ಭಾರತ v/s ಆಸ್ಟ್ರೇಲಿಯಾ ಟೆಸ್ಟ್: ಮೊದಲ ಪಂದ್ಯಕ್ಕೆ ತಂಡದ ಆಯ್ಕೆ; ಕನ್ನಡಿಗನಿಗೆ ಅವಕಾಶ!
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಸೌತ್ ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ಗುರುವಾರದಿಂದ ಕ್ರಿಕೆಟ್ ಟೆಸ್ಟ್ ಸರಣಿ ಆರಂಭವಾಗಲಿದೆ. ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ 11 ಕ್ರಿಕೆಟಿಗರನ್ನು ಘೋಷಿಸಿದೆ. ಇವರಲ್ಲಿ ಕರ್ನಾಟಕದ ಮಯಾಂಕ್ ಅಗರ್ವಾಲ್ ಸ್ಥಾನ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 11 ಆಟಗಾರರ ಹೆಸರನ್ನು ಟ್ವೀಟ್‌ನಲ್ಲಿ ಪ್ರಕರಟಿಸಿದೆ. ಇದರಲ್ಲಿ ಪೃಥ್ವಿ ಶಾ ಮತ್ತು ಮಯಾಂಕ್ ಅಗರ್ವಾಲ್ ಪಂದ್ಯದ ಇನ್ನಿಂಗ್ಸ್ ಆರಂಭಿಸವು ಸಾಧ್ಯತೆಯಿದೆ. ಅಲ್ಲದೆ, ಸ್ಪಿನ್ನರ್ ಆರ್ ಅಶ್ವಿನ್ ಮತ್ತು ಸ್ಪೀಡ್ ಬೌಲರ್‌ಗಳಾದ ಉಮೇಶ್ ಯಾದವ್, ಮೊಹಮ್ಮದ್ ಶಮಿ ಮತ್ತು ಜಸ್ಪ್ರಿತ್ ಬುಮ್ರಾ ಪಿಚ್‌ಗೆ ಇಳಿಯಲಿದ್ದಾರೆ.
ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತದ 11 ಆಟಗಾರರು: ಪೃಥ್ವಿ ಶಾ, ಮಾಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ಕ್ಯಾ.), ಅಜಿಂಕ್ಯ ರಹಾನೆ, ಹನುಮಾ ವಿಹಾರಿ, ವೃದ್ಧಿಮಾನ್ ಸಹಾ (ವಿ.ಕೀ.), ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಆಯ್ಕೆಯಾಗಿದ್ದಾರೆ.
https://twitter.com/BCCI/status/1339115913061179395?s=20
ಚೇತೇಶ್ವರ ಪೂಜಾರ, ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ಅಜಿಂಕ್ಯ ರಹಾನೆ ಕ್ರಮವಾಗಿ ಮೂರು, ನಾಲ್ಕು ಮತ್ತು ಐದು ಸ್ಥಾನಗಳನ್ನು ಪಡೆದಿದ್ದಾರೆ. ಹನುಮಾ ವಿಹಾರಿ ಆರನೇ ಬ್ಯಾಟ್ಸ್‌ಮನ್ ಆಗಿ ಆಯ್ಕೆಯಾಗಿದ್ದಾರೆ.
ಮೊದಲ ಟೆಸ್ಟ್ ಮುಗಿದ ನಂತರ ತಂಡದ ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆಯ ಮೇಲೆ ಮನೆಗೆ ಮರಳಲಿದ್ದು, ಎರಡನೇ ಪಂದ್ಯದಿಂದ ರಹಾನೆ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.
ಉಳಿದ ಮೂರು ಟೆಸ್ಟ್ ಪಂದ್ಯಗಳು ಮೆಲ್ಬೋರ್ನ್ (ಡಿಸೆಂಬರ್ 26-30), ಸಿಡ್ನಿ (ಜನವರಿ 7-11) ಮತ್ತು ಬ್ರಿಸ್ಬೇನ್ (ಜನವರಿ 15-19) ನಲ್ಲಿ ನಡೆಯಲಿವೆ.
ಇದನ್ನೂ ಓದಿ: ರೈತ ವಿರೋಧಿ ಶಾಸನಗಳು: ಬಿಜೆಪಿಯ ಹತ್ತು ಸುಳ್ಳುಗಳು!

