ನಾಳೆ ಜೆಡಿಎಸ್ ಪಕ್ಷದ ಶಾಸಕಾಂಗ ಸಭೆ : ಜೆಡಿಎಸ್ ವರಿಷ್ಠರಾದ ಹೆಚ್.ಡಿ ದೇವೇಗೌಡರಿಂದ ಪಾಠ
ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಆಯ್ಕೆ ಗೆ ಸಂಬಂಧಿಸಿದಂತೆ ಶಾಸಕರೊಂದಿಗೆ ಚರ್ಚೆ ಮಾಡಲು ಜೆಡಿಎಸ್ ಪಕ್ಷ ನಿರ್ಧಾರಿಸಿದ್ದು ನಾಳೆ ಶಾಸಕಾಂಗ ಸಭೆ ನಡೆಸಲು ಪಕ್ಷ ತೀರ್ಮಾನ ಮಾಡಿದೆ. ಸಭೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯ ಬಗೆಗೆ ಈಗಲಿಂದಲೇ ಕಾರ್ಯನಿರತರಾಗಲು ಶಾಸಕರೊಂದಿಗೆ ಮಾತುಕತೆ ಹಾಗೂ ಮಂಡಳಿ ಅಧ್ಯಕ್ಷ ಸ್ಥಾನ ಆಯ್ಕೆಯ ಬಗ್ಗೆ ಕೂಡ ಈ ವೇಳೆ ಚರ್ಚೆ ಮಾಡಲಾಗುತ್ತದೆ. ಈ ಸಭೆಗೆ ಶಾಸಕರು, ಎಂಎಲ್ ಸಿ ಹಾಗೂ ಪ್ರಮುಖರಿಗೆ ಆಹ್ವಾನ ನೀಡಲಾಗಿದೆ.
ಮುಂದಿನ ಲೋಕಸಭಾ ಚುನಾವಣೆಗೆ ಗೆಲ್ಲಲು ಎದುರಿಸಬೇಕಾದಂತ ಸವಾಲುಗಳು, ಕ್ಷೇತ್ರದ ಬಗ್ಗೆ ಪರಿಶೀಲನೆ, ಎಷ್ಟು ಕ್ಷೇತ್ರದಲ್ಲಿ ಜೆಡಿಎಸ್ ಬಲ ಸಾಧಿಸಬಹುದು..? ಅತೀ ಹೆಚ್ಚು ಸ್ಥಾನಗಳನ್ನು ಪಕ್ಷ ಪಡೆಯಲು ಜೆಡಿಎಸ್ ಶಾಸಕರು ಯಾವ ರೀತಿ ಕಾರ್ಯ ನಿರ್ವಹಿಸಬೇಕು ಎನ್ನುವದರ ಬಗ್ಗೆ ಜೆಡಿಎಸ್ ವರಿಷ್ಠರಾದ ಹೆಚ್.ಡಿ ದೇವೇಗೌಡರು ಪಾಠ ಮಾಡಲಿದ್ದಾರೆ.
ಸಭೆಯಲ್ಲಿ ಜೆಡಿಎಸ್ ವರಿಷ್ಠರಾದ ಹೆಚ್.ಡಿ ದೇವೇಗೌಡ ಹಾಗೂ ಸಿಎಂ ಕುಮಾರ್ ಸ್ವಾಮಿ ನೇತೃತ್ವದಲ್ಲಿ ನಡೆಸಲಾಗುತ್ತದೆ.
