ಭಾರತದ ರೈತರ ಪ್ರತಿಭಟನೆಗೆ ಕೆನಡಾ ಪ್ರಧಾನಿ ಬೆಂಬಲ!

ಭಾರತದಲ್ಲಿ ರೈತರು ಹೊಸ ಕೃಷಿ ಮಸೂದೆಗಳ ವಿರುದ್ದ ಹೋರಾಟ ನಡೆಸುತ್ತಿರುವ ರೈತರನ್ನು ನಾವು ಬೆಂಬಲಿಸುತ್ತೇವೆ. ಶಾಂತಿಯುತ ಪ್ರತಿಭಟನೆಯನ್ನು ಕೆನಡಾ ಎಂದಿಗೂ ಬೆಂಬಲಿಸಲಿದೆ ಎಂದು ಕೆನಡಾ ಪ್ರಧಾನಿ ಹೇಳಿದ್ದಾರೆ.

ಗುರುನಾನಕ್‌ ಜಯಂತಿಯ ಭಾಗವಾಗಿ ಆಯೋಜಿಸಲಾಗಿದ್ದ ಫೇಸ್‌ಬುಕ್‌ ಅಭಿಯಾನದಲ್ಲಿ ಮಾತನಾಡಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ, ಭಾರತದಲ್ಲಿ ರೈತರ ಪ್ರತಿಭಟನೆಯು ಭಾರತದಲ್ಲಿ ಸೃಷ್ಟಿಯಾಗಿರುವ ಆತಂಕಕಾರಿ ಪರಿಸ್ಥಿತಿಯನ್ನು ಸೂಚಿಸಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ರೈತರು ಹೊಸ ಕೃಷಿ ಮಸೂದೆಯನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ಗುರುತಿಸದೇ ಮಾತನಾಡಿದಲ್ಲಿ ನಾನು ಅಜಾಗರೂಕನಾಗುತ್ತೇನೆ. ಪರಿಸ್ಥಿತಿ ಆತಂಕಕಾರಿಯಾಗಿದ್ದು, ‘ಪ್ರತಿಭಟಿಸುವ ಹಕ್ಕನ್ನು ಜನರಿಗೆ ನೀಡಬೇಕು. ಶಾಂತಿಯುತವಾಗಿ ಪ್ರತಿಭಟನೆ ನಡೆಯಬೇಕು. ಭಾರತದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸರ್ಕಾರ ಅವಕಾಶ ನೀಡಬೇಕು. ರೈತರಿಂದ ಪ್ರತಿಭಟನೆ ನಡೆಯುತ್ತಿರುವ ಭಾರತದ ಕುರಿತಾದ ಸುದ್ದಿಗಳ ಬಗ್ಗೆ ಉಲ್ಲೇಖಿಸದೆ ನನ್ನ ಮಾತು ಆರಂಭಿಸುವುದು ಸರಿಯಲ್ಲ. ಪರಿಸ್ಥಿತಿ ತುಂಬಾ ಕಳವಳಕಾರಿಯಾಗಿದೆ. ನಾವೆಲ್ಲರೂ ನಮ್ಮ ಕುಟುಂಬ ಮತ್ತು ಸ್ನೇಹಿತರ ಬಗ್ಗೆ ಚಿಂತಿತರಾಗಿದ್ದೇವೆ’ ಎಂದಿದ್ದಾರೆ. ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೋದಿ ನೇತೃತ್ವದ ಸರ್ಕಾರ ತುಂಬಾ ಬ್ಯುಸಿಯಾಗಿದೆ; ಮಾಡುತ್ತಿರುವುದೇನು? ಸಾಧಿಸಿದ್ದೇನು?

ಕೆನಡಾ ಶಾಂತಿಯುತ ಪ್ರತಿಭಟನೆಗಳನ್ನು ಎಂದಿಗೂ ಬೆಂಬಲಿಸಲಿದೆ. ಮಾತುಕತೆಯಲ್ಲಿನ ಮಹತ್ವವನ್ನು ನಾವೂ ನಂಬುತ್ತೇವೆ. ನಾವು ನಮ್ಮ ಆತಂಕಗಳನ್ನು ನೇರವಾಗಿ ಹಲವು ವಿಧಾನಗಳ ಮೂಲಕ ಭಾರತೀಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ ಎಂದೂ ಕೆನಡಾ ಪ್ರಧಾನಿ ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿ ಚಲೋ: ಪ್ರತಿಭಟನೆಯ ನಡುವೆ ಗುರುನಾನಕ್‌ ಜಯಂತಿ ಆಚರಣೆ; ಪೊಲೀಸರಿಗೆ ಪ್ರಸಾದ ಹಂಚಿದ ರೈತರು

ಕೆನಡಾದ ಜನಸಂಖ್ಯೆಯ ಸುಮಾರು 37,750,000 ರಷ್ಟು ಸಿಖ್ಖರು ಇದ್ದಾರೆ. ಕೆನಡಾದಲ್ಲಿ ಇಂಗ್ಲಿಷ್ ಮತ್ತು ಫ್ರೆಂಚ್ ನಂತರ ಪಂಜಾಬಿ ಹೆಚ್ಚು ಮಾತನಾಡುವ 3ನೇ ಭಾಷೆಯಾಗಿದೆ. ಸಣ್ಣ ಸಂಖ್ಯೆಯ ಹೊರತಾಗಿಯೂ, ಸಿಖ್ಖರ ಧೃಢವಾದ ಸಮುದಾಯವು ದೇಶದಲ್ಲಿ ಅಧಿಕಾರ ಚಲಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. 2019 ರಲ್ಲಿ 18 ಸಿಖ್ ಸಂಸದರು ಕೆನಡಾದ 338 ಸ್ಥಾನಗಳಿರುವ ಹೌಸ್ ಆಫ್ ಕಾಮನ್ಸ್‌ ಗೆ ಆಯ್ಕೆಯಾದರು. ಇದೇ ಅವಧಿಯಲ್ಲಿ ಭಾರತದಲ್ಲಿ ನಡೆದ 543 ಸ್ಥಾನಗಳ ಲೋಕಸಭಾ ಚುನಾವಣೆಯಲ್ಲಿ ಕೇವಲ 13 ಸಿಖ್ ಸಂಸದರು ಆಯ್ಕೆಯಾಗಿದ್ದರು.


ಇದನ್ನೂ ಓದಿ: ರೈತರ ಪ್ರತಿಭಟನೆಯಲ್ಲಿ ಮುಸ್ಲಿಂ ಎಸ್‌ಡಿಪಿಐ ಕಾರ್ಯಕರ್ತನ ಬಂಧನವೆಂದು ಹಳೆಯ ವೀಡಿಯೋ ಹಂಚಿಕೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights