಕಾಗಿ ಮಾನಸಿಕ ಆರೈಕೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಜೊತೆಗೆ ಅವರು ತೀವ್ರ ಮತ್ತು ಅಸ್ಥಿರ ಮನೋರೋಗದಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ಪ್ರಮಾಣೀಕರಿಸಿದ್ದಾರೆ. ಡಾ.ಸುಧಾಕರ್ ಪ್ರಸ್ತುತ 14 ದಿನಗಳ ವೀಕ್ಷಣಾ ಅವಧಿಗೆ ಆಸ್ಪತ್ರೆಯಲ್ಲಿದ್ದಾರೆ ಎಂದು ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಮೀನಾ ತಿಳಿಸಿದ್ದಾರೆ.
ಘಟನೆ ನಡೆದ ಬಳಿಕ ವಿಶಾಖಪಟ್ಟಣಂನ ಪೊಲೀಸ್ ಆಯುಕ್ತರು ಅದೇ ದಿನ ಕಾನ್ಸ್ಟೆಬಲ್ನನ್ನು ಅಮಾನತುಗೊಳಿಸಿದ್ದರು. ಟಿಡಿಪಿ ಮಾಜಿ ಶಾಸಕ ವಿ.ಅನೀತಾ ಅವರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದಾರೆ. ಡಾ. ಸುಧಾಕರ್ ಅವರ ಬಂಧನದ ವಿಡಿಯೋ ರೆಕಾರ್ಡಿಂಗ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಐಎಂಎ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ರಾಜ್ಯ ಸರ್ಕಾರ ಇವರ ವಿರುದ್ಧ ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ಎನ್ -95 ಮುಖವಾಡಗಳು ಮತ್ತು ಪಿಪಿಇ ಕಿಟ್ಗಳನ್ನು ಒದಗಿಸಲಿಲ್ಲ ಎಂಬ ಆರೋಪದ ಮೇಲೆ ಡಾ.ಸುಧಾಕರ್ ಅವರನ್ನು ಈ ಹಿಂದೆ ಅಮಾನತುಗೊಳಿಸಿತ್ತು. ನಂತರ ಇವರು ವಿಶಾಖಪಟ್ಟಣಂ ಜಿಲ್ಲೆಯ ನರಸಪಟ್ಟಣಂ ಪ್ರದೇಶದ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಾಗಿ ಕೆಲಸ ಮಾಡುತ್ತಿದ್ದರು.

