ಯುಎಸ್ ಹೊಸ ನಿಯಮ : “ಆನ್‌ಲೈನ್ ಕ್ಲಾಸಸ್ ತೆಗೆದುಕೊಳ್ಳುವ ವಿದೇಶಿ ವಿದ್ಯಾರ್ಥಿಗಳು ತವರಿಗೋಗಿ”

ಸಂಪೂರ್ಣವಾಗಿ ಆನ್‌ಲೈನ್ ಕ್ಲಾಸಸ್ ತೆಗೆದುಕೊಳ್ಳುವ ವಿದೇಶಿ ವಿದ್ಯಾರ್ಥಿಗಳು ಯುನೈಟೆಡ್ ಸ್ಟೇಟ್ಸ್‌ನಿಂದ ಹೊರಹೋಗಬೇಕು ಎಂದು ಯುಎಸ್ ಸರ್ಕಾರ ಆದೇಶಿಸಿದೆ.

ಕೊರೊನಾ ಕಾಡಿಗಿಚ್ಚಿನಂತೆ ಹರಡುತ್ತಿರುವ ಬೆನ್ನಲ್ಲೆ ಯುಎಸ್ ನ ವಿದೇಶಿ ವಿದ್ಯಾರ್ಥಿಗಳ ಭವಿಷ್ಯ ಸೂಜಿ ಮೇಲಿನ ನಡಿಗೆಯಂತಾಗಿದೆ. ದಿನಕ್ಕೊಂದು ಹೊಸ ನಿಯಮಗಳು ಸರ್ಕಾರದ ಆದೇಶಗಳಿಗೆ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ. ಇದರ ಮದ್ಯ ಯುಎಸ್ ನ ಮತ್ತೊಂದು ಆದೇಶ ವಿದ್ಯಾರ್ಥಿಗಳಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.

ಕೊರೊನಾ ಸೋಂಕು ವೇಗವಾಗಿ ಹರಡುತ್ತಿರುವ ಬೆನ್ನಲ್ಲೇ ವಿದೇಶಿ ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್ ತೆಗೆದುಕೊಳ್ಳುವುದಾದರೆ ಯುಎಸ್ ನಿಂದ ಹೊರನಡೆಯುವಂತೆ ಸರ್ಕಾರ ತಿಳಿಸಿದೆ.

ವಲಸೆಯೇತರ ಎಫ್-1 ಮತ್ತು ಎಂ-1 ವಿದ್ಯಾರ್ಥಿಗಳು ಅಮೆರಿಕದಲ್ಲಿದ್ದುಕೊಂಡು ಸಂಪೂರ್ಣವಾಗಿ ಆನ್ ಲೈನ್ ಕೋರ್ಸ್ ಗಳಿಸಲು ಸಾಧ್ಯವಿಲ್ಲ. ತರಗತಿಗಳಿಗೆ ಹೋಗಬೇಕಾಗುತ್ತದೆ ಇಲ್ಲವೇ ಅವರು ತಮ್ಮ ದೇಶಗಳಿಗೆ ತೆರಳಬೇಕಾಗುತ್ತದೆ ಎಂದು ಅಮೆರಿಕ ವಲಸೆ ಮತ್ತು ಸುಂಕ ನಿರ್ದೇಶನಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಇತ್ತೀಚಿಗೆ ಯುವ ವಯಸ್ಕರಲ್ಲಿ ಕೋವಿಡ್ -19 ಹರಡುವಿಕೆ ಬಗ್ಗೆ ಕಳವಳ ಹೆಚ್ಚಾಗಿದ್ದು, ವಿಶ್ವವಿದ್ಯಾಲಯಗಳನ್ನು ಪುನಃ ತೆರೆಯಲು ಒತ್ತಡ ಕೂಡ ಹೆಚ್ಚಾಗುತ್ತಿದೆ.

ವಿಶ್ವದಲ್ಲಿ ಕೊರೊನಾ ಸೋಂಕು ಹೆಚ್ಚಿರುವ ದೇಶಗಳಲ್ಲಿ ಅಮೇರಿಕ ಮುಂಚುಣಿಯಲ್ಲಿದ್ದು ವಿದೇಶಿ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಬೇಕಾದ ಸಂದರ್ಭ ಬಂದರೆ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ಯುಎಸ್ ನ ಹೊಸ ನೀತಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights