ಶಾರುಖ್‌ ಖಾನ್‌ ಸಿನಿಮಾ ಟ್ರೈಲರ್‌ನಿಂದ ಮೋಸ; ಕೋರ್ಟ್‌ ಮೆಟ್ಟಿಲೇರಿದ್ದ ಮಹಿಳೆಗೆ 15 ಸಾವಿರ ರೂ ಪರಿಹಾರ!

ಬಾಲಿವುಡ್ ನಟ ಶಾರುಖ್ ಖಾನ್ ಅವರ ಸಿನಿಮಾದ ಟ್ರೈಲರ್ ನೋಡಿ, ಥಿಯೇಟರ್‌ನಲ್ಲಿ ಸಿನಿಮಾ ನೋಡಿ ಮೋಸ ಹೋಗಿದ್ದ ಅಭಿಮಾನಿಯೊಬ್ಬರು ಚಿತ್ರ ತಂಡದ ವಿರುದ್ದ ಸುಪ್ರೀಂ ಕೋರ್ಟ್‌ನಲ್ಲಿ ಗೆಲುವು ಸಾಧಿಸಿದ್ದಾರೆ. ಅವರಿಗೆ 15 ಸಾವಿರ ರೂ ಪರಿಹಾರ ನೀಡಬೇಕು ಎಂದು ಕೊರ್ಟ್‌ ಚಿತ್ರ ತಂಡಕ್ಕೆ ಆದೇಶಿಸಿದೆ.

ಶಾರುಖ್ ಖಾನ್‌ ಅಭಿಯನದ ‘ಫ್ಯಾನ್’ ಎಂಬ ಸಿನಿಮಾ 2016ರಲ್ಲಿ ತೆರೆಕಂಡಿತ್ತು. ಸಿನಿಮಾ ತೆರೆ ಕಾಣುವುದಕ್ಕೂ ಮುನ್ನವೇ ಸಿನಿಮಾ ಟೈಟಲ್‌ ಸಾಂಗ್‌ ರಿಲೀಸ್‌ ಆಗಿ, ಭಾರೀ ಮೆಚ್ಚುಗೆ ಪಡೆದು, ಸಿನಿಮಾ ಬಗ್ಗೆ ಹಚ್ಚಿನ ನಿರೀಕ್ಷೆ ಹುಟ್ಟಿಸಿತ್ತು.

ಹೀಗಾಗಿ, ಟೈಟಲ್‌ ಸಾಂಗ್‌ನಿಂದ ಸಿನಿಮಾ ಬಗ್ಗೆ ಹೆಚ್ಚು ನಿರೀಕ್ಷೆಯೊಂದಿಗೆ ಮಹಾರಾಷ್ಟ್ರದ ಅಫ್ರೀನ್ ಫಾತೀಮಾ ಎಂಬ ಶಿಕ್ಷಕಿ, ತಮ್ಮ ಕುಟುಂಬದೊಂದಿಗೆ ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಣೆಗೆ ತೆರಳಿದ್ದರು. ಆದರೆ, ಸಿನಿಮಾದಲ್ಲಿ ಆ ಟೈಟಲ್‌ ಸಾಂಗ್‌ಅನ್ನು ತೆಗೆದು ಹಾಕಲಾಗಿತ್ತು.

ಇದರಿಂದ ಕೋಪಗೊಂಡ ಫಾತೀಮಾ ಅವರು ಮಹಾರಾಷ್ಟ್ರದ ರಾಜ್ಯ ಗ್ರಾಹಕರ ವೇದಿಕೆಯಲ್ಲಿ ಚಿತ್ರ ತಂಡ ತಮೆಗೆ ಮೋಸ ಮಾಡಿದೆ ಎಂದು ದೂರು ನೀಡಿದ್ದರು. ದೂರು ಆಲಿಸಿದ್ದ ಗ್ರಾಹಕರ ವೇದಿಕೆ, ಸಿನಿಮಾ ನಿರ್ಮಾಣ ಮಾಡಿದ್ದ ಯಶ್ ರಾಜ್ ಫಿಲಂಸ್‌ಗೆ 10 ಸಾವಿರ ದಂಡ ಹಾಗೂ ಫಾತೀಮಾ ಸಿನಿಮಾ ನೋಡಲು ಖರ್ಚು ಮಾಡಿದ್ದ 5 ಸಾವಿರವನ್ನು ಸೇರಿಸಿ ಒಟ್ಟಾರೆ 15 ಸಾವಿರ ನೀಡಬೇಕು ಎಂದು ಸೂಚಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿ ಯಶ್ ರಾಜ್ ಫಿಲಂಸ್‌ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿಯನ್ನು ಆಲಿಸಿರುವ ಸುಪ್ರೀಂ ಕೋರ್ಟ್‌, ಗ್ರಾಹಕರ ವೇದಿಕೆಯ ಆದೇಶವನ್ನು ಎತ್ತಿಹಿಡಿಸದಿದ್ದು, ಫಾತೀಮಾ ಅವರಿಗೆ 15 ಸಾವಿರ ಪರಿಹಾರ ನೀಡುಬೇಕು ಎಂದು ಹೇಳಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ; ಅತ್ತ ಬಿಜೆಪಿ ತೊರೆದ ಸಂಸದ ಬಾಬುಲ್‌ ಸುಪ್ರಿಯೋ; ಇತ್ತ ರಾಜ್ಯಾಧ್ಯಕ್ಷ ಸ್ಥಾನ ಕಳೆದುಕೊಂಡ ದಿಲೀಪ್‌ ಘೋಷ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights