MPಯಲ್ಲಿ ಲವ್ ಜಿಹಾದ್‌ ತಡೆಗೆ ಬಿಜೆಪಿ ಸರ್ಕಾರದ ಕಾನೂನು: ಮತಾಂತರಕ್ಕೆ 05 ವರ್ಷ ಜೈಲು ಶಿಕ್ಷೆ!

ವಿವಾಹದ ಕಾರಣಕ್ಕಾಗಿ ನಡೆಯುವ ಧಾರ್ಮಿಕ ಮತಾಂತರ ನಿಷೇಧಿಸುವ ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗುವುದು ಎಂದು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್‌ ಚೌಹಾಣ್‌ ಹೇಳಿದ್ದಾರೆ.

ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಮಧ್ಯ ಪ್ರದೇಶದ ಧರ್ಮ ಸ್ವತಂತ್ರ 2020 ಮಸೂದೆಯನ್ನು ಮಂಡಿಸಲು ನಾವು ಸಿದ್ಧತೆ ನಡೆಸಿದ್ದೇವೆ. ಬಲವಂತವಾಗಿ, ಮೋಸದಿಂದ ಅಥವಾ ಧಾರ್ಮಿಕ ಮತಾಂತರಕ್ಕಾಗಿ ನಡೆಯುವ ಎಲ್ಲಾ ವಿವಾಹಗಳನ್ನು ಅನೂರ್ಜಿತಗೊಳಿಸಲು ಈ ಮಸೂದೆಯನ್ನು ರಚಿಸಲಾಗಿದೆ ಎಂದು ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.

ಲವ್ ಜಿಹಾದ್ ನಲ್ಲಿ ಭಾಗಿಯಾಗುವ ಆರೋಪಿಗಳಿಗೆ ಐದು ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ವಿಧಿಸಲು ಮಸೂದೆಯಲ್ಲಿ ಅವಕಾಶವಿದೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಆಡಳಿತವಿರುವ ಮೂರು ರಾಜ್ಯಗಳಾದ ಉತ್ತರ ಪ್ರದೇಶ, ಹರಿಯಾಣ ಮತ್ತು ಕರ್ನಾಟಕ – ‘ಲವ್ ಜಿಹಾದ್’ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸುತ್ತೇವೆ ಎಂದು ಅಲ್ಲಿಯ ರಾಜ್ಯ ಸರ್ಕಾರಗಳೂ ಹೇಳುತ್ತಿವೆ.


ಇದನ್ನೂ ಓದಿ: ಹಸುಗಳ ರಕ್ಷಣೆಗಾಗಿ ‘ಹಸು ಸಚಿವಾಲಯ’ ರಚಿಸುತ್ತೇವೆ: ಮಧ್ಯಪ್ರದೇಶ ಸರ್ಕಾರ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights