ಮಹಾರಾಷ್ಟ್ರ: ಕಾಣೆಯಾಗಿದ್ದ 56 ಯುವತಿಯರು ಮರಳಿ ಮನೆಗೆ!

2020 ರಲ್ಲಿ ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ನಾಪತ್ತೆಯಾಗಿದ್ದ 56 ಯುವತಿಯರನ್ನು ಮರಳಿ ಅವರ ಕುಟುಂಬಗಳಿಗೆ ಸೇರಿಸಲಾಗಿದೆ ಎಂದು ಮಹಾರಾಷ್ಟ್ರ ಪೊಲೀಸರು ಶನಿವಾರ ತಿಳಿಸಿದ್ದಾರೆ.

ನಾಪತ್ತೆಯಾಗಿದ್ದ ಒಟ್ಟು 57 ಯುವತಿಯಲ್ಲಿ 56 ಯುವತಿಯರನ್ನು ಪತ್ತೆ ಮಾಡಲಾಗಿದೆ. ಒಬ್ಬ ಯುವತಿ ಇನ್ನೂ ಸಿಕ್ಕಿಲ್ಲ. ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ 56 ಯುವತಿಯರಲ್ಲದೆ, ಇದೇ ಕರಾವಳಿ ಭಾಗದಲ್ಲಿ ಕಾಣೆಯಾಗಿದ್ದ 14 ಬಾಲಯರನ್ನು ಸಹ ಪತ್ತೆ ಹಚ್ಚಲಾಗಿದ್ದು, ಅವರನ್ನೂ ಅವರ ಕುಟುಂಬಗಳಿಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2020ರಲ್ಲಿ 57 ಯುವತಿಯರು ಕಾಣೆಯಾಗಿದ್ದರು. ಇವರೆಲ್ಲರೂ 18 ವರ್ಷ ಮೇಲ್ಪಟ್ಟವರು ಎಂದು ಹೇಳಲಾಗಿದ್ದು, ಈ ಪೈಕಿ ಹಲವರು ತಮ್ಮ-ತಮ್ಮ ಪ್ರಿಯಕರೊಂದಿಗೆ ಓಡಿಹೋಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಕಾಣೆಯಾಗಿದ್ದವರ ಬಗ್ಗೆ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು. ಕಾಣೆಯಾದದ ಯುವತಿಯಲ್ಲಿ 56 ಮಂದಿ ಪತ್ತೆಯಾಗಿದ್ದು, ಅವರನ್ನು ಅವರವರ ಮನೆಗಳಿಗೆ ಸೇರಿಸಲಾಗಿದೆ. ಒಬ್ಬ ಯುವತಿ ಮಾತ್ರ ಇನ್ನೂ ಸಿಕ್ಕಿಲ್ಲ ಎಂದು ಪೊಲೀಸ್‌ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ; ಪ್ರಕರಣದಿಂದ BJP ಮಾಜಿ ಸಚಿವ ಖುಲಾಸೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights