ಮಹಾತ್ಮ ಗಾಂಧಿಯನ್ನು ಕೊಂದ ಗೋಡ್ಸೆ ಬಿಜೆಪಿಗರ ಆರಾಧ್ಯ ದೈವ: ಸಿದ್ದರಾಮಯ್ಯ

ಮಹಾತ್ಮಾ ಗಾಂಧಿಯನ್ನು ಕೊಂದ ಮತಾಂಧ ನಾಥುರಾಮ್ ಗೋಡ್ಸೆ ಬಿಜೆಪಿ ಹಾಗೂ ಆರ್​ಎಸ್​ಎಸ್​ನ ಆರಾಧ್ಯ ದೈವ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ್‌ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ಕಾಂಗ್ರೆಸ್ ಸೇವಾದಳದ ಆಯೋಜಿಸಿದ್ದ ಗಾಂಧಿ ಜಯಂತಿಯಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸಮಾಜದಲ್ಲಿ ಜಾತಿ-ಜಾತಿಗಳ ನಡುವೆ ಒಡಕು ತಂದು, ಧರ್ಮಗಳ ನಡುವೆ ಕೋಮು ಗಲಭೆ ಮಾಡಿಸುವುದೇ ಬಿಜೆಪಿ ಪಕ್ಷದ ಕೆಲಸವಾಗಿದೆ. ಸಂವಿಧಾನವು ಇಂದು ಕೋಮುವಾದಿಗಳ ಕೈಯಲ್ಲಿ ಇದೆ. ಅದನ್ನ ರಕ್ಷಣೆ ಮಾಡುವ ಕೆಲಸ ಆಗಬೇಕಿದೆ ಎಂದು ಹೇಳಿದ್ದಾರೆ.

ಬಾಬಾಸಾಹೇಬರ ಮೂರ್ತಿ ಕಡವಬೇಕು. ಸಂವಿಧಾನವನ್ನು ಸುಟ್ಟ ಹಾಕಬೇಕು ಎಂದು ಅಪ್ರಜ್ಞಾವಂತ ತೇಜಸ್ವಿ ಸೂರ್ಯ ಇಂದು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಅಲ್ಲದೆ ಸಿಎಂ ಯಡಿಯೂರಪ್ಪನವರ ಮೊಮ್ಮಗ ಆರ್​​ಟಿಜಿಎಸ್​​ ಮೂಲಕ ಲಂಚ ಪಡೆದಿದ್ದಾರೆ. ಆದರೂ ಯಡಿಯೂರಪ್ಪ ಮಾತ್ರ ರಾಜೀನಾಮೆ ಕೊಡುತ್ತಿಲ್ಲ. ಸಾಕ್ಷಿ ತೋರಿಸಿ ರಾಜೀನಾಮೆ ಕೊಡುತ್ತೇನೆ ಅಂತಾರೆ. ಪ್ರೂಫ್ ಮಾಡಲು ತನಿಖೆ ನಡೆಸುವವರು ಯಾರು. ಮೊದಲು ತನಿಖೆಯಾಗಲಿ ಸಾಬೀತಾಗದೇ ಇದ್ದಲ್ಲಿ ನಾನು ರಾಜೀನಾಮೆ ಕೊಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಧಾನ ಪರಿಷತ್​ ಸದಸ್ಯ ಬಿ ಕೆ ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸತೀಶ್ ಜಾರಕಿಹೋಳಿ ಸೇರಿದಂತೆ ಕಾಂಗ್ರೆಸ್‌ನ ನಾಯಕರು ಭಾಗಿಯಾಗಿದ್ದಾರೆ.


ಇದನ್ನೂ ಓದಿ: ಕೃಷಿ ಮಸೂದೆ ವಿರೋಧಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹರ್ಸಿಮ್ರತ್ ಕೌರ್ ಬಂಧನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights