12 ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಅಂಟಿಕೊಂಡ ಅವಳಿ ಮಕ್ಕಳ ದೇಹ ಪ್ರತ್ಯೇಕಿಸಿದ 100 ವೈದ್ಯರ ತಂಡ..!

12 ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ 100 ವೈದ್ಯರ ತಂಡ 13 ತಿಂಗಳ ವಯಸ್ಸಿನ ಅವಳಿ ಹೆಣ್ಣುಮಕ್ಕಳನ್ನು ಯಶಸ್ವಿಯಾಗಿ ಪ್ರತ್ಯೇಕಿಸಿದೆ.ಸೊಂಟದಲ್ಲಿ ಒಟ್ಟಿಗೆ ಬೆಸೆದ 13 ತಿಂಗಳ ಟ್ರಕ್ ನ್ಹಿ ಮತ್ತು ಡಿಯು ನ್ಹಿ ಎಂಬ ಹೆಸರಿನ ಅವಳಿ ಹುಡುಗಿಯರನ್ನು ವಿಯೆಟ್ನಾಂನಲ್ಲಿ ವೈದ್ಯರು ಯಶಸ್ವಿಯಾಗಿ ಬೇರ್ಪಡಿಸಿದ್ದಾರೆ.

ಹೌದು… ವಿಯೆಟ್ನಾಂನಲ್ಲಿ ಹೋ ಚಿ ಮಿನ್ಹ್ ನಗರದ ಸಿಟಿ ಚಿಲ್ಡ್ರನ್ಸ್ ಆಸ್ಪತ್ರೆಯಲ್ಲಿ ಅವಳಿ ಹುಡುಗಿಯರ ದೇಹ ಬೇರ್ಪಡಿಸಲು 100 ವೈದ್ಯರ ತಂಡ 12 ಗಂಟೆಗಳ ಕಾಲ ಕೆಲಸ ಮಾಡಿದೆ. ನಂತರ ಟ್ರಕ್ ನ್ಹಿ ಮತ್ತು ಡಿಯು ನ್ಹಿ ಉತ್ತಮವಾಗಿದ್ದಾರೆ.

ಈ ಹೆಣ್ಣುಮಕ್ಕಳನ್ನು ಸಿಸೇರಿಯನ್ ಮೂಲಕ 33 ವಾರಗಳಲ್ಲಿ ಹೆರಿಗೆ ಮಾಡಲಾಯಿತು. ಹುಟ್ಟಿದಾಗ  ಮಕ್ಕಳು ಪ್ರತ್ಯೇಕವಾಗಿರಲಿಲ್ಲ. ಬದಲಿಗೆ ಹೊಕ್ಕುಳಬಳ್ಳಿಯಿಂದ ಇಬ್ಬರು ಮಕ್ಕಳ ದೇಹ ಅಂಟಿಕೊಂಡಿತ್ತು.  ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಮಕ್ಕಳಿಗೆ ಜನಿಸಿದ ನಂತರ ಆರೈಕೆಯ ಅಗತ್ಯವಿತ್ತು. ಕೆಲ ದಿನಗಳ ಬಳಿಕ ಅವಳಿಗಳ ತೂಕ ಮತ್ತು ಆರೋಗ್ಯ ಖಚಿತಪಡಿಸಿಕೊಂಡ ಆಸ್ಪತ್ರೆಯ ಒಂಬತ್ತು ವೈದ್ಯರ ಪ್ರಮುಖ ತಂಡ  2019 ರ ಜೂನ್‌ನಲ್ಲಿ ಪ್ರತ್ಯೇಕತೆಯ ಶಸ್ತ್ರಚಿಕಿತ್ಸೆಗೆ ಯೋಜಿಸಿ ಯಶಸ್ವಿಗೊಳಿಸಿದೆ. 

ಶಸ್ತ್ರಚಿಕಿತ್ಸೆ ಬಳಿಕ ಮಕ್ಕಳ ಚೇತರಿಕೆ ಕಷ್ಟಕರ ಮತ್ತು ಹೆಚ್ಚು ಸವಾಲಾಗಿದ್ದರು ವೈದ್ಯರ ಶಸ್ತ್ರಚಿಕಿತ್ಸೆ ಯಶಸ್ವಿಗೊಳಿಸಿದೆ. ಇದನ್ನು ವಿಯೆಟ್ನಾಂನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಎಂದು ಪರಿಗಣಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights