ಚೀನಾ ಭೂ ಆಕ್ರಮಣ ಮಾಡಿದೆ ಎಂದು ಲಡಾಖ್‌ ಜನ ಹೇಳಿದರೆ; ಮೋದಿ ಬೇರೆಯೇ ಹೇಳುತ್ತಿದ್ದಾರೆ: ರಾಹುಲ್‌ಗಾಂಧಿ

ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಸಂಘರ್ಷದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇಂದು ವಾಗ್ದಾಳಿ ನಡೆಸಿದ್ದಾರೆ.

ಚೀನಾದವರು ನಮ್ಮ ಭೂಮಿ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾರೆ ಅಂತಾ ಲಡಾಖ್ ಜನರು ಹೇಳುತ್ತಿದ್ದರೆ ಪ್ರಧಾನಿ ಮೋದಿ ಇಲ್ಲ ಅನ್ನುತ್ತಿದ್ದಾರೆ. ಇವರಲ್ಲಿ ಯಾರೊ ಒಬ್ಬರು ಸುಳ್ಳು ಹೇಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಲಡಾಖ್ ನಲ್ಲಿ ಚೀನಾ ಭೂ ಪ್ರದೇಶವನ್ನು ಆಕ್ರಮಿಸಿಕೊಂಡಿದೆ ಎಂದು ಲಡಾಖ್ ಜನರು ಹೇಳುತ್ತಿರುವ ವಿಡಿಯೋವೊಂದನ್ನು ರಾಹುಲ್ ಗಾಂಧಿ ಟ್ವೀಟರ್ ನಲ್ಲಿ ಶೇರ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರಮೋದಿ ಇಂದು ಬೆಳಗ್ಗೆ ಲಡಾಖ್ ಗೆ ಭೇಟಿ ನೀಡಿ ಭೂ. ವಾಯು ಸೇನೆ ಹಾಗೂ ಇಂಡೋ -ಟಿಬೇಟಿಯನ್ ಗಡಿ ಪೊಲೀಸರೊಂದಿಗೆ ಸಂವಾದ ನಡೆಸಿದ ಬೆನ್ನಲ್ಲೇ,ರಾಹುಲ್ ಗಾಂಧಿ ಈ ರೀತಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಗಡಿ ವಿವಾದ ವಿಚಾರದಲ್ಲಿ ದೇಶದ ಭೂ ಪ್ರದೇಶವನ್ನು ಚೀನಾಕ್ಕೆ ಪ್ರಧಾನಿ ನರೇಂದ್ರ ಮೋದಿ ಬಿಟ್ಟುಕೊಟ್ಟಿದ್ದು, ಸುಳ್ಳು ಹೇಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights