ಗೋಸ್ವಾಮಿಯನ್ನು ಸಮರ್ಥಿಸಿಕೊಳ್ಳಲು ಸುಳ್ಳು ಸುದ್ದಿ ಪ್ರಕಟಿಸಿದ OpIndia ಸುದ್ದಿಸೈಟ್!‌

ಸುಳ್ಳು ಸುದ್ದಿ , ಕೋಮು ದ್ವೇಷ, ಟಿಆರ್‌ಪಿ ಹಗರಣಗಳಂತಹ ಸಾರಾಸಗಟು ಆರೋಪಗನ್ನು ರಿಪಬ್ಲಿಕ್‌ ಟಿವಿ ಎದುರಿಸುತ್ತಿದೆ. ಈ ನಡುವೆ 2018 ರಲ್ಲಿ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ರಿಪಬ್ಲಿಕ್‌ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಗೋಸ್ವಾಮಿಯನ್ನು ಸಮರ್ಥಿಸಿಕೊಂಡು ಸಾಕಷ್ಟು ಸುದ್ದಿಗಳನ್ನು ಮಾಡುತ್ತಿರುವ ಬಿಜೆಪಿಯ ಕರಪತ್ರವೆಂದೇ ಖ್ಯಾತಿ ಪಡೆದಿರುವ OpIndia.com ವೆಬ್‌ಸೈಟ್‌ ಅನರ್ಬ್ ವಿಚಾರದಲ್ಲಿ ಹೆಜ್ಜೆ ಹೆಜ್ಜೆಗೂ ಸ್ಟೋರಿ ಮಾಡುತ್ತಿದ್ದು, ಸುಳ್ಳು ಸುದ್ದಿಯನ್ನು ಪ್ರಕರಟಿಸಿದೆ.

ನ್ಯಾಯಾಂಗ ಬಂಧನದಲ್ಲಿರುವ ಗೋಸ್ವಾಮಿ ಅವರು ಅನುಮತಿ ಇಲ್ಲದೆ ಮೊಬೈಲ್‌ ಮತ್ತು ಸಾಮಾಜಿಕ ಜಾಲತಾಣವನ್ನು ಬಳಸುತ್ತಿದ್ದರು ಎಂದು ಹೇಳಿದ್ದ ಬೆನ್ನಲ್ಲೇ ಆ ಬಗ್ಗೆ ಸ್ಟೋರಿ ಮಾಡಿದ್ದ OpIndia.com ಅನಾರ್ಬ್ ಗೋಸ್ವಾಮಿ ಅವರು ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಖಾತೆಯನ್ನೇ ಹೊಂದಿಲ್ಲ ಎಂದು ಸ್ಟೋರಿ ಮಾಡಿದೆ. ಆದರೆ, ಗೋಸ್ವಾಮಿ ಟ್ವಿಟರ್‌  ಖಾತೆಯನ್ನು ಹೊಂದಿದ್ದು, ಆಕ್ಟಿವ್‌ ಆಗಿದ್ದಾರೆ.

ನಿನ್ನೆ ಅರ್ನಾಬ್ ಗೋಸ್ವಾಮಿಯವರನ್ನು ರಾಯಘಡ ಪೊಲೀಸರು ತಾಲೋಜ ಜೈಲಿಗೆ ಸ್ಥಳಾಂತರಿಸಿದ್ದಾರೆ. ನಿಯಾಮಾವಳಿಗಳ ಪ್ರಕಾರ ನ್ಯಾಯಾಂಗ ಬಂಧನದಲ್ಲಿರು ಆರೋಪಿಗಳು ಅನುಮತಿಯನ್ನು ಮೊಬೈಲ್‌ ಫೋನ್‌ಗಳನ್ನು ಬಳಸುವಂತಿಲ್ಲ. ಆದರೆ, ಗೋಸ್ವಾಮಿಯವರು ಯಾವುದೇ ಅನುಮತಿ ಇಲ್ಲದೆ ಅಲಿಬಾಗ್‌ನ ಕೈದಿಗಳಿಗಾಗಿ ಮೀಸಲಿರುವ ಕ್ವಾರಂಟೈನ್‌ ಕೇಂದ್ರದಲ್ಲಿ ಮೊಬೈಲ್‌ ಬಳಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್‌ ಅಗಿದ್ದಾರೆ. ಕಾರಣಕ್ಕಾಗಿ ಅವರನ್ನು ತಾಲೋಜ್‌ ಜೈಲಿಗೆ ಸ್ಥಳಾಂತರಿಸಲಾಗುತ್ತದೆ ಎಂದು ಹೇಳಿದ್ದರು.

ಈ ಬಗ್ಗೆ ಸ್ಟೋರಿ ಮಾಡಿರುವ OpIndia.com, ಅರ್ನಾಬ್ ಗೋಸ್ವಾಮಿ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಖಾತೆಯನ್ನು ಹೊಂದಿಲ್ಲ. ಆದ್ದರಿಂದ, ಪೊಲೀಸರು ‘ಗೋಸ್ವಾಮಿ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದರು ಎಂದು ತಿಳಿದುಬಂದಿದೆ’ ಎಂದು ಹೇಳಿರುವುದೇ ಸುಳ್ಳು.  ಅವರು ಸೋಷಿಯಲ್ ಮೀಡಿಯಾದಲ್ಲಿ ಏನನ್ನಾದರೂ ಪೋಸ್ಟ್ ಮಾಡಿದ್ದರೆ, ಅದು ವೈರಲ್ ಆಗುತ್ತಿತ್ತು. ಆದರೆ ಅಂತಹ ಯಾವುದೇ ಪೋಸ್ಟ್‌ಅನ್ನೂ ಅವರು ಹಾಕಿಲ್ಲ. ಕಳೆದ 4 ದಿನಗಳಲ್ಲಿ ಅರ್ನವ್ ಗೋಸ್ವಾಮಿ ಸೋಷಿಯಲ್ ಮೀಡಿಯಾದಲ್ಲಿ ‘ಆಕ್ಟಿವ್’ ಆಗಿದ್ದರು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ನವೆಂಬರ್ 08 ರಂದು ಸುದ್ದಿ ಮಾಡಿದೆ.

OpIndia.com ನ ಸುದ್ದಿ ಗಮನಿಸಿ, ಅನಾರ್ಬ್‌ ಗೋಸ್ವಾಮಿ ಅವರ ಸಾಮಾಜಿಕ ಜಾಲತಾಣದ ಖಾತೆಗಳನ್ನು ಹುಡುಕಿದಾಗ ಗೋಸ್ವಾಮಿ   ಟ್ವಿಟರ್‌ನಲ್ಲಿ ಖಾತೆ ಹೊಂದಿದ್ದಾರೆ.

ಟ್ವಿಟರ್‌ನಲ್ಲಿ ಹಲವು ಪೋಸ್ಟ್‌ಗಳನ್ನು ನ.08 ಮತ್ತು 09 ರಂದು ಹಲವು ರೀಟ್ವೀಟ್‌ ಮಾಡಿದ್ಧಾರೆ. ಹಾಗಾಗಿ ಅವರು ಸಾಮಾಜಿಕ ಜಾಲತಾಣದಲ್ಲಿ ಖಾತೆಯನ್ನು ಹೊಂದಿರುವುದಷ್ಟೇ ಅಲ್ಲದೆ, ನ್ಯಾಯಾಂಗ ಬಂಧನದಲ್ಲಿಯೂ ಅವರು ಸಾಮಾಜಿಕ ಜಾಲತಾಣವನ್ನು ಬಳಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಆದರೆ, ಬಿಜೆಪಿಯ ಕರಪತ್ರವಾಗಿರುವ OpIndia.com ಗೋಸ್ವಾಮಿಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಅವರು ಸಾಮಾಜಿಕ ಜಾಲತಾಣದಲ್ಲಿ ಖಾತೆಯನ್ನೇ ಹೊಂದಿಲ್ಲ ಎಂದು ಸುದ್ದಿ ಮಾಡಿದೆ.

ಶುಕ್ರವಾರ ಸಂಜೆ ಗೋಸ್ವಾಮಿಯವರು ಯಾರದ್ದೋ ಮೊಬೈಲ್‌ ಫೋನ್‌ ಬಳಸುತ್ತಿದ್ದರು. ಅವರು ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್‌ ಆಗಿದ್ದರು. ಗೋಸ್ವಾಮಿ ಅವರನ್ನು ವರ್ಲಿ ನಿವಾಸದಿಂದ ಬಂಧನಕ್ಕೆ ಒಳಪಡಿಸಿದಾಗ ಪೊಲಿಸರು ಅವರ ಫೋನ್‌ ವಶಪಡಿಸಿಕೊಂಡಿದ್ದರು. ಬಂಧನದಲ್ಲಿ ಅವರ ಬಳಿ ಸ್ವಂತ ಫೋನ್‌ ಇರಲಿಲ್ಲ. ಆದರೆ, ಕ್ವಾರಂಟೈನ್‌ ಕೇಂದ್ರದಲ್ಲಿ ಅವರಿಗೆ ಫೋನ್‌ ಹೇಗೆ ದೊರಕಿತು ಎಂಬುದರ ಬಗ್ಗೆ ತನಿಖಾ ವರದಿ ನೀಡುವಂತೆ ಪೊಲೀಸ್‌ ಅಧಿಕಾರಿಳಿಗೆ ತಿಳಿಸಿರುವುದಾಗಿ ಅಪರಾಧ ವಿಭಾಗದ ತನಿಖಾ ಕಚೇರಿ ತನಿಖಾಧಿಕಾರಿ ಜಮಿಲ್ ಶೇಖ್ ಹೇಳಿದ್ದಾರೆ.

ಬಿಜೆಪಿ, ಮುಸ್ಲೀಂ ದ್ವೇಷ, ಹಿಂದೂತ್ವದ ಹೆಸರಿನಲ್ಲಿ ಯುವಜನರ ಹಾದಿ ತಪ್ಪಿಸುತ್ತಿರುವ ಬಿಜೆಪಿ ಮತ್ತು ಅವರ ಕರಪತ್ರ ಮತ್ತು ಸಾಮಾಜಿಕ ಜಾಲತಾಣದ ಖಾತೆಗಳನ್ನು ಕಾರ್ಯನಿರ್ವಹಿಸುತ್ತಿರುವ OpIndia.com, ರಿಪಬ್ಲಿಕ್‌ ಟಿವಿಗಳ ಬಣ್ಣ ಬಯಲಾಗುತ್ತಿದೆ.


ಇದನ್ನೂ ಓದಿ: ದೀದಿಯನ್ನು ಬೆಂಬಲಿಸುವವರು ಕೈ-ಕಾಲು ಕಳೆದುಕೊಂಡು ಕೊಲೆಯಾಗುತ್ತಾರೆ: ಬಿಜೆಪಿ ರಾಜ್ಯಧ್ಯಕ್ಷ ಬೆದರಿಕೆ

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights