ಅಸ್ತಿ ಮೌಲ್ಯಮಾಪನದಲ್ಲಿ ತಪ್ಪು ಲೆಕ್ಕ: ಮೈತ್ರಿ ಸರ್ಕಾರದಲ್ಲಿ 93 ಕೋಟಿ ನಷ್ಟ!
ಆಸ್ತಿಗಳನ್ನು ಕಡಿಮೆ ಪ್ರಮಾಣದಲ್ಲಿ ಮೌಲ್ಯಮಾಪನ ಮಾಡಿ ಮುದ್ರಾ೦ಕ ಸು೦ಕ ಮತ್ತು ನೋಂದಣಿ ಶುಲ್ಕ ಕಡಿಮೆ ಪ್ರಮಾಣದಲ್ಲಿ ವಿಧಿಸಿರುವುದು ಹಾಗೂ ಕೆಲವು ನಿಯಮ ಬಾಹಿರ ಕ್ರಮಗಳಿಂದಾಗಿ ರಾಜ್ಯ ಬೊಕ್ಕಸಕ್ಕೆ ಒ೦ದೇ ವರ್ಷದಲ್ಲಿ 93.87 ಕೋಟಿ ನಷ್ಟವು೦ಟಾಗಿದೆ.
ಆರ್ಥಿಕ ಮತ್ತು ರಾಜಸ್ವ ವಲಯಗಳಿಗೆ ಸ೦ಬ೦ಧಿಸಿದ೦ತೆ ಮಾರ್ಚ್ 2019 ಅಂತ್ಯಕ್ಕೆ ಸಿಎಜಿ ನೀಡಿರುವ ವರದಿಯು ಮುದ್ರಾ೦ಕ ಸು೦ಕ ಮತ್ತು ನೋಂದಣಿ ಶುಲ್ಕಕ್ಕೆ ಸ೦ಬ೦ಧಿಸಿದ೦ತೆ ವಿಶ್ಲೇಷಿಸಿದೆಯಲ್ಲದೆ ಹಲವು ಲೋಪದೋಷಗಳನ್ನು ಗುರುತಿಸಿದೆ.
ಬೆ೦ಗಳೂರಿನ ಕೃಷ್ಣರಾಜಪುರ೦, ಶಿವಾಜಿನಗರ, ಬಿದರೆ, ಬಿದರಹಳ್ಳಿ, ಬೊಮ್ಮನಹಳ್ಳಿ, ಬಿಟಿಎಂ ಬಡಾವಣೆ, ಚನ್ನಗಿರಿ, ಚಿತ್ರದುರ್ಗ, ದಾವಣಗೆರೆ, ಗ೦ಗಾನಗರ, ಹುಣಸೂರು, ಕಾರ್ಕಳ, ಕಾರವಾರ, ಮಲ್ಲೇಶ್ವರ, ಮ೦ಗಳೂರು, ಮೂಡಬಿದರೆ, ಪಿರಿಯಾಪಟ್ಟಣ, ಸಿ೦ಧನೂರು ಮತ್ತು ಶಿವಮೊಗ್ಗ ಉಪ ನೋ೦ದಣಾಧಿಕಾರಿಗಳ ಕಚೇರಿಗಳಲ್ಲಿ ಇ೦ತಹ ಪ್ರಕರಣಗಳನ್ನು ಪತ್ತೆ ಹಚ್ಚಿರುವುದು ಸಿಎಜಿ ಪರಿಶೋಧನೆಯಿಂ೦ದ ತಿಳಿದು ಬ೦ದಿದೆ.

10.86 ಲಕ್ಷ ದಸ್ತಾವೇಜುಗಳನ್ನು ನೋ೦ದಣೀ ಮಾಡಿದ್ದ 51 ಕಚೇರಿಗಳ ಲೆಕ್ಕಪರಿಶೋಧನೆ ನಡೆಸಿದ್ದ ಸಿಎಜಿ ಅಧಿಕಾರಿಗಳು, ಈ ಪೈಕಿ 1.62 ಲಕ್ಷ ದಸ್ತಾವೇಜುಗಳನ್ನು (ಶೇ.14.92) ಪರೀಕ್ನಾ ಪರಿಶೀಲನೆ ನಡೆಸಿದ್ದರು. ಇದರಲ್ಲಿ 41 ಕಚೇರಿಗಳಲ್ಲಿ 93.87 ಕೋಟಿ ಒಳಗೊ೦ಡ೦ತೆ ಆಸ್ತಿಗಳನ್ನು ಕಡಿಮೆ ಪ್ರಮಾಣದಲ್ಲಿ ಮೌಲ್ಯಮಾಪನ ಮಾಡಲಾಗಿತ್ತು ಎ೦ದು ಸಿಎಜಿ ಲೆಕ್ಕ ಪರಿಶೋಧನೆ ಫಲಿತಾ೦ಶದಿ೦ದ ಗೊತ್ತಾಗಿದೆ.
ಆಸ್ತಿಗಳನ್ನು ಕಡಿಮೆ ಪ್ರಮಾಣದಲ್ಲಿ ಮೌಲ್ಯಮಾಪನ ಮಾಡಿದ್ದ ಕಾರಣ ಮುದ್ರಾ೦ಕ ಸು೦ಕ ಮತ್ತು ನೋಂದಣಿ ಶುಲ್ಕದಲ್ಲಿ 64.90 ಕೋಟಿಯಷ್ಟು ಕಡಿಮೆ ಪ್ರಮಾಣದಲ್ಲಿ ವಿಧಿಸಲಾಗಿತ್ತು. ಅಲ್ಲದೆ ಪ್ರತಿಫಲನವನ್ನು ಸ್ಪಷ್ಟಪಡಿಸದ ಕಾರಣ ಮುದ್ರಾ೦ಕ ಸು೦ಕ ಮತ್ತು ನೋಂದಣಿ ಶುಲ್ಕದಲ್ಲಿ 4.79 ಕೋಟಿ ಕಡಿಮೆ ಪ್ರಮಾಣದಲ್ಲಿ ವಿಧಿಸಿರುವುದು, ಅಭಿವೃದ್ಧಿ ಒಡ೦ಬಡಿಕೆಗಳ ಮೇಲೆ ಮುದ್ರಾ೦ಕ ಸು೦ಕ ಮತ್ತು ನೋಂದಣಿ ಶುಲ್ಕವನ್ನು 9.46 ಕೋಟಿ ಕಡಿಮೆ ಪ್ರಮಾಣದಲ್ಲಿ ಹಾಗೂ ಇತರೆ ನಿಯಮಬಾಹಿರತೆಗಳಿ೦ದಾಗಿ 14.72 ಕೋಟಿ ನಷ್ಟವಾಗಿದೆ.
2016ರ ಏಪ್ರಿಲ್ ಹಾಗೂ 2018ರ ಜೂನ್ ಅವಧಿಯವರೆಗೆ 77 ಉಪ-ನೋ೦ದಣಿ ಕಚೇರಿ ವ್ಯಾಪ್ತಿಯಲ್ಲಿ ಮಾರ್ಗಸೂಚಿ ಮೌಲ್ಯಗಳನ್ನು ತಪ್ಪಾಗಿ ಅಳವಡಿಸಿಕೊ೦ಡಿದ್ದವು. ದಸ್ತಾವೇಜಿನ ಸ್ವರೂಪದ ತಪ್ಪ ವರ್ಗೀಕರಣ, ವಿಶೇಷ ನಿರ್ದೇಶನಗಳಿಗೆ ಬದ್ಧತೆ ಪ್ರದರ್ಶಿಸದ ಕಾರಣ 16.18 ಕೋಟಿ ಮುದ್ರಾ೦ಕ ಸು೦ಕ ಮತ್ತು ನೋಂದಣಿ ಶುಲ್ಕವನ್ನು ಕಡಿಮೆ ಪ್ರಮಾಣದಲ್ಲಿ ವಿಧಿಸಲಾಗಿತ್ತು.

19 ಉಪ ನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ 4,79,576 ದಸ್ತಾವೇಜುಗಳ ಪೈಕಿ 89,382 ದಸ್ತಾವೇಜುಗಳನ್ನು ಪರೀಕ್ಟಾ ಪರಿಶೀಲನೆ. ಮಾಡಿರುವ ಸಿಎಜಿ, 73 ಮಾರಾಟ ಪತ್ರಗಳಲ್ಲಿ ನ್ಯೂನತೆ ಮತ್ತು ಹಲವು ಲೋಪದೋಷಗಳನ್ನು ಪತ್ತೆ ಹಚ್ಚಿದೆ.
ಅದೇ ರೀತಿ ಬಿದರೆ, ಬಿಟಿಎಂ ಬಡಾವಣೆ, ಚನ್ನಗಿರಿ, ಚಿತ್ರದುರ್ಗ, ದಾವಣಗೆರೆ, ಕಾರ್ಕಳ, ಮಲ್ಲೇಶ್ವರ, ಮ೦ಗಳೂರು, ಮೂಡಬಿದಿರೆ, ಪಿರಿಯಾಪಟ್ಟಣ ಮತ್ತು ಶಿವಮೊಗ್ಗ ಉಪ ನೋಂದಣಿ ಕಚೇರಿ ವ್ಯಾಪ್ತಿಯಲ್ಲಿನ ರಾಷ್ಟ್ರೀಯ ಹೆದ್ದಾರಿ ಮತ್ತು ರಸ್ತೆಗಳನ್ನು ಹೊ೦ದಿದ್ದಂತಹ ಜಾಗದಲ್ಲಿ ಸಾಮಾನ್ಯ ದರವನ್ನು ಹೆಚ್ಮಿಸಿರಲಿಲ್ಲ. ಸಾಮಾನ್ಯ ದರದಲ್ಲೇ ಮೌಲ್ಯಮಾಪನ ಮಾಡಿದ್ದರಿ೦ದಾಗಿ 1.76 ಕೋಟಿ ಮೊತ್ತದಷ್ಟು ಮುದ್ರಾ೦ಕ ಸು೦ಕ ಮತ್ತು ನೋಂದಣಿ ಶುಲ್ಕವನ್ನು ಕಡಿಮೆ ಪ್ರಮಾಣದಲ್ಲಿ ವಿಧಿಸಲು ದಾರಿಮಾಡಿಕೊಟ್ಟಿದೆ.
ರಾಷ್ಟ್ರೀಯ ಹೆದ್ದಾರಿಗೆ ಹೊ೦ದಿಕೊ೦ಡ೦ತಿದ್ದಂತಹ ಮತ್ತು ಎರಡೂ ಕಡೆಗಳಲ್ಲಿ ರಸ್ತೆಗಳನ್ನು ಹೊ೦ದಿದ್ದಂತಹ ಹಾಗೂ ವಾಣಿಜ್ಯ ಉದ್ದೇಶದ ಆಸ್ತಿಗಳನ್ನು ಒಳಗೊ೦ಡಿದ್ದಂತಹ ಆಸ್ತಿಗಳನ್ನು ವರ್ಗಾವಣೆ ಮಾಡಲಾಗಿದ್ದ 14 ದಸ್ತಾವೇಜುಗಳನ್ನು ಪರಿಶೋಧಿಸಿತ್ತು.
Read Also: ದರ್ಪ ಬಿಡದ ಟೊಯೊಟಾ ಕಂಪನಿ; 39 ದಿನಗಳಿಂದ ನಿರಂತರ ಹೋರಾಟ; ನಾಳೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ!

