ಮಧ್ಯಪ್ರದೇಶ: ಆಯ ತಪ್ಪಿ ಬಾವಿಗೆ ಬಿದ್ದ ಬೊಲೆರೊ ಕಾರ್ : 6 ಮಂದಿ ದಾರುಣ ಸಾವು!

ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ದುರಂತ ಅಪಘಾತ ಸಂಭವಿಸಿದ್ದು ಮದುವೆ ಸಂಭ್ರಮ ಮುಗಿಸಿಕೊಂಡು ಬರುತ್ತಿದ್ದ ಕಾರು ಬಾವಿಗೆ ಬಿದ್ದಿದೆ. ಅಪಘಾತದಲ್ಲಿ ಚಾಲಕ ಸೇರಿದಂತೆ 6 ಜನರು ಸಾವನ್ನಪ್ಪಿದ್ದಾರೆ. ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಅಪಘಾತ ಸಂಭವಿಸಿದ್ದು ಮಧ್ಯಪ್ರದೇಶದ ಛತರ್ಪುರ್ ಜಿಲ್ಲೆಯ ಮಹಾರಾಜಪುರ್ ಎಂಬಲ್ಲಿ ನಡೆದಿದೆ

ಮಂಗಳವಾರ ರಾತ್ರಿ 9 ಮದುವೆ ಮೆರವಣಿಗೆ ಮುಗಿಸಿಕೊಂಡು ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಮೃತಪಟ್ಟವರೆಲ್ಲರೂ ಚಾರ್ಖರಿ ಕೊಟ್ವಾಲಿ ಪ್ರದೇಶದ ಸ್ವಾಸಾ ಗ್ರಾಮದ ನಿವಾಸಿಗಳು ಎಂದು ಹೇಳಲಾಗುತ್ತಿದೆ. ಈ ಘಟನೆಯ ನಂತರ, ಮೃತರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಈ ವಿಷಯದಲ್ಲಿ ಮಹಾರಾಜಪುರ ಪೊಲೀಸ್ ಠಾಣೆ ಉಸ್ತುವಾರಿ ವೈ ಖಾನ್ ಮಾತನಾಡಿದ್ದು, ಕಾರಿನಲ್ಲಿ 9 ಮಂದಿ ಇದ್ದರು, ಅವರಲ್ಲಿ 6 ಮಂದಿ ಮೃತಪಟ್ಟಿದ್ದು ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights