ಭಾರತದ GDP ಶೇ.8 ರಷ್ಟು ಕುಸಿತ ಸಾಧ್ಯತೆ; ದಕ್ಷಿಣ ಏಷ್ಯಾದಲ್ಲೇ ಭಾರತದ್ದೇ ಕಳಪೆ ಸಾಧನೆ!

ಪ್ರಸ್ತುತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ.8 ರಷ್ಟು ಕುಸಿತಗೊಳ್ಳುವ ಸಾಧ್ಯತೆ ಇದೆ. ಇದು ಮಾಲ್ಡೀವ್ಸ್‌ ರಾಷ್ಟ್ರವನ್ನು ಹೊರತು ಪಡಿಸಿ ದಕ್ಷಿಣ ಏಷ್ಯಾದಲ್ಲೇ ಅತ್ಯಂತ ಕಳಪೆ ಸಾಧನೆಯಾಗಲಿದೆ ಎಂದು ಏಷ್ಯನ್‌ ಡೆವೆಲಪ್ಮೆಂಟ್‌ ಔಟ್‌ಲುಕ್‌ ತಿಳಿಸಿದೆ.

ಬಾಂಗ್ಲಾದೇಶವು ರಫ್ತನ್ನು ಪುನಶ್ವೇತನಗೊಳಿಸಿದ್ದು, ಅದು ಶೇ.5.2 ರಷ್ಟು ಜಿಡಿಪಿಯನ್ನು ಹೆಚ್ಚಿಸಲಿದೆ.

ಈ ಹಿಂದೆ ಭಾರತೀಯ ಆರ್ಥಿಕತೆ ಶೇ.9 ರಷ್ಟು ಕುಸಿತ ಕಾಣುವ ಸಾಧ್ಯತೆ ಇದೆ ಎಂದು ಊಹಿಸಲಾಗಿತ್ತು. ಆದರೆ, ಶೇ. 8ರಷ್ಟು ಕುಸಿತ ಕಂಡಿದೆ. ಅಲ್ಲದೆ, 2021 ರಲ್ಲಿ ಭಾರತ ಆರ್ಥಿಕತೆ ಶೇ.8 ರಷ್ಟು ವೃದ್ದಿಸುವ ಸಾಧ್ಯತೆ ಇದ್ದು, ಸಾಕಾರಾತ್ಮಕತೆಗೆ ಮರಳಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ದೆಹಲಿ ಗಲಬೆಗೆ ಅಮಿತ್‌ ಶಾ ನೇರ ಹೊಣೆ: ಸತ್ಯಶೋಧನಾ ವರದಿ

2020–21 ನೇ ಆರ್ಥಿಕ ವರ್ಷದ 1 ನೇ ತ್ರೈಮಾಸಿಕ (ಏಪ್ರಿಲ್-ಜೂನ್) ದಲ್ಲೇ 23.9% ದಷ್ಟು ಇಳಿಯಾಗಿತ್ತು. ಆದರೆ, ಜೂನ್‌ ನಂತರ ಆರ್ಥಿಕ ಚುಟುವಟಿಕೆಗಳು ಸರಾಗವಾದ ಬಳಿಕ ಆರ್ಥಿಕತೆ ಸಾಮಾನ್ಯ ಹಂತಕ್ಕೆ ತಲುಪತು ಆರಂಭಿಸಿತ್ತು. ಆದರೂ ನಿರೀಕ್ಷಿತ ಮಟ್ಟ ತಲುಪದ ಕಾರಣ ಶೇ.8 ರಷ್ಟು ಕುಸಿತ ಕಂಡಿದೆ ಎಂದು ಎಡಿಬಿ ಹೇಳಿದೆ.

ರಫ್ತಿನಲ್ಲಿ ನಿರೀಕ್ಷೆಗಿಂತಲೂ ಹೆಚ್ಚಿನ ಬೆಳವಣಿಗೆ ಆಗಿರುವುದರಿಂದಾಗಿ ಆರ್ಥಿಕ ಚೇತರಿಕೆ ಕಂಡಿರುವ ಬಾಂಗ್ಲಾದೇಶದ ಜಿಡಿಪಿ ಶೇ.5.2 ರಷ್ಟು ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಪ್ರವಾಸೋದ್ಯಮವನ್ನು ಅವಲಂಬಿಸಿರುವ ಶ್ರೀಲಂಕಾ 5.5 ರಷ್ಟು ಕುಸಿತವನ್ನು ಕಾಣಲಿದೆ. ಪಾಕಿಸ್ತಾನವು ಶೇಕಡಾ 0.4 ರಷ್ಟು ಕಸಿತವನ್ನು ಕಾಣಲಿದೆ.


ಇದನ್ನೂ ಓದಿ: ಮೂರು ತಿಂಗಳಲ್ಲಿ GDP ಶೇ.23.9 ಕುಸಿತ; ಗರಿಷ್ಟ ಇಳಿಕೆ ಕಂಡ ಭಾರತ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights