ಜುಲೈ 24ರಿಂದ 31ರವರೆಗೆ ಎಲ್ಲಾ ಪ್ರವೇಶಗಳನ್ನು ಬಂದ್ ಮಾಡಿದ ಮೇಘಾಲಯ..
ದೇಶದಲ್ಲಿ ಕಡಿಮೆ ಕೊರೊನಾ ಸೋಂಕಿತರಿರುವ ರಾಜ್ಯಗಳ ಪಟ್ಟಿಯಲ್ಲಿ ಮೇಘಾಲಯ ನಾಲ್ಕನೇ ಸ್ಥಾನದಲ್ಲಿದ್ದು, ಅಲ್ಲಿನ ಸರ್ಕಾರ ಕೊರೊನಾ ನಿಯಂತ್ರಣದಲ್ಲಿ ಸಾಕಷ್ಟು ಶ್ರಮಿಸುತ್ತಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನೆಲ್ಲೆ ಮೇಘಾಲಯಕ್ಕೆ ಪ್ರವೆಶಿಸುವ ಎಲ್ಲಾ ಮಾರ್ಗಗಳು ಜುಲೈ 24ರಿಂದ 31ರವರೆಗೆ ಬಂದ್ ಆಗಲಿವೆ.
ದೇಶವು ಕಳೆದ 24 ಗಂಟೆಗಳಲ್ಲಿ 32,696 ಹೊಸ ಕೊರೊನಾ ಪ್ರಕರಣಗಳನ್ನು ದಾಖಲಿಸಿದೆ. ಆ ಮೂಲಕ ಭಾರತದಲ್ಲಿ ಕೋವಿಡ್ -19 ಸಂಖ್ಯೆ 9,68,876 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪ್ರಕಟಿಸಿದೆ. ಒಟ್ಟು ಸಾವಿನ ಸಂಖ್ಯೆ 24,915 ಕ್ಕೆ ಏರಿಕೆಯಾಗಿದೆ.
ದೇಶದ ಒಟ್ಟು ಕೊರೊನಾ ಸೋಂಕಿತ ಪ್ರಕರಣಗಳಲ್ಲಿ ಮೇಘಾಲಯದ ಪಾಲು ಕೇವಲ 337 ಇದ್ದು, ಇದರಲ್ಲಿ ಸಕ್ರಿಯ ಪ್ರಕರಣಗಳು 289 ಇವೆ. ಇವರಲ್ಲಿ 46 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಅತ್ಯಂತ ಕಡಿಮೆ ಸೋಂಕಿತರನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಮೇಘಾಲಯ ನಾಲ್ಕನೇ ರಾಜ್ಯವಾಗಿದೆ. ಜೊತೆಗೆ ಈ ಸಾಲಿನಲ್ಲಿ ಮಿಜೋರಾಂ, ಸಿಕ್ಕಿಂ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸೇರಿವೆ.
ದೇಶದಲ್ಲಿ ಜುಲೈ 15 ರವರೆಗೆ 1,27,39,490 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಅದರಲ್ಲಿ 3,26,826 ಮಾದರಿಗಳನ್ನು ಬುಧವಾರ ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.
ಜಾಗತಿಕವಾಗಿ ಕನಿಷ್ಠ 13,512,692 ಜನರು ಸೋಂಕಿಗೆ ಒಳಗಾಗಿದ್ದರೆ, ಇಲ್ಲಿಯವರೆಗೆ 583,359 ಜನರು ಸಾವನ್ನಪ್ಪಿದ್ದಾರೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಇತ್ತೀಚಿನ ಲೆಕ್ಕಾಚಾರದಲ್ಲಿ ತಿಳಿಸಲಾಗಿದೆ. ಯುನೈಟೆಡ್ ಸ್ಟೇಟ್ಸ್ ಕೆಟ್ಟ ಪೀಡಿತ ರಾಷ್ಟ್ರವಾಗಿ ಮುಂದುವರೆದಿದೆ. ನಂತರ ಬಾಜಿಲ್, ಭಾರತ, ರಷ್ಯಾ ಸಾಲಿನಲ್ಲಿವೆ. ಸಾಂಕ್ರಾಮಿಕ ರೋಗವು ಮೊದಲು ಭುಗಿಲೆದ್ದ ಚೀನಾದಲ್ಲಿನ ಆರ್ಥಿಕತೆಯು ಇತ್ತೀಚಿನ ತ್ರೈಮಾಸಿಕದಲ್ಲಿ ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಶೇಕಡಾ 3.2 ರಷ್ಟು ಏರಿಕೆಯಾಗಿದೆ.

