ಚೀನಾದ RCEP ಒಪ್ಪಂದಕ್ಕೆ 15 ರಾಷ್ಟ್ರಗಳ ಸಹಿ! ಒಪ್ಪಂದದಿಂದ ಹೊರಗುಳಿದ ಭಾರತ!

ಅಮೆರಿಕಾ ವಿರುದ್ಧ ತನ್ನ ಶಕ್ತಿ ಪ್ರದರ್ಶನ ಮಾಡುತ್ತಿರುವ ಚೀನಾ, ಏಷ್ಯಾದ ಪ್ರಮುಖ ರಾಷ್ಟ್ರಗಳನ್ನು ಒಗ್ಗೂಡಿಸುವ ಮಹತ್ವಾಕಾಂಕ್ಷೆಯ  ಆರ್​ಸಿಇಪಿ ವ್ಯಾಪಾರ ಒಪ್ಪಂದ ಸಾಕಾರಗೊಂಡಿದೆ. ಏಷ್ಯಾದ 15 ಪ್ರಮುಖ ರಾಷ್ಟ್ರಗಳು ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರತ್ವ (RCEP) ಒಪ್ಪಂದಕ್ಕೆ ಸಹಿ ಹಾಕಿವೆ.

ಜಪಾನ್, ದಕ್ಷಿಣ ಕೊರಿಯಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ 15 ರಾಷ್ಟ್ರಗಳು ಚೀನಾ ಪ್ರಸ್ತಾಪಿಸಿದ್ದ RCEP ಒಪ್ಪಂದಕ್ಕೆ ಸಹಿಹಾಕಿವೆ.

ಭಾರತ ಕೂಡ ಈ ಒಪ್ಪಂದಕ್ಕೆ ಸಹಿ ಹಾಕಬೇಕಿತ್ತು. ಆದರೆ, ಚೀನಾದಿಂದ ಬಹಳ ಅಗ್ಗದ ದರದಲ್ಲಿ ಕಳಪೆ ಉತ್ಪನ್ನಗಳು ರಫ್ತಾಗುವುತ್ತಿವೆ ಎಂದು ಆರೋಪಿಸಿದ್ದ ಭಾರತ ಈ ಒಪ್ಪಂದಕ್ಕೆ ಸಹಿ ಹಾಕದಿರಲು ಕಳೆದ ವರ್ಷ ನಿರ್ಧರಿಸಿತ್ತು. ಹಾಗಾಗಿ ಭಾರತ ಒಪ್ಪಂದಕ್ಕೆ ಸಹಿ ಹಾಕಿಲ್ಲ.

2012ರಲ್ಲಿ ಮೊದಲ ಬಾರಿಗೆ ಈ ಆರ್​ಸಿಇಪಿ ಒಪ್ಪಂದದ ಪ್ರಸ್ತಾವವಾಗಿದ್ದು. ಎಂಟು ವರ್ಷಗಳ ನಿರಂತರ ಚರ್ಚೆಗಳ ಬಳಿಕ 15 ರಾಷ್ಟ್ರಗಳು ಸಹಿ ಹಾಕಿವೆ.

ಈ ವರ್ಷ ಕೊರೊನಾ ಸೋಂಕಿನಿಂದಾಗಿ ಆರ್ಥಿಕತೆ ಸಂಕಷ್ಟಕ್ಕೊಳಗಾಗಿದ್ದರಿಂದ ಒಪ್ಪಂದ ಸಾಕಾರಗೊಳ್ಳಲು ಮುಖ್ಯ ಕಾರಣ ಎನ್ನಲಾಗಿದೆ.

ಆರ್‌ಸಿಇಪಿ ಒಪ್ಪಂದಕ್ಕೆ ಸಹಿಹಾಕಿರುವ ದೇಶಗಳು ತಮ್ಮ ಉತ್ಪನ್ನಗಳನ್ನ ಸುಲಭವಾಗಿ ರಫ್ತು ಮಾಡಲು ಸಾಧ್ಯವಾಗುತ್ತದೆ. ಎಲ್ಲರಿಗೂ ಸಮಾನ ನಿಯಮಾವಳಿಗಳು ಇರುತ್ತವೆ. ಮ್ಯಾನುಫ್ಯಾಕ್ಚರಿಂಗ್ ಉದ್ಯಮ ಪ್ರಬಲವಾಗಿರುವ ಚೀನಾಗೆ ಈ ಒಪ್ಪಂದದಿಂದ ಅತಿಹೆಚ್ಚು ಲಾಭ ಸಿಗುವ ನಿರೀಕ್ಷೆ ಇದೆ. ಆರ್​ಸಿಇಪಿ ಮೂಲಕ ಚೀನಾದ ಪ್ರಭಾವ ಇನ್ನಷ್ಟು ಹೆಚ್ಚಾಗುತ್ತದೆ. ಟ್ರಾನ್ಸ್-ಪೆಸಿಫಿಕ್ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ಏಷ್ಯಾದ ಮೇಲೆ ಚೀನಾದ ಹಿಡಿತ ಇನ್ನಷ್ಟು ಹೆಚ್ಚಾಗಲಿದೆ.


ಇದನ್ನೂ ಓದಿ: ಬಿಹಾರ: ಕೇವಲ 43 ಸ್ಥಾನಗಳನ್ನು ಗೆದ್ದಿರುವವರು ಹೇಗೆ ಮುಖ್ಯಮಂತ್ರಿ ಆಗುತ್ತಾರೆ? ಆರ್‌ಜೆಡಿ ಪ್ರಶ್ನೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights