‘ಇಲ್ಲಿ ಯಾವ ಬಂಡೆ ಆಟನೂ ನಡೆಯಲ್ಲ’- ಡಿಕೆ ಶಿವಕುಮಾರ್ಗೆ ಆರ್.ಅಶೋಕ್ ಟಾಂಗ್!
ಒಡೆದ ಮನೆಯಾಗಿರುವ ಬಿಜೆಪಿ ಪಕ್ಷದಲ್ಲಿ ಮುಖನಿವಾಸಿಗಳು ಮತ್ತು ವಲಸಿಗರು ನಡುವಿನ ಮುಸುಕಿನ ಗುದ್ದಾಟ ಬಯಲಿಗೆ ಬಂದು ಬಹಳ ದಿನಗಳೆ ಆದವು.. ಇಗ ಬಂದಿರುವ ಯಪಚುನಾವಣೆಯ ಹಿನ್ನೆಲೆಯಲ್ಲಿ ಅದರ ಪರಿಣಾಮ ಸ್ಪಷ್ಟವಾಗಿ ದಂಡುಬರುತ್ತಿದೆ.. ಈ ಎಲ್ಲ ಗೊಂದಲದ ಮಧ್ಯ ಮತದಾರರ ಒಲವು ಗಳಿಸಲು ಹೊರಟಿದೆ ಕಮಲ ಪಕ್ಷ…
ಆರ್.ಆರ್ ನಗರದಲ್ಲಿ ಪ್ರತಿಷ್ಟೆಯಾಗಿ ತೆಗೆದುಕೊಂಡಿರುವ ಕಂದಾಯ ಸಚಿವ ಆರ್.ಅಶೋಕ್ ನಾನೇ ಅಭ್ಯರ್ಥಿ. ಇಲ್ಲಿ ಯಾವ ಬಂಡೆ ಆಟನೂ ನಡೆಯಲ್ಲ. ಅವರ ಆಟ ಏನಿದ್ದರೂ ಕನಕಪುರದಲ್ಲಿ ಮಾತ್ರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಟಾಂಗ್ ನೀಡಿದ್ದಾರೆ.
ಜಿದ್ದಾಜಿದ್ಧಿನ ಕಣವಾಗಿ ಮಾರ್ಪಟ್ಟಿರುವ ಆರ್.ಆರ್ ನಗರ ಉಪಚುನಾವಣಾ ಕಣದಲ್ಲಿ ಈಗಾಗಲೇ ಮೂರು ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಮಧ್ಯೆ ಬಿಜೆಪಿ ಅಭ್ಯರ್ಥಿ ಮುನಿರತ್ನ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಸಚಿವ ಆರ್ ಅಶೋಕ್, ಆರ್.ಆರ್ ನಗರದಲ್ಲಿ ನಾನೇ ಅಭ್ಯರ್ಥಿ.ಇಲ್ಲಿ ಯಾವ ಬಂಡೆ ಕಲ್ಲು ಇಲ್ಲ. ಬಂಡೆ ಕಲ್ಲು ಏನೇ ಇದ್ದರೂ ಅದು ಕನಕಪುರದಲ್ಲಿ ಮಾತ್ರ . ಇಲ್ಲಿ ಅವರ ಆಟ ನಡೆಯಲ್ಲ ಎಂದು ಕುಟುಕಿದರು.
ಡಿ.ಕೆ ಶಿವಕುಮಾರ್ ನಮ್ಮನ್ನ ನೋಡಿ ಮತ ಹಾಕಿ ಎನ್ನುತ್ತಾರೆ. ಆದರೆ ಮುನಿರತ್ನ ಅವರ ಕೆಲಸವನ್ನ ನೋಡಿ. ಆರ್.ಆರ್ ನಗರ ಅಭಿವೃದ್ಧಿಯಾಗಿದೆ. ಹೀಗಾಗಿ ಮುನಿರತ್ನ ಗೆಲ್ಲಿಸಿ ಎಂದು ಆರ್.ಅಶೋಕ್ ಹೇಳಿದರು.

