ಬಿಜೆಪಿಯೇ ನಿಜವಾದ ತುಕ್ಡೇ ತುಕ್ಡೇ ಗ್ಯಾಂಗ್: ಪಂಜಾಬ್ ಮಾಜಿ ಸಿಎಂ ಸುಖಬೀರ್ ಸಿಂಗ್ ಬಾದಲ್
ಬಿಜೆಪಿ ಪಕ್ಷವೇ ದೇಶದಲ್ಲಿರುವ ನಿಜವಾದ ತುಕ್ಡೇ ತುಕ್ಡೇ ಗ್ಯಾಂಗ್ ಎಂದು ಪಂಜಾಬ್‌ನ ಶಿರೋಮಣಿ ಅಕಾಲಿ ದಳ (ಎಸ್‌ಎಡಿ)ದ ನಾಯಕ, ಮಾಜಿ ಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ಅವರು ಹೇಳಿದ್ದಾರೆ.
ಎನ್‌ಡಿಎ ತೊರೆದ ನಂತರ ಬಿಜೆಪಿಯ ವಿರುದ್ಧ ಹರಿಹಾಯ್ದಿರುವ ಸುಖಬೀರ್ ಸಿಂಗ್ ಬಾದಲ್, ದೇಶ ನಿಜವಾದ ತುಕ್ಡೇ ತುಕ್ಡೇ ಗ್ಯಾಂಗ್ ಎಂದರೇ ಅದು ಬಿಜೆಪಿಯೇ ಎಂದು ಆರೋಪಿಸಿದ್ದಾರೆ.
ಬಿಜೆಪಿಯು ರಾಷ್ಟ್ರದ ಐಕ್ಯತೆಯನ್ನು ತುಂಡು ತುಂಡಾಗಿ ವಿಭಜಿಸುತ್ತಿದೆ. ನಾಚಿಕೆಗೆಟ್ಟ ರಾಜಕೀಯ ಮಾಡುತ್ತಿರುವ ಬಿಜೆಪಿ, ಮುಸ್ಲಿಮರ ವಿರುದ್ದ ಹಿಂದೂಗಳನ್ನು ಪ್ರಚೋದಿಸುತ್ತಿದೆ. ದೇಶದಲ್ಲಿ ದ್ವೇಷವನ್ನು ಬೆಳೆಸುತ್ತಿದೆ. ಅಲ್ಲದೆ, ಶಾಂತಿಪ್ರಿಯರಾಗಿರುವ ಹಿಂದೂಗಳನ್ನು ಸಿಖ್ ಸಹೋದರರ ವಿರುದ್ಧ ಎತ್ತಿಕಟ್ಟಲು ಯತ್ನಿಸುತ್ತಿದೆ. ಪಂಜಾಬ್‌ನಲ್ಲಿ ಕೋಮು ಗಲಬೆ ಸೃಷ್ಟಿಸಲು ಬಿಜೆಪಿ ಯತ್ನಿಸುತ್ತಿದೆ. ಬಿಜೆಪಿಯೇ ದೇಶದಲ್ಲಿರುವ ನಿಜವಾದ ತುಕ್ಡೇ ಗ್ಯಾಂಗ್” ಎಂದು ಸುಖಬೀರ್ ಬಾದಲ್ ಹೇಳಿದ್ದಾರೆ.
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಕೇಂದ್ರದ ಎನ್‌ಡಿಎ ಸರ್ಕಾರದ ಭಾಗವಾಗಿದ್ದ ಅಕಾಲಿ ದಳ ಪಕ್ಷವು ಕೇಂದ್ರ ಸರ್ಕಾರದ ಕೃಷಿ ನೀತಿಗಳನ್ನು ವಿರೋಧಿಸಿ, ಎನ್‌ಡಿಎಯಿಂದ ಹೊರಬಂದಿದೆ.
ಇದನ್ನೂ ಓದಿ: ಕೇಂದ್ರದ ಕೃಷಿ ಮಸೂದೆಗಳನ್ನು ವಿರೋಧಿಸಿ NDA ಮೈತ್ರಿಕೂಟದಿಂದ ಹೊರಬಂದ ಅಕಾಲಿ ದಳ!

