FACT CHECK | ಮಹಿಳೆಯ ಬಟ್ಟೆ ಎಳೆದು ದೌರ್ಜನ್ಯ ಎಸಗಿ ಗೂಂಡಾ ವರ್ತನೆ ತೋರಿದ್ದರು ಎಂದು ಸಿದ್ದರಾಮಯ್ಯ ವಿರುದ್ದ ಸುಳ್ಳು ಪೋಸ್ಟ್‌ ಹಂಚಿಕೊಂಡ ಆರ್. ಅಶೋಕ

ಚುನಾವಣೆ ಬಂತೆಂದೆರೆ ರಾಜಕೀಯ ಕೆಸರೆರೆಚಾಟ ಸರ್ವೇಸಾಮಾನ್ಯ, ಒಂದು ರಾಜಕೀಯ ಪಕ್ಷದ ನಾಯಕರು ಮತ್ತೊಂದು ಪಕ್ಷದ ನಾಯಕರ ಕಾಲೆಳೆಯುವುದು ಬಹಳ ಹಿಂದಿನಿಂದೂ ನೆಡೆದುಕೊಂಡು ಬಂದಿರುವ ರೂಢಿ. ಅದರಲ್ಲೂ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರೆಂದರೆ ಒಂದು ಕೈ ಹೆಚ್ಚೇ ಇರುತ್ತದೆ. ಮಾತಿಗೆ ಮಾತು, ಕ್ರಿಯೆಗೆ ಪ್ರತಿಕ್ರಿಯೆ ಸಾಮಾನ್ಯ.

2024 ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾಗುತ್ತಿದಂತೆ ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ತಮ್ಮ ಸೋಶಿಯಲ್ ಮೀಡಿಯಾದಲ್ಲಿ (ಎಕ್ಸ್‌ನಲ್ಲಿ) ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಸದನದಲ್ಲಿ ಪೊಲೀಸರನ್ನು ಬೆದರಿಸುವುದು ಸ್ಪೀಕರ್ ಗೆ ಧಮ್ಕಿ ಹಾಕುವುದು ಮಹಿಳೆಯರ ಬಟ್ಟೆ ಎಳೆದು ದೌರ್ಜನ್ಯ ಮಾಡುವುದು ಕಾರ್ಯಕರ್ತರ ಕಪಾಳಕ್ಕೆ ಹೊಡೆಯುವುದು Mr.ಯತೀಂದ್ರ ಅವರೇ, ನಿಮ್ಮ ತಂದೆ @ಸಿದ್ದರಾಮಯ್ಯನವರು ಗೂಂಡಾಗಿರಿ ಪ್ರದರ್ಶನ ಮಾಡಿರುವ ಇಂತಹ ದೃಶ್ಯಗಳು ಇಂಟರ್ ನೆಟ್ ನಲ್ಲಿ ಸಾಕಷ್ಟಿವೆ.

ಹಲೋ ಅಪ್ಪ, ಗೂಂಡಾಗಿರಿ ಬಿಟ್ಟುಬಿಡಿ ಅಂತ ಸ್ವಲ್ಪ ಬುದ್ಧಿ ಹೇಳಿ, ಈ ದರ್ಪಕ್ಕೆ ಯಾವುದಾದರೂ ಔಷಧಿ ಇದ್ದರೆ ಬರೆದು ಕೊಡಿ @ಡಾ.ಯತೀಂದ್ರ  ನಮ್ಮ ದೇಶದ ಸನ್ಮಾನ್ಯ ಗೃಹ ಸಚಿವರ ಬಗ್ಗೆ ಮಾತನಾಡುವಾಗ ನಾಲಿಗೆಯ ಮೇಲೆ ಸ್ವಲ್ಪ ಹಿಡಿತವಿರಲಿ. ಎಂಬ ಹೇಳಿಕೆಯೊಂದಿಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ಆರ್ ಅಶೋಕ ರವರ ಪೋಸ್ಟ್‌ನ ಹಿನ್ನಲೆ

ಹನೂರಿನಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಮಾತನಾಡುತ್ತಾ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಒಬ್ಬ ಗೂಂಡಾ, ರೌಡಿ. ಇಂಥವರನ್ನು ಪ್ರಧಾನಿ ಮೋದಿಯವರು ತಮ್ಮ ಪಕ್ಕದಲ್ಲಿ ಕೂರಿಸಿಕೊಂಡಿದ್ದಾರೆ’ ಅಪರಾಧ ಚಟುವಟಿಕೆಗಳ ಹಿನ್ನಲೆಯನ್ನು ಹೊಂದಿರುವ ಅವರು ಈಗ ದೇಶದ ಉನ್ನತ ಸ್ಥಾನದಲ್ಲಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರ ಗೃಹ ಸಚಿವರ ಕುರಿತು ಗೂಂಡಾ ಹೇಳಿಕೆ ನೀಡಿದ ಯತೀಂದ್ರ ಸಿದ್ದರಾಮಯ್ಯನವರನ್ನು ಗುರಿಯಾಗಿಸಿಕೊಂಡು ನಿಮ್ಮ ತಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗೂಂಡಾ ವರ್ತನೆಗೆ ಮೊದಲು ಔಷಧಿ ಕೊಡಿ ಎಂದು ತಿರಿಗೇಟು ನೀಡಲು ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಆದರೆ ಈ ವಿಡಿಯೋ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ದೃಶ್ಯಗಳು ಮತ್ತು ಆರ್. ಅಶೋಕ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಮಾಡಿರುವ ಆರೋಪಗಳು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವಿಡಿಯೋ 1

ವಿರೋಧ ಪಕ್ಷದ ನಾಯಕ ಆರ್ ಅಶೋಕ್ ತಮ್ಮ ಪೋಸ್ಟ್‌ನಲ್ಲಿ ನಾಲ್ಕು ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದು ಅದರಲ್ಲಿ ಮೊದಲನೆಯದ್ದು ಪತ್ರಿಕಾಗೋಷ್ಠಿ ಮುಗಿಸಿ ಹೊರಡುವ ವೇಳೆ ವ್ಯಕ್ತಿಯೊಬ್ಬನ ಕೆನ್ನಗೆ ಸಿದ್ದರಾಮಯ್ಯ ಹೊಡೆಯುವುದನ್ನು ನೋಡಬಹುದು, ವಿಡಿಯೋದಲ್ಲಿ ಸಿ.ಎಂ ಇಬ್ರಾಹಿಂ ಅವರು ಇರುವುದನ್ನು ನೋಡಬಹುದು.

ಕೀವರ್ಡ್ ಮೂಲಕ ಗೂಗಲ್ ಸರ್ಚ್ ಮಾಡಿದಾಗ, ಅವರು ಹಂಚಿಕೊಂಡ ವಿಡಿಯೋ 2019ರದ್ದು ಎಂಬ ಮಾಹಿತಿ ಲಭ್ಯವಾಗಿದೆ.

ಸಿದ್ದರಾಮಯ್ಯನವರ ಆಪ್ತ ನಾಡನಹಳ್ಳಿ ರವಿ ಎಂಬುವವರು 2019 ಸೆಪ್ಟಂಬರ್ 4 ರಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯರವರು ಆಗಮಿಸಿದ ವೇಳೆ ರವಿ ಕೆನ್ನೆಗೆ ಹೊಡೆದಿದ್ದರು. ಈ ಘಟನೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ ರವಿ, “ಅವರು ನನಗೆ ತಮಾಷೆಗೆ ಕಪಾಳಕ್ಕೆ ಹೊಡೆದರಷ್ಟೆ. ನಾನು ಅದನ್ನು ತಪ್ಪಾಗಿ ತಿಳಿದಿಲ್ಲ” ಎಂದು ಸ್ಪಷ್ಟನೆ ನೀಡಿದ್ದರು.

“ನಾನು ಸಿದ್ದರಾಮಯ್ಯನವರನ್ನು ಮೈಸೂರಿನಲ್ಲಿ ಡಿಕೆಶಿ ಪರ ನಡೆಯುತ್ತಿದ್ದ ಪ್ರತಿಭಟನೆಗೆ ಆಹ್ವಾನಿಸಲು ಬಂದಿದ್ದೆ. ನಾನು ಕೇಳಿದ್ದಕ್ಕೆ, ಬರಲ್ಲ ನೀವೇ ಪ್ರತಿಭಟನೆ ಮಾಡಿ ಅಂದರು. ಆದರೆ ಮರಿಗೌಡರು ಸಿದ್ದರಾಮಯ್ಯ ಅವರಿಗೆ ಫೋನ್ ಮಾಡಿ ಕೊಡೋಕೆ ಹೇಳಿದ್ದರು. ಅದಕ್ಕೆ ಕೊಡೋಕೆ ಹೋದೆ. ಅದಕ್ಕೆ ತಮಾಷೆಗೆ ಅವರು ಕಪಾಳಕ್ಕೆ ಹೊಡೆದರು. ಇದರಲ್ಲಿ ಬೇರೆ ಯಾವುದೇ ಅರ್ಥ ಕಲ್ಪಿಸುವ ಅಗತ್ಯ ಇಲ್ಲ” ಎಂದು ಸಿದ್ದರಾಮಯ್ಯ ಆಪ್ತರು ಹಾಗೂ ಗ್ರಾಮಪಂಚಾಯಿತಿ ಮಾಜಿ ಸದಸ್ಯ ನಾಡನಹಳ್ಳಿ ರವಿ ಸ್ಪಷ್ಟಪಡಿಸಿದ್ದಾರೆ ಎಂದು ವರದಿಯಾಗಿದೆ.

ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ ಹಿಂತಿರುಗಿ ತೆರಳುತ್ತಿದ್ದ ಸಮಯದಲ್ಲಿ ಸಿದ್ದರಾಮಯ್ಯ ಅವರ ಬೆಂಬಲಿಗ ರವಿಯವರು ಫೋನ್ ಮಾಡಿ ಮಾತನಾಡುವಂತೆ ಅವರಿಗೆ ಕೊಟ್ಟಿದ್ದರು. ಇದಕ್ಕೆ ಸಿಟ್ಟಿಗೆದ್ದ ಸಿದ್ದರಾಮಯ್ಯ ಅವರು ಮೊಬೈಲ್ ತಳ್ಳಿ, ಬೆಂಬಲಿಗನ ಕೆನ್ನೆಗೆ ಬಾರಿಸಿ, ನಡಿಯೋ ಎಂದು ಕರೆದುಕೊಂಡು ಹೋಗಿದ್ದರು. ಇದು ಮಾಧ್ಯಮಗಳಲ್ಲಿ ಸುದ್ದಿಯಾಗಿ ಚರ್ಚೆಗೆ ಗ್ರಾಸವಾಯಿತು. ಇದನ್ನು ಗೂಂಡಾಗಿರಿ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ ಹಂಚಿಕೊಂಡಿದ್ದಾರೆ.

ವಿಡಿಯೋ 2

ಎರಡನೇ ವಿಡಿಯೋದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಿಳೆಯೊಬ್ಬರ ಬಟ್ಟೆ ಎಳೆದು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನು ಪರಿಶೀಲಿಸದಾಗ ಘಟನೆ 2019ರಲ್ಲಿ ನಡೆದಿದ್ದು, ಆಗ ವರುಣಾ ಕ್ಷೇತ್ರದ ಶಾಸಕ, ಯತೀಂದ್ರ ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲಿ ನಡೆದ ಅಹವಾಲು ಸಭೆಯಲ್ಲಿ ಮಗನ ವಿರುದ್ಧ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಜಮಾಲ ಅವರು ದೂರು ಹೇಳಿ, ಮೇಜು ಕುಟ್ಟಿ ಮಾತನಾಡಿದಾಗ ಸಿದ್ದರಾಮಯ್ಯ ಸಿಟ್ಟಿಗೆದ್ದಿದ್ದು, ಆಕೆ ಕೈಯಿಂದ ಮೈಕ್ ಎಳೆಯಲು ಯತ್ನಿಸಿದ್ದಾರೆ. ಈ ವೇಳೆ ದುಪ್ಪಟ್ಟಾ ಜಾರಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

Fact Check: ಜನತಾ ದರ್ಶನದಲ್ಲಿ ಸಿಎಂ ಸಿದ್ದರಾಮಯ್ಯ ಮಹಿಳೆಯ ದುಪ್ಪಟ್ಟಾ ಎಳೆದಿದ್ದಾರೆಯೇ?

ಈ ಘಟನೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದ ಸಿದ್ದಾರಮಯ್ಯ “ಇಂದು ವರುಣ ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಕಾರ್ಯಕರ್ತೆಯೊಬ್ಬರ‌ ದೀರ್ಘ ಭಾಷಣವನ್ನು ನಿಲ್ಲಿಸಲು ಪ್ರಯತ್ನಿಸುವಾಗ ನಡೆದ ಘಟನೆ‌ ಆಕಸ್ಮಿಕವಾದುದು, ಅದರಲ್ಲಿ ದುರುದ್ದೇಶ ಇರಲಿಲ್ಲ. 15 ವರ್ಷಗಳಿಂದ‌ ನಾನು ಬಲ್ಲ‌ ಆ‌‌ ಕಾರ್ಯಕರ್ತೆ ನನ್ನ‌ಸೋದರಿ ಸಮಾನ. ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಸದನದಲ್ಲಿ ಪೊಲೀಸರನ್ನು ಹೆದರಿಸುವುದು, ಸಭಾಪತಿಗಳಿಗೆ ದಮ್ಕಿ ಹಾಕುವುದು ಎಂದು ಒಂದು ವಿಡಿಯೋದಲ್ಲಿ ಪ್ರಸ್ತಾಪಿಸಿದ್ದಾರೆ. ಆದರೆ ಇದಾವುದರ ವಿರುದ್ದವು ಸಿದ್ದರಾಮಯ್ಯನವರ ಮೇಲೆ ದೂರುಗಳಾಗಲಿ, ಪ್ರಕರಣಗಳಾಗಲಿ ದಾಖಲಾಗಿಲ್ಲ.ಹಾಗಾಗಿ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ ಯತೀಂದ್ರ ಸಿದ್ದರಾಮಯ್ಯರವರ ಅಮಿತ್ ಶಾ ರೌಡಿ ಮತ್ತು ಗೂಂಡಾ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಲು ಹಳೆಯ ಮತ್ತು ಅಸಂಬದ್ದ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಜನರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡಿದ್ದಾರೆ.

ಆರ್.ಅಶೋಕ ಟ್ವೀಟ್‌ಗೆ ಪ್ರತಿಕ್ರಿಸಿರುವ ಕೆಲವರು ಬಿಜೆಪಿ ಮಾಜಿ ಸಚಿವ ವಿ.ಸೋಮಣ್ಣ ಕಳೆದ ವಿಧಾನಸಭಾ ಚುನಾವಣೆ ವೇಳೆ ಮಹಿಳೆಯ ಕೆನ್ನೆಗೆ ಹೊಡೆದ ವಿಡಿಯೋವನ್ನು ಹಂಚಿಕೊಂಡು ಇದನ್ನು ಏನೆಂದು ಕರೆಯುತ್ತೀರಿ ಹೇಳಿ ಅಶೋಕರವರೇ ಎಂದು ಪ್ರಶ್ನಿಸಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪ್ರಧಾನಿ ಮೋದಿ 10 ವರ್ಷದಲ್ಲಿ ಒಂದೇ ಒಂದು ರಜೆಯನ್ನು ತೆಗೆದುಕೊಂಡಿಲ್ಲವಂತೆ, ಒಂದೂ ಹಗರಣ ಮಾಡಿಲ್ಲವಂತೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights