ಪೊಲೀಸರಿಗೆ ಕೊರೊನಾ ಸಂಕಷ್ಟ; ಕಮಿಷಿನರ್ ಭಾಸ್ಕರ್‌ ರಾವ್‌ ನೀಡಿದ 10 ಸೂಚನೆಗಳು

ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ.

ಬೆಂಗಳೂರು ನಗರ ಪೊಲೀಸರಲ್ಲಿ ಸಾಲು-ಸಾಲು-ಕೊರೋನಾ ಪಾಸಿಟಿವ್ ಪ್ರಕರಣಗಳು ಪ್ರತಿದಿನ ವರದಿಯಾಗುತ್ತಿವೆ. ಇಂದು 15 ಪೊಲೀಸ್‌ ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಓರ್ವ ಎಎಸ್ಐ ಕೊರೋನಾಗೆ ಬಲಿಯಾಗಿದ್ದಾರೆ.

ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಇದುವರೆಗೆ 9 ಮಂದಿ ಪೊಲೀಸರಿಗೆ ಪಾಸಿಟಿವ್ ಬಂದಿತ್ತು. ಇಂದು ಮತ್ತೆ 15 ಮಂದಿಗೆ ಪಾಸಿಟಿವ್ ದೃಢವಾಗಿದ್ದು ಒಂದೇ ಠಾಣೆಯಲ್ಲಿ 24 ಜನ ಪೊಲೀಸರಿಗೆ ಪಾಸಿಟಿವ್ ಕಾಣಿಸಿಕೊಂಡಿದೆ. ಓರ್ವ ಸಬ್ ಇನ್ಸ್‌ಪೆಕ್ಟರ್, ಇಬ್ಬರು ಎಎಸ್ಐಗಳು ಮತ್ತು ಹಲವು ಕಾನ್ಸ್‌ಟೇಬಲ್ ಗಳು ಸೋಂಕಿಗೆ ಗುರಿಯಾಗಿದ್ದಾರೆ. ಇನ್ನೂ ಕಳೆದ ಶುಕ್ರವಾರ ಪಾಸಿಟಿವ್ ಬಂದಿದ್ದ ವಿಲ್ಸನ್ ಗಾರ್ಡನ್ ಟ್ರಾಫಿಕ್ ಪೊಲೀಸ್ ಠಾಣೆಯ ಎಎಸ್ಐ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಎಸ್ಐ ಇಂದು ಬೆಳಗ್ಗೆ ಕೊರೋನಾ ಸೋಂಕಿಗೆ ಪ್ರಾಣ ತೆತ್ತಿದ್ದಾರೆ.

ದಿನಕಳೆದಂತೆ ನಗರ ಪೊಲೀಸರಲ್ಲಿ ಸೋಂಕು ಅಧಿಕವಾಗುತ್ತಿದ್ದು ಖಾಕಿ ಪಡೆಯಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. ಅಲ್ಲದೇ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಲು ಹಿಂಜರಿಯುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಎಚ್ಚೆತ್ತಿದ್ದಾರೆ. ಇಂದು ವೈರ್ ಲೇಸ್ ಮೂಲಕ ಎಲ್ಲಾ ಠಾಣೆಗಳಿಗೆ ಹತ್ತು ಸೂಚನೆಗಳನ್ನ ರವಾನಿಸಿದ್ದಾರೆ.

Bhaskar Rao named Bengaluru police commissioner

1. ಏನೇ ಸಮಸ್ಯೆ ಬಂದರೂ ಧೈರ್ಯವಾಗಿ ಎದುರಿಸಬೇಕು. ಗಾಬರಿಯಾಗಬೇಡಿ, ಸರ್ಕಾರ, ಸಮಾಜ ನಮ್ಮನ್ನ ನಂಬಿದೆ. ಎಲ್ಲಾ ಸ್ಟೇಷನ್ ನಲ್ಲಿ 55 ವರ್ಷ ಮೇಲ್ಪಟ್ಟ ಸಿಬ್ಬಂದಿ ಮನೆಯಲ್ಲಿ ಇರಬೇಕು. ಬೆಂಗಳೂರು ಬಿಟ್ಟು ಹೊರ ಹೋಗುವಂತಿಲ್ಲ. ಅಧಿಕಾರಿಗಳು ಈ ಬಗ್ಗೆ ಮಾನಿಟರ್ ಮಾಡಬೇಕು.

2. ಸಾಧ್ಯವಾದಷ್ಟು ಯುವ ಹೋಂ ಗಾರ್ಡ್ ಗಳನ್ನ ಬಳಕೆ ಮಾಡಿಕೊಳ್ಳಬೇಕು. ಇದಕ್ಕೆ ಜಂಟಿ‌ ಕಮೀಷನರ್ ಗಳು, ಡಿಸಿಪಿಗಳು ಮಾರ್ಗದರ್ಶನ ಮಾಡಬೇಕು.3. ಪೊಲೀಸ್ ಠಾಣೆಗಳ ಬಳಿ ಶಾಮಿಯಾನ ಹಾಕಿಕೊಂಡು ಠಾಣೆ ಹೊರಗಡೆ ಸಮಸ್ಯೆಗಳು ವಿಲೇವಾರಿ ಮಾಡಬೇಕು. ಆರೋಪಿಗಳಿರಲಿ, ಯಾರೇ ಅಗಲಿ ಯಾರನ್ನು ಮುಟ್ಟಬಾರದು.

4. ಹೊಯ್ಸಳ ಮತ್ತು ಚೀತಾ ಅನವಶ್ಯಕವಾಗಿ ಸುತ್ತಾಡಬಾರದು. ಸಮಸ್ಯೆ ಇದ್ರೆ, ಕಾಲ್ ಬಂದಲ್ಲಿ ಮಾತ್ರ ಹೋಗಬೇಕು. ಸುಮ್ಮನೆ ಸ್ಟೇಷನ್ ಗೆ ಬರಬಾರದು.

5. ಮುಖ್ಯ ಕೇಸ್ ಗಳಲ್ಲಿ ಮಾತ್ರ ಆರೋಪಿಗಳನ್ನ ಬಂಧಿಸಬೇಕು. ಸುಮ್ಮನೆ ಬಂಧಿಸುವ ಅವಶ್ಯಕತೆ ಇಲ್ಲ, ಸುಮ್ಮನೆ ಯಾರನ್ನು ಕರೆ ತಂದು ಠಾಣೆಯಲ್ಲಿ ಕೂರಿಸಬಾರದು.

6. ಎಲ್ಲಾ ಠಾಣೆ ವ್ಯಾಪ್ತಿಯಲ್ಲಿ ಒಂದು ಕಲ್ಯಾಣ ಮಂಟಪ ರೆಡಿ ಮಾಡಬೇಕು. ಅದ್ರಲ್ಲಿ 25 ಜನ ಪೊಲೀಸರು ಇರುವ ಹಾಗೇ ವ್ಯವಸ್ಥೆ ಮಾಡಬೇಕು.

7. ಪ್ರತಿ ಠಾಣೆಯಲ್ಲಿ ಬಿಸಿ ನೀರಿನ ವ್ಯವಸ್ಥೆ ಇರಬೇಕು. ಕುಡಿಯಲು, ಸ್ನಾನ, ಕೈಕಾಲು ತೊಳೆಯಲು ವ್ಯವಸ್ಥೆ ಮಾಡಬೇಕು. ಹಾಗೂ ಠಾಣೆಯಲ್ಲಿ ಮಾಸ್ಕ್, ಸ್ಯಾನಿಟೈಸರ್, ಫೇಸ್ ಶೀಲ್ಡ್ ಇರಬೇಕು.

8.ನಾವು ಉಪಯೋಗಿಸುವ ವಾಹನಗಳು ಪ್ರತಿದಿನ ಸ್ಯಾನಿಟೈಸ್ ಆಗಬೇಕು. ಬೆಂಕಿ ಅನಾಹುತ ಆಗದಂತೆ ಸ್ಯಾನಿಟೈಸ್ ಮಾಡಬೇಕು. ನಾವು ಕ್ವಾರಂಟೈನ್ ಅಗಿದ್ದೀವಿ ಅಂತ ಸಾರ್ವಜನಿಕರಿಗೆ ನಮ್ಮ ಸೇವೆಯಿಂದ ಕೊರತೆ ಆಗಬಾರದು.

9. ಸಾರ್ವಜನಿಕರಿಗೆ ಅಗತ್ಯ ಸೇವೆಗಳು ಒದಗಿಸಬೇಕು, ಗ್ಲೌಸ್ ಹಾಕಿಕೊಂಡು ದೂರದಲ್ಲಿ ನಿಂತು ಮಾತನಾಡಬೇಕು.

10.ಎಂಒಬಿ ಕಾರ್ಡ್ ಬಂಧಿಸೋದು ಬೇಡ, ತಾಂತ್ರಿಕವಾಗಿ ಅವರ ಮೇಲೆ ನಿಗಾ ಇಟ್ಟಿರಿ. ಅವರ ಮೇಲೆ ಹೆಚ್ಚಿನ ನಿಗಾ ಇಡಬೇಕು. ನಾವು ಸುಮ್ಮನೆ ಇದ್ದೀವಿ ಅಂತ ಸಮಾಜಘಾತುಕ ಶಕ್ತಿಗಳಿಗೆ ಅವಕಾಶ ಕೊಡಬಾರದು. ಇನ್ಸ್‌ಪೆಕ್ಟರ್ ಹಾಗೂ ಪಿಎಸ್ಐಗಳು ಗಮನ ಇಡಬೇಕು.

ನಮ್ಮ ಸಿಬ್ಬಂದಿಗೆ ಊಟ ತಿಂಡಿ ಸರಿಯಾಗಿ ಆಗಬೇಕು, ನಿನ್ನೆ ಆಸ್ಪತ್ರೆಯಲ್ಲಿ ಊಟದ ರೀತಿ ಮತ್ತೆ ಆಗಬಾರದು. ನಮ್ಮದು ಶಿಸ್ತಿನ ಇಲಾಖೆ ಅದನ್ನ ಪಾಲಿಸಬೇಕು.
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights