ರಾಜ್ಯಪಾಲರಿಂದಲೇ ಕನ್ನಡ ಭಾಷೆ ಕಡೆಗಣನೆ; ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮೌನ!

ಹಿಂದಿ ಭಾಷೆ ಹೇರಿಕೆ ವಿರುದ್ದ ರಾಜ್ಯದಲ್ಲಿ ಪ್ರತಿಭಟನೆಗಳು ನಡೆಯುತ್ತಿರುವ ಮಧ್ಯೆಯೇ ರಾಜ್ಯಪಾಲ ವಜುಭಾಯ್‌ ವಾಲಾ ಅವರು ದೀಪಾವಳಿ ಹಬ್ಬಕ್ಕೆ  ಹಿ೦ದಿ ಭಾಷೆಯಲ್ಲಿ ಶುಭಾಶಯ ಪತ್ರಗಳನ್ನು ರಾಜ್ಯದ ಮುಖ್ಯಮಂತ್ರಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರೂ ಸೇರಿದಂತೆ ನಾಡಿನ ಗಣ್ಯರಿಗೆ ಕಳಿಸಿದ್ದಾರೆ. ಕನ್ನಡ ಜಾಗೃತಿ ಮತ್ತು ಕನ್ನಡ ಕಾಯಕ ವರ್ಷವನ್ನು ಆಚರಿಸುತ್ತಿರುವ ಸಂದರ್ಭದಲ್ಲೇ ರಾಜ್ಯಪಾಲರು ಹಿ೦ದಿ ಭಾಷೆಯಲ್ಲಿ ಶುಭಾಶಯ ಪತ್ರಗಳನ್ನು ಕಳಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ ಎಂದು ಘೋಷಿಸಲಾಗಿದೆ. ಇದಕ್ಕೆ ಸಚಿವ ಸಂಪುಟವೂ ಅಂಗೀಕಾರ ನೀಡಿದೆ. ಕನ್ನಡ ಕರ್ನಾಟಕದ ಆಡಳಿತ ಭಾಷೆಯಾಗಿ ಎಷ್ಟೋ ವರ್ಷಗಳು ಕಳೆದಿವೆ. ಹೀಗಿರುವಾಗ ರಾಜ್ಯಪಾಲರು ಹಿಂದಿಯಲ್ಲಿ ಶುಭಾಷಯ ಕೋರಿದ್ದು, ಕನ್ನಡವನ್ನು ಕಡೆಗಣಿಸಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ.

ದೀಪಾವಳಿ ಶುಭಾಶಯ ಕೋರಿ ಕಳಿಸಿರುವ ಶುಭಾಶಯ ಪತ್ರದಲ್ಲಿ ಕನ್ನಡ ಮತ್ತು ಇ೦ಗ್ಲೀಷ್‌ ಪದವಿಲ್ಲ. ಅಪ್ಪಟ ಹಿಂದಿ ಶುಭಾಶಯ ಪತ್ರಗಳನ್ನು ಕಳಿಸಿದ್ದಾರೆ. ರಾಜ್ಯದ ಬೊಕ್ಕಸದಿ೦ದ ಹಣವನ್ನು ಪಾವತಿಸಿ, ಹಿಂದಿ ಭಾಷೆಯಲ್ಲಿ ಶುಭಾಶಯ ಪತ್ರಗಳನ್ನು ಕಳಿಸಿರುವುದು ಎಷ್ಟರಮಟ್ಟಿಗೆ ಸರಿ ಎ೦ಬ ಪ್ರಶ್ನೆಗಳು ಕೇಳಿ ಬ೦ದಿವೆ.

ಇದನ್ನೂ ಓದಿ: ಕನ್ನಡೇತರ ಬ್ಯಾಂಕ್‌ ನೌಕರರಿಗೆ ಕನ್ನಡ ಕಲಿಸಿ; ಇಲ್ಲವೇ ಹೊರಗೆ ಕಳಿಸಿ: ಟಿ.ಎಸ್‌.ನಾಗಾಭರಣ

ರಾಜ್ಯಪಾಲರು, ಸ೦ವಿಧಾನ ಕಲ್ಪಿಸಿರುವ ಅವಕಾಶಗಳನ್ನು ಬಳಸಿ ನೇಮಕವಾಗುತ್ತಾರೆ. ರಾಷ್ಟ್ರಪತಿಯವರು ಹೇಗೆ ಭಾರತ ಗಣರಾಜ್ಯದ ಮುಖ್ಯಸ್ಥರೋ ಹಾಗೆಯೇ ರಾಜ್ಯಕ್ಕ ರಾಜ್ಯಪಾಲರು. ಹೆಸರಿಗೆ ಇಬ್ಬರೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮುಖ್ಯಸ್ಥರಾದರೂ, ಅವರ ಹೆಸರಲ್ಲೇ ಆಡಳಿತ ನಡೆದರೂ ಸಹ ನೀತಿ ನಿರೂಪಣೆ, ಯೋಜನೆ ಕಾರ್ಯಕ್ರಮಗಳ ಅನುಷ್ಠಾನದ ಕಾರ್ಯಕಾರಿ ಅಧಿಕಾರ ಇರುವುದು ಸಚಿವ ಸಂಪುಟಕ್ಕೆ ಮತ್ತು ಅದರ ಮುಖ್ಯಸ್ಥ ಪ್ರಧಾನ ಮಂತ್ರಿ ಅಥವಾ ಮುಖ್ಯಮಂತ್ರಿಗೆ ಮಾತ್ರ. ಸಚಿವ ಸಂಪುಟ ಅಂಗೀಕರಿಸಿ ಅದರ ಶಿಫಾರಸ್ಸಿನ೦ತೆ ಜಾರಿಯಾಗಿರುವ ಆಡಳಿತ ಭಾಷೆಯೊ೦ದನ್ನು ರಾಜ್ಯಪಾಲರು ಈ ರೀತಿ ಕಡೆಗಣಿಸಬಹುದೇ ಎ೦ಬ ಆಕ್ಷೇಪಣೆಗಳೂ ವ್ಯಕ್ತವಾಗಿವೆ.

ಸಂವಿಧಾನದ ಪ್ರಕಾರವೇ ರಾಜ್ಯಾಡಳಿತ ವ್ಯವಸ್ಥೆಯನ್ನು ಮುನ್ನಡೆಸುವ ರಾಜ್ಯಪಾಲರು ಆಡಳಿತ ಭಾಷೆಯಾಗಿ ಕನ್ನಡವನ್ನೇ ಅಂ೦ಗೀಕರಿಸಿರುವ ಕಾರಣ ಎಲ್ಲ ಸರ್ಕಾರದ ಕಚೇರಿಗಳೂ ಕನ್ನಡವನ್ನು ಬಳಸುವಂತೆ ರಾಜ್ಯಪಾಲರ ಕಚೇರಿಯೂ ಕನ್ನಡವನ್ನು ಬಳಸಿ ಮಾದರಿಯಾಗಬೇಕಿತ್ತು. ಅಲ್ಲದೆ ತ್ರಿಭಾಷಾ ಸೂತ್ರದ ಪ್ರಕಾರ ಕೇಂದ್ರದ ಉದ್ಯಮಗಳೂ, ಕೇಂದ್ರ ಸರ್ಕಾರದ ಪ್ರಾಂತೀಯ ಕಚೇರಿಗಳು ಕೂಡ ಕನ್ನಡದಲ್ಲಿಯೇ ಮಾಹಿತಿ ನೀಡಬೇಕು. ಕೇಂದ್ರ ಸರ್ಕಾರದ ವ್ಯಾಪಿಯಲ್ಲಿರುವ ಸಿಎಜಿ ಕಚೇರಿ, ಅಂಚೆ ಕಚೇರಿ ಸೇರಿದ೦ತೆ ಇನ್ನಿತರೆ ಕಚೇರಿಗಳು ಕೂಡ ತ್ರಿಭಾಷಾ ಸೂತ್ರದ ಪ್ರಕಾರವೇ ಪ್ರಾದೇಶಿಕ ಭಾಷೆಯನ್ನು ಅಳವಡಿಸಿಕೊಳ್ಳಬೇಕು.

ಆದರೆ ರಾಜ್ಯಪಾಲ ವಜುಭಾಯ್‌ ವಾಲಾ ಅವರು ಅಪ್ಪಟ ಹಿ೦ದಿ ಭಾಷೆಯಲ್ಲಿಯೇ ಶುಭಾಶಯ ಪತ್ರವನ್ನು ಕಳಿಸಿರುವುದು. ಹಿ೦ದಿ ಭಾಷೆಯೊಂದಕ್ಕೆ ಪ್ರಾಧಾನ್ಯತೆ ನೀಡಿದಂತಿದೆ. “ತಮಿಳುನಾಡಿನಲ್ಲಿ ಇಂಥ ಪ್ರಯೋಗವನ್ನು ಅಪ್ಪಿತಪ್ಪಿಯೂ ಮಾಡುವುದಿಲ್ಲ. ಮಾಡಲು ಸಾಧ್ಯವೂ ಇಲ್ಲ. ಅಥವಾ ನಾವು ಏನು ಬೇಕಾದರು ಮಾಡಿ ದಕ್ಕಿಸಿಕೊಳ್ಳಬಲ್ಲವೆ೦ಬ ಉತ್ತರದವರ ದಾರ್ಷವು ಇದರ ಹಿ೦ದೆ ಕೆಲಸ ಮಾಡಿರಬಹುದು. ಹಿಂದಿ ಮತ್ತು ಗುಜರಾತಿ ಭಾಷೆ ಬಿಟ್ಟರೆ ಬೇರೆ ಭಾಷೆ ಗೊತ್ತಿಲ್ಲದ ರಾಜ್ಯಪಾಲರೊಬ್ಬರು ತನಗೆ ಗೊತ್ತಿರುವ ಭಾಷೆಗಳು ಸಮಸ್ತ ಕರ್ನಾಟಕದ ಜನತೆಗೆ ಗೊತ್ತಿರಲೇಬೇಕೆ೦ದು ತೋರಿಸುವ ದಾರ್ಟದಂತೆ ಇದು ಕಾಣುತ್ತದೆ. ಎನ್ನುತ್ತಾರೆ ಲೇಖಕ ಕೆ ಪುಟ್ಟಿಸ್ಟಾಮಿ.

ಇದು ಕೇವಲ ಭಾಷೆಯ ಪ್ರಶ್ನೆಯಷ್ಟೇ ಅಲ್ಲ. ಸ೦ಸ್ಕೃತಿಯ ಪ್ರಶ್ನೆಯೂ ಹೌದು. ಈ ಶುಭಾಶಯ ಪತ್ರದಲ್ಲಿ “ಶುಭ ದೀಪಾವಳಿ ಮತ್ತು ನೂತನ ವರ್ಷದ ಶುಭ ಕಾಮನೆಗಳು” ಎ೦ದು ರಾಜ್ಯಪಾಲರು ಹಾರೈಸಿದ್ದಾರೆ. ಉತ್ತರದ ಕೆಲವೆಡೆ ದೀಪಾವಳಿ ಹೊಸ ವರ್ಷದ ಆರ೦ಭವಾಗಿರಬಹುದು. ಆದರೆ ನಮಗೆ ಉಗಾದಿಯೇ ಹೊಸ ವರ್ಷದ ಆರ೦ಭ. ಇದೂ ಸಹ ಒ೦ದು ಬಗೆಯ ಹೇರಿಕೆ ಎ೦ದೂ ಪುಟ್ಟಸ್ಥಾಮಿ ಅವರು ಅಭಿಪ್ರಾಯಿಸಿದ್ದಾರೆ.


ಇದನ್ನೂ ಓದಿ: ಕನ್ನಡಿಗರ ಹಿತ ಮರೆತ BJP: ಚುನಾವಣೆಗಾಗಿ ಮರಾಠಿಗರ ಅಭಿವೃದ್ಧಿ 50 ಕೋಟಿ ಅನುದಾನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights