ನೆರೆ ಸಂತ್ರಸ್ತರ ನೆರವಿಗೆ ದಾವಿಸಿದ ರಾಜ್ಯ ಸರ್ಕಾರ : ಪರಿಹಾರ ಮೊತ್ತ ಹೆಚ್ಚಳ..!

ನೆರೆ ಸಂತ್ರಸ್ತರ ನೆರವಿಗೆ ದಾವಿಸಿದ ರಾಜ್ಯ ಸರ್ಕಾರ ಇಂದು ಪರಿಹಾರ ಮೊತ್ತವನ್ನು ಹೆಚ್ಚಳ ಮಾಡಿದೆ.

ರಾಜ್ಯಾದ್ಯಂತ ಭಾರೀ ಮಳೆಗೆ ಸಾಕಷ್ಟು ಆಸ್ತಿ- ಪಾಸ್ತಿ ಹಾನಿಯಾಗಿ ಜನ ಸಂಕಷ್ಟದಲ್ಲಿದ್ದಾರೆ. ನಿನ್ನೆ ರಾತ್ರಿಯಿ ಸುರಿದಂತ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ತಗ್ಗುಪ್ರದೇಶದ ಮನೆಗಳು ಸಂಪೂರ್ಣ ಜಲಾವೃತವಾಗಿವೆ. ಇಂದು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆಗೆ ತೆರಳಿದ ಸಿಎಂ ಯಡಿಯೂರಪ್ಪ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ರಾಜ್ಯಾದ್ಯಂತ 9ಕ್ಕೂ ಹೆಚ್ಚು ಜನ ಪ್ರವಾಹದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಪ್ರಾಣಿಗಳ ಪರದಾಟ ಕೇಳೋರೇ ಇಲ್ಲದಂತಾಗಿದೆ.

ಮಳೆಗೆ ಜನ ಮನೆಗಳೆದುಕೊಂಡು ಬೀದಿಪಾಲಾಗಿದ್ದಾರೆ. ನೆರೆ ಸಂತ್ರಸ್ತರ ನೆರವಿಗೆ ದಾವಿಸಿದ ರಾಜ್ಯ ಸರ್ಕಾರ 75% ಮನೆ ಹಾನಿಯಾಗಿದ್ದರೆ ಹೊಸ ಮನೆ ಕಟ್ಟಲು 5 ಲಕ್ಷ ಪರಿಹಾರ ಘೋಷಣೆ ಮಾಡಿದೆ. 15% ರಿಂದ 25% ರಿಂದ ಮನೆ ಹಾನಿಯಾಗಿದ್ದರೆ ಅಂತವರಿಗೆ 3 ಲಕ್ಷ ಪರಿಹಾರ ಮತ್ತು ಅಲ್ಪ ಸ್ವಲ್ಪ ಹಾನಿಯಾಗಿದ್ದರೆ 30 ಸಾವಿರ ಪರಿಹಾರ ನೀಡಲು ಮುಂದಾಗಿದೆ.

ರಾಜ್ಯ ಸರ್ಕಾರ ಹೈದರಾಬಾದ್ ಕರ್ನಾಟಕದ ಪ್ರವಾಹ ಸಂತ್ರಸ್ತರನ್ನು ಭೇಟಿಯಾಗಲಿರುವ ಸಿಎಂ ಬಳ್ಳಾರಿಗೆ ತೆರಳಿ ವೈಮಾನಿಕ ಸಮೋಕ್ಷೆ ನಡೆಸಲಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights