ಯೆಸ್ ಬ್ಯಾಂಕ್ ಹಗರಣ: ರಾಣಾ ಕಪೂರ್‌ಗೆ ಸೇರಿದ 127 ಕೋಟಿ ಮೌಲ್ಯದ ಪ್ಲಾಟ್ ಜಪ್ತಿ!
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೆಸ್ ಬ್ಯಾಂಕ್‌ನ ಸಹ ಸಂಸ್ಥಾಪಕ ರಾಣಾ ಕಪೂರ್ ಅವರಿಗೆ ಸೇರಿದ 127 ಕೋಟಿ ಮೌಲ್ಯದ ಪ್ಲಾಟ್‌ಅನ್ನು ಜಾರಿ ನಿರ್ದೇಶನಾಲಯ (ಇಡಿ) ಜಪ್ತಿ ಮಾಡಿದೆ ಎಂದು ಹೇಳಲಾಗಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಲಂಡನ್‌ನ 77 ಸೌತ್ ಆಡ್ಲಿ ಸ್ಟ್ರೀಟ್‌ನಲ್ಲಿರುವ ರಾಣಾ ಕಪೂರ್ ಅವರಿಗೆ ಸೇರಿದ ಅಪಾರ್ಟ್‌ಮೆಂಟ್ (1)ನ ಆಸ್ತಿಯನ್ನು ಜಪ್ತಿ ಮಾಡುವಂತೆ ಜಾರಿ ನಿರ್ದೇಶನಾಲಯವು ತಾತ್ಕಾಲಿಕ ಆದೇಶವನ್ನು ಹೊರಡಿಸಿತ್ತು.
13.5 ಮಿಲಿಯನ್ ಪೌಂಡ್ (127 ಕೋಟಿ ರೂ) ಮೌಲ್ಯದ ಪ್ಲಾಟ್‌ಅನ್ನು ರಾಣಾ ಕಪೂರ್ ಅವರು 2017ರಲ್ಲಿ 9.9 ಮಿಲಿಯನ್ ಪೌಂಡ್ (93 ಕೋಟಿ ರೂ) ನೀಡಿ ಡಿಒಐಟಿ ಕ್ರಿಯೇಷನ್ಸ್ ಜರ್ಸಿ ಲಿಮಿಟೆಡ್ ಹೆಸರಿನಲ್ಲಿ ಖರೀದಿಸಿದ್ದರು. ಅಲ್ಲದೆ, ಆ ಕಂಪನಿಗೆ ಅವರೇ ಮಾಲೀಕರಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯವು ತಿಳಿಸಿದೆ.

ಈ ಆಸ್ತಿಯನ್ನು ಕಪೂರ್ ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದ್ದು, ಪಿಎಂಎಲ್‌ಎನ ಅಪರಾಧ ವಿಭಾಗಗಳ ಅಡಿಯಲ್ಲಿ ಜಪ್ತಿ ಮಾಡಲು ತೀರ್ಮಾನಿಸಿರುವ ಈ ಆಸ್ತಿಯನ್ನು ಮಾರಾಟ ಮಾಡಲು ಅಥವಾ ಖರೀದಿಸಲು ಸಾಧ್ಯವಿಲ್ಲ ಎಂದು ಘೋಷಣೆ ಹೊರಡಿಸಲು ಇಡಿ ನಿರ್ಧರಿಸಿದೆ.
ಕಾನೂನಿನ ಉಲ್ಲಂಘನೆ ಮತ್ತು ಕಪೂರ್‌ಗೆ ನೀಡಲಾದ ಉದ್ದೇಶಿತ ಕಿಕ್‌ಬ್ಯಾಕ್‌ಗಳಿಗೆ ಬದಲಾಗಿ ಯೆಸ್ ಬ್ಯಾಂಕ್ ವಿವಿಧ ಘಟಕಗಳಿಗೆ ಸಂಶಯಾಸ್ಪದ ಬಹು ಕೋಟಿ ಸಾಲಗಳನ್ನು ನೀಡಿದೆ ಎಂದು ಇಡಿ ಆರೋಪಿಸಿದೆ. ಅಲ್ಲದೆ, ಅವರ ಕುಟುಂಬದ ಹಲವರ ಮೇಲೆ ದೂರು ದಾಖಲಿಸಿದೆ.
ಇದನ್ನೂ ಓದಿ: ಶಾಹಿನ್‌ಬಾಗ್ ಪ್ರತಿಭಟನೆಯ ಅಜ್ಜಿ ‘ಬಿಲ್ಕೀಸ್’ 2020ರ ಪ್ರಭಾವಶಾಲಿ ವ್ಯಕ್ತಿ!

