ದಿನನಿತ್ಯ ಸಾವಿರ ಗಡಿ ದಾಟಿತ ಸೋಂಕಿತ ಪ್ರಕರಣ; ಇಂದು ರಾಜ್ಯದಲ್ಲಿ 1,272 ಸೋಂಕಿತರ ಪತ್ತೆ!

ರಾಜ್ಯದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದ್ದು, ದಿನನಿತ್ಯ ಸೋಂಕಿನ ಪ್ರಕರಣಗಳು ಸಾವಿರದ ಗಡಿ ದಾಟುತ್ತಿವೆ. ಕಳೆದ 24 ಗಂಟೆ ಅವಧಿಯಲ್ಲಿ 1,272 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಇಂದಿಗೆ ಒಟ್ಟು 16,514 ಪ್ರಕರಗಳು ದಾಖಲಾಗಿವೆ . ಏಳು ಮಂದಿ ಸಾವನ್ನಪ್ಪಿದ್ಧಾರೆ. ಸಾವಿನ ಸಂಖ್ಯೆ 253ಕ್ಕೆ ಏರಿಕೆಯಾಗಿದೆ

ಬೆಂಗಳೂರು ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗುವುದು ಮುಂದುವರಿದಿದೆ. ಕಳೆದ 24 ಗಂಟೆಯಲ್ಲಿ ನಗರದಲ್ಲಿ 735 ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಬೆಂಗಳೂರಿನಲ್ಲಿ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 5,290ಕ್ಕೆ ಏರಿದಂತಾಗಿದೆ. ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯೇ 4,649 ಇದೆ.

19 ಜಿಲ್ಲೆಗಳಲ್ಲಿ ಇವತ್ತು ದಾಖಲಾದ ಪ್ರಕರಣಗಳು ಎರಡಂಕಿಗೂ ಹೆಚ್ಚಿರುವುದು ಗಮನಾರ್ಹ. ಬಳ್ಳಾರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚೂಕಡಿಮೆ ಶತಕದ ಗಡಿ ಸಮೀಪದ ಸಂಖ್ಯೆಯಷ್ಟು ಪ್ರಕರಣಗಳು ದಾಖಲಾಗಿವೆ.

ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ ಶತಕದ ಗಡಿ ಮುಟ್ಟಲು ಕೇವಲ 3 ಮಾತ್ರ ಬಾಕಿ ಇದೆ. ಆತಂಕದ ವಿಷಯವೆಂದರೆ ಬೆಂಗಳೂರಿನಲ್ಲಿ ಇವತ್ತು ದಾಖಲಾದ 700ಕ್ಕೂ ಹೆಚ್ಚು ಪ್ರಕರಣಗಳೆಲ್ಲವೂ ಯಕ್ಷಪ್ರಶ್ನೆಯಾಗಿಯೇ ಉಳಿದಿವೆ. ಸೋಂಕಿತರಿಗೆ ಹೇಗೆ ಸೋಂಕು ತಗುಲಿತು ಎಂಬುದನ್ನ ಪತ್ತೆ ಮಾಡಲು ಆಗಿಲ್ಲ. ಇದು ನಗರದಲ್ಲಿ ಸೋಂಕು ಸಾಮುದಾಯಿಕವಾಗಿ ಹರಡುತ್ತಿರುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.

ರಾಜ್ಯದಲ್ಲಿ ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 8,194 ಇದೆ. ಇದರಲ್ಲಿ 292 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights