ಉಪಚುನಾವಣೆ: ತೂಗುಗತ್ತಿ ಮೇಲೆ ಬಿಎಸ್ವೈ; ಡಿಕೆಶಿಗೆ ಸವಾಲು, ಹೆಚ್ಡಿಕೆಗೆ ಪ್ರತಿಷ್ಠೆ!
ಅತ್ತ ಕೊರೊನಾ ಸಂಕಟ ಮರೆತು ಜನ ದಿನನಿತ್ಯದ ಜಂಜಾಟದಲ್ಲಿ ಮುಳಗಿದ್ದಾರೆ, ಸ್ಯಾಂಡಲ್ ವುಡ್ ನಲ್ಲಿನ ಡ್ರಗ್ಸ್ ಪ್ರಕರಣ ಕಾವು ಕಳೆದುಕೊಳ್ಳುತ್ತಿದೆ, ಇತ್ತ ಎರಡು ಕ್ಷೇತ್ರಗಳ ಉಪಚುನಾವಣೆ ಯ ಕಾವು ಏರತೊದಗಿದೆ.. ರಾಜಕೀಯವಾಗಿ ಭಾರೀ ಕುತೂಹಲ ಕೆರಳಿಸಿರುವ ಈ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮೂರೂ ಪ್ರಮುಖ ಪಕ್ಷಗಳು ಒಳೇಟಿನ ಭೀತಿ ಎದುರಿಸುತ್ತಿವೆ.
ಮಾಜಿ ಶಾಸಕ ಮುನಿರತ್ನ ಅವರ ರಾಜೀನಾಮೆ ಮತ್ತು ಶಾಸಕರಾಗಿದ್ದ ಸತ್ಯನಾರಾಯಣ ಅವರ ನಿಧನದಿಂದಾಗಿ ತೆರವಾಗಿರುವ ಆರ್ಆರ್ ನಗರ ಹಾಗೂ ಶಿರಾ ಕ್ಷೇತ್ರಗಳಿಗೆ ನವೆಂಬರ್ 3ರಂದು ಚುನಾವಣೆ ನಿಗದಿಯಾಗಿದೆ. ಬಾಲ್ಕಿ ಮತ್ತು ಬಸವಕಲ್ಯಾಣ ಕ್ಷೇತ್ರಗಳ ಚುನಾವಣೆ ದಿನಾಂಕ ಇನ್ನು ಪ್ರಕಟವಾಗಿಲ್ಲ..
ಮೂರೂ ಪಕ್ಷಗಳಿಗೆ ಈ ಚುನಾವಣೆ ಒಂದಿಲ್ಲೊಂದು ಕಾರಣಕ್ಕೆ ಮಹತ್ವ ಪಡೆದುಕೊಂಡಿದೆ. ರಾಜೀನಾಮೆ ನೀಡುವ ಮುನ್ನ ಮುನಿರತ್ನ ಕಾಂಗ್ರೆಸ್ ಶಾಸಕರಾಗಿದ್ದರು. ಈಗ ಬಿಜೆಪಿಯಲ್ಲಿದ್ದಾರೆ. ಶಿರಾದಲ್ಲಿ ಜಯಚಂದ್ರ ಕಳೆದ ಬಾರಿ ಸೋಲನುಭವಿಸಿದ್ದರೇ ಈಗ ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.
ಇದಕ್ಕಿಂತ ಮಿಗಿಲಾಗಿ ಕೆಪಿಸಿಸಿ ಅಧ್ಯಕ್ಷತೆ ವಹಿಸಿಕೊಂಡ ಬಳಿಕ ಡಿಕೆ ಶಿವಕುಮಾರ್ ಅವರಿಗೆ ಎದುರಾಗಿರುವ ಮೊದಲ ಮತ ಸಮರ ಇದಾಗಿದ್ದು, ತಮ್ಮ ಪವರ್ ತೋರಿಸಬೇಕಿದೆ. ಮುಖ್ಯಮಂತ್ರಿ ಪಟ್ಟದ ಮೇಲೆ ತೂಗುಗತ್ತಿ ತೂಗುತ್ತಿರುವ BS ಯಡ್ಯೂರಪ್ಪನಿಗೆ ತಮ್ಮ ಖುರ್ಚಿ ಉಳಿಸಿಕೊಳ್ಳುವುದರ ಜೊತೆಗೆ ಮಗನ ಮೇಲಿರುವ ಭ್ರಷ್ಟಾಚಾರದ ಆರೋಪಕ್ಕು ಉತ್ತರ ಕೋಡಬೇಕಿದೆ..
ಇದೆಲ್ಲದರ ನಡುವೆಯೇ ಪಕ್ಷಗಳಿಗೆ ಒಳೇಟಿನ ಭೀತಿ ಕಾಡುತ್ತಿದೆ. ಸ್ವಪಕ್ಷೀಯರಿಂದಲೇ ಅಧಿಕೃತ ಅಭ್ಯರ್ಥಿಗಳಿಗೆ ತೊಡಕು ಎದುರಾಗುವ ಆತಂಕ 3ವಪಕ್ಷಗಳನ್ನೂ ಕಾಡುತ್ತಿದೆ. RR ನಗರದಲ್ಲಿ ಬಿಜೆಪಿ ಮುನಿರತ್ನ ಅವರಿಗೆ ಟಿಕೆಟ್ ನೀಡುವುದು ಬಹುತೇಕ ಖಚಿತ. ಈ ಬಗ್ಗೆ ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ.
ಆದರೆ ಕಳೆದ ಚುನಾವಣೆಯಲ್ಲಿ ಮುನಿರತ್ನ ವಿರುದ್ಧ ಸ್ಪರ್ಧಿಸಿದ್ದ ಮತ್ತು ಅಕ್ರಮ ಮತಪತ್ರ ಹಂಚಿಕೆ ಆರೋಪ ಮಾಡಿದ್ದ ತುಳಸಿ ಮುನಿರಾಜು ಗೌಡ ಈ ಬಾರಿ ಮುನಿರತ್ನ ಅವರಿಗೆ ಬಿಚ್ಚು ಮನಸ್ಸಿನ ಬೆಂಬಲ ನೀಡುವು ಬಗ್ಗೆ ಯಾರಿಗೂ ಖಾತರಿ ಇಲ್ಲ.
ಶಿರಾದಲ್ಲಿ ಮಾಜಿ ಶಾಸಕ ರಾಜಣ್ಣ ಮನವೊಲಿಸಿ ಜಯಚಂದ್ರ ಅವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಮುಂದಾಗಿದ್ದರೂ ಇಬ್ಬರ ನಡುವಿನ ಹಳೆಯ ಮನಸ್ತಾಪಗಳು ಸಂಪೂರ್ಣವಾಗಿ ಕರಗುತ್ತದೆ ಎಂಬ ವಿಶ್ವಾಸ ಇಲ್ಲ. ಇದೇ ಮೊದಲ ಬಾರಿ ಶಿರಾದಲ್ಲಿ ತನ್ನ ಬಾವುಟ ಹಾರಿಸುವ ತವಕದಲ್ಲಿರುವ ಬಿಜೆಪಿಗೆ ಅಭ್ಯರ್ಥಿ ಆಯ್ಕೆಯೇ ಕಗ್ಗಂಟಾಗಿದೆ.
ನೆರೆಯ ಹಿರಿಯೂರಿನ ಶಾಸಕಿ ಪೂರ್ಣಿಮಾ ಅವರ ಪತಿ ಶ್ರೀನಿವಾಸ್ ಅವರನ್ನು ಕರೆತರುವ ಯೋಚನೆ ದಟ್ಟವಾಗಿದೆ. ಆದರೆ ಇದಕ್ಕೆ ಸ್ಥಳೀಯ ಮುಖಂಡರ ಸಹಕಾರ ಇದ್ದಂತಿಲ್ಲ.
ಇನ್ನು ಸತ್ಯನಾರಾಯಣ ಅವರ ಪುತ್ರ ಸತ್ಯಪ್ರಕಾಶ್ ಅವರಿಗೆ ಟಿಕೆಟ್ ನೀಡುವ ಬಗ್ಗೆ ಜೆಡಿಎಸ್ ಸಹ ಗೊಂದಲದಲ್ಲಿದೆ. ಒಂದು ವೇಳೆ ಅವರಿಗೇ ಟಿಕೆಟ್ ನೀಡಿದರೇ ಕ್ಷೇತ್ರ ಉಳಿಸಿಕೊಳ್ಳಲು ಹೆಣಗಬೇಕಾಗುತ್ತದೆ ಎಂಬುದು ಜೆಡಿಎಸ್ ನಾಯಕರ ಲೆಕ್ಕಾಚಾರ.
ಒಟ್ಟಿನಲ್ಲಿ ಈ ಎರಡು ಕ್ಷೇತ್ರಗಳ ಉಪ ಚುಣಾವಣೆ ರಾಜಕೀಯ ಪಕ್ಷಗಳಲ್ಲಿ ಸಂಚಲನ ಮೂಡಿಸಿರುವುದಂತೂ ಸ್ಪಷ್ಟ. ಮತದಾರನ ಒಲವು ಯಾರಿಗೆ ಅನ್ನುವುದಿ ನವೆಂಬರ್ 10ಕ್ಕೆ ತಿಳಿಯಲಿದೆ.
ಇದನ್ನೂ ಓದಿ: Fact Check: ಅಮೆರಿಕಾ ಬಸ್ ಮೇಲೆ ಅಂಬೇಡ್ಕರ್ ಮತ್ತು ಅವರ ಪತ್ನಿಯ ಫೋಟೋ ಅಳವಡಿಸಲಾಗಿದೆಯೇ?

