ಸಿಎಂ ಬಿಎಸ್‌ವೈ, ಪುತ್ರ ವಿಜಯೇಂದ್ರ ವಿರುದ್ಧ ಸಿದ್ದು, ಡಿಕೆಶಿ ಗಂಭೀರ ಆರೋಪ! ಮಾಧ್ಯಮಗಳಿಂದ ಮರೆಯಾಯಿತು ಆ ಸುದ್ದಿ!

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮೂರು ದಿನಗಳ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಮಗನ ವಿರುದ್ಧ ಮಾಡಿರುವ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದಷ್ಟೇ ಹೊರಬರಲು ಸಾಧ್ಯ.

ಆದರೆ ಈ ಸುದ್ದಿಯನ್ನು ಮೊದಲೇ ಪ್ರಸಾರ ಮಾಡಿದ್ದ ಒಂದು ಚಾನೆಲ್ ಹೊರತುಪಡಿಸಿ ಉಳಿದೆಲ್ಲ ಚಾನೆಲ್ ಗಳು ಆ ಬಗ್ಗೆ ದಿವ್ಯವಾದ ಮೌನ ತಾಳಿವೆ.

ವಾರ್ತಾಭಾರತಿ ಮತ್ತು ಪ್ರಜಾವಾಣಿ ಪತ್ರಿಕೆಯನ್ನು (ಒಳಪುಟದಲ್ಲಿನ ನಾಲ್ಕು ಪ್ಯಾರಾ ಸುದ್ದಿ) ಬಿಟ್ಟು ಬೇರೆ ಯಾವ ಕನ್ನಡ ಪತ್ರಿಕೆಗಳಲ್ಲಿ ಈ ಸುದ್ದಿ ನನಗೆ ಕಾಣಲಿಲ್ಲ. ಇಂಗ್ಲೀಷ್ ಪತ್ರಿಕೆಗಳೇ ವಾಸಿ, ಟೈಮ್ಸ್, ಇಂಡಿಯನ್ ಎಕ್ಸ್ ಪ್ರೆಸ್ ,ಡೆಕ್ಕನ್ ಹೆರಾಲ್ಡ್ ಗಳಲ್ಲಿ ಸುದ್ದಿ ಪ್ರಕಟವಾಗಿವೆ. ಅಚ್ಚರಿಯ ಸಂಗತಿಯೆಂದರೆ ದಿ ಹಿಂದೂ ಪತ್ರಿಕೆಯೇ ಈ ಸುದ್ದಿಯನ್ನು ಕೈಬಿಟ್ಟಿದೆ.

ಈ ಸುದ್ದಿಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರ ಕಾರಿನ ಮೇಲೆ ಕೂತ ಕಾಗೆಯ ಸುದ್ದಿಗೆ ಸಿಕ್ಕ ಮಹತ್ವವೂ ಸಿಗಲಿಲ್ಲ.
ರಾಜಕಾರಣಿಗಳು ಪರಸ್ಪರ ಮಾಡುವ ಆರೋಪಗಳ ಸತ್ಯಾಸತ್ಯತೆ ತನಿಖೆಯ ನಂತ ತಿಳಿದ ನಂತರವಷ್ಟೇ ಅದನ್ನು ಮಾಧ್ಯಮಗಳು ಪ್ರಸಾರ/ಪ್ರಕಟಣೆ ಮಾಡಬಹುದೆಂಬ ನೀತಿ ಸಂಹಿತೆಯನ್ನೇನಾದರೂ ಕರ್ನಾಟಕದ ಮಾಧ್ಯಮಗಳು ಹೊಸದಾಗಿ ಅಳವಡಿಸಿಕೊಂಡಿವೆಯೇ?

ನನ್ನ ಅನುಭವದ ಪ್ರಕಾರ ಈ ರೀತಿ ರಾಜಕೀಯ ಪಕ್ಷದ ಪ್ರಮುಖ ನಾಯಕರ ಪತ್ರಿಕಾಗೋಷ್ಠಿಯ ಸುದ್ದಿಯನ್ನು ಪ್ರಸಾರ ಮಾಡದೆ ಇರುವುದು ಇದೇ ಪ್ರಥಮ.

ಮೂರು ದಿನಗಳ ಹಿಂದೆ ಕಾಂಗ್ರೆಸ್‌ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲ್, “ಬಿಡಿಎ ಟೆಂಡರ್‌ನಲ್ಲಿ ಭ್ರಷ್ಟಾಚಾರ ನಡೆದಿದೆ. ಮುಖ್ಯಮಂತ್ರಿ, ಅವರ ಪುತ್ರ ವಿಜಯೇಂದ್ರ, ಅಳಿಯ ವಿರೂಪಾಕ್ಷಪ್ಪ ಮರಡಿ, ಮೊಮ್ಮಗ ಶಶಿಧರ ಮರಡಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಗುತ್ತಿಗೆದಾರ ನಡುವೆ ಲಂಚದ ವ್ಯವಹಾರ ನಡೆದಿದೆ. ಕೊಲ್ಕತ್ತಾ, ಬೆಂಗಳೂರಿಗೆ ಆರ್‌ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡಲಾಗಿದೆ. ಇದು ಕೇವಲ ಆರೋಪವಲ್ಲ, ಸತ್ಯ. ಎಲ್ಲವೂ ಸ್ಟಿಂಗ್ ಆಪರೇಷನ್‌ಲ್ಲಿ ಬಯಲಾಗಿದೆ. ಇದಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳು ನಮ್ಮಲ್ಲಿವೆ. ಇಷ್ಟೆಲ್ಲ ಇದ್ದರೂ ಮುಖ್ಯಮಂತ್ರಿ ಸ್ಥಾನದಲ್ಲಿ ಹೇಗೆ ಮುಂದುವರಿಯುತ್ತಾರೆ. ಅವರು ರಾಜೀನಾಮೆ ನೀಡಲೇಬೇಕು” ಎಂದು ಹೇಳಿದ್ದಾರೆ.

– ಆದಿನಾರಾಯಣ


ಇದನ್ನೂ ಓದಿ: ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಎಸ್‌ವೈ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಸುರ್ಜೇವಾಲ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights