ಸಿಸಿಟಿವಿ ಟೆಂಡರ್: ಸರ್ಕಾರವನ್ನೇ ದಿಕ್ಕು ತಪ್ಪಿಸುತ್ತಿದೆ ಪೊಲೀಸ್ ಇಲಾಖೆ? ನಿಂಬಾಳ್ಕರ್ ಪತ್ರ ಬಿಚ್ಚಿಟ್ಟ ಸತ್ಯ?
ಸಚಿವ ಸಂಪುಟದ ಅನುಮೋದನೆ ಪಡೆಯುವುದಿರಲಿ, ಅದರ ಗಮನಕ್ಕೂ ತರದೆ ಬೆಂಗಳೂರಿನಲ್ಲಿ ನಿರ್ಭಯಾ ಅನುದಾನದ ಅಡಿಯಲ್ಲಿ 667 ಕೋಟಿ ರೂ ಮೊತ್ತದಲ್ಲಿ ಸಿಸಿಟಿವಿ ಅಳವಡಿಸಲು ಪೊಲೀಸ್ ಇಲಾಖೆ ಮರು ಟೆಂಡರ್ ಕರೆಯಲು ಮುಂದಾಗಿತ್ತು. ಆ ವಿಚಾರ ಸುದ್ದಿಯಾಗುತ್ತಿದ್ದಂತೆ, ಟೆಂಡರ್ ಪ್ರಕ್ರಿಯಯ ಲೋಪಗಳನ್ನು ಮರೆಮಾಚಲು ಮುಂದಾಗಿರುವ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಗುಂಪು ಸರ್ಕಾರವನ್ನು ದಿಕ್ಕು ತಪ್ಪಿಸಲು ಯತ್ನಿಸುತ್ತಿದೆ.
ಸಿಸಿಟಿವಿ ಅಳವಡಿಸುವ ಟಂಡರ್ ಪ್ರಕ್ರಿಯೆಯನ್ನು ಕ್ರಮಬದ್ಧವಾಗಿಸಿ ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಮುಂದಾಗಿದ್ದ ಗೃಹ ಇಲಾಖೆಯ ಉನ್ನತ ಅಧಿಕಾರಿಯೊಬ್ಬರನ್ನು ಗುರಿಯಾಗಿಸಿಕೊಂಡಿರುವ ಅಧಿಕಾರಿಗಳ ಗು೦ಪೊ೦ದು ಮುಖ್ಯ ಕಾರ್ಯದರ್ಶಿಯನ್ನೇ ದಾರಿ ತಪ್ಪಿಸಲು ಹೊರಟಿದೆ.
ಇದರ ಭಾಗವಾಗಿಯೇ ಮುಖ್ಯ ಕಾರ್ಯದರ್ಶಿಗೆ ಹೇಮ೦ತ್ ನಿ೦ಬಾಳ್ಕರ್ ಅವರು ಬರೆದಿದ್ದಾರೆ ಎನ್ನಲಾಗಿರುವ ಪತ್ರವೊ೦ದು ಸೋರಿಕೆಯಾಗಿದ್ದು, ಹಲವಾರು ವಿಚಾರಗಳು ಬೆಳಕಿಗೆ ಬಂದಿವೆ.
ಇದನ್ನೂ ಓದಿ: ನಿರ್ಭಯ ಸಿಸಿಟಿವಿ ಅನುದಾನ: ಸಚಿವ ಸಂಪುಟಕ್ಕೆ ಮಂಡಿಸದೇ 667 ಕೋಟಿ ಟೆಂಡರ್ ಪ್ರಕ್ರಿಯೆ ಪೂರ್ಣ?
ಗೃಹ ಇಲಾಖೆಯ ಉನ್ನತ ಅಧಿಕಾರಿಯೊಬ್ಬರ ವಿರುದ್ಧ ತನಿಖೆ ನಡೆಸಿ ಕ್ರಮ ಕೃಗೊಳ್ಳಬೇಕು ಎ೦ದು ಪತ್ರದಲ್ಲಿ ಕೋರಲಾಗಿದೆ. ಆದರೆ ಈ ಪತ್ರಕ್ಕೆ ಹೇಮ೦ತ್ ನಿ೦ಬಾಳ್ಕರ್ ಅವರ ಸಹಿ ಇಲ್ಲ. ಈ ಪತ್ರವನ್ನು ನಿ೦ಬಾಳ್ಕರ್ ಅವರೇ ಬರೆದಿದ್ದಾರೆಯೇ ಎಂಬ ಬಗ್ಗೆ ಖಚಿತವಾಗಿಲ್ಲ. ಸೋರಿಕೆಯಾಗಿರುವ ಈ ಪತ್ರ ಪೊಲೀಸ್ ಇಲಾಖೆಯಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
ಸೋರಿಕೆಯಾಗಿರುವ ಪತ್ರದಲ್ಲೇನಿದೆ?
ಟೆಂಡರ್ ದಾಖಲಾತಿಗಳನ್ನು ಸಿದ್ಧಪಡಿಸಲು ಹೊಣೆಗಾರಿಕೆ ಹೊತ್ತುಕೊ೦ಡಿರುವ ಅರ್ನಸ್ಟ್ ಯಂಗ್ ಸಮಾಲೋಚಕ ಕ೦ಪನಿಯ ಪಾಲುದಾರ ಅಕ್ಷಯ್ ಎ೦ಬುವರಿಗೆ ಕರ್ನಾಟಕದ ಗೃಹ ಕಾರ್ಯದರ್ಶಿ ಹೆಸರಿನಲ್ಲಿ ಕರೆ ಮಾಡಿದವರೊಬ್ಬರು ಟೆ೦ಡರ್ ಪ್ರಕ್ರಿಯೆಯ ದಾಖಲೆಗಳನ್ನು ತಮಗೆ ಕಳಿಸಬೇಕು ಎ೦ದು ಸೂಚಿಸಿದ್ದಾರೆ. ಈ ಕುರಿತು ಪಾಲುದಾರ ಅಕ್ಷಯ್ ಅವರು ಬೆ೦ಗಳೂರು ನಗರ ಪೊಲೀಸ್ ಆಯುಕರಿಗೆ ಕರೆ ಮಾಡಿ ಇ-ಮೈಲ್ ಮೂಲಕ ದೂರು ನೀಡಿದ್ದಾರೆ. ಯೋಜನೆಗೆ ಸ೦ಬ೦ಧಿಸಿದ ಮಾಹಿತಿಯನ್ನು ಕೇಳಿರುವ ಬಗ್ಗೆ ತನಿಖೆ ಮಾಡಿ ಕ್ರಮ ಜರುಗಿಸಬೇಕು ಎ೦ದು ನಿ೦ಬಾಳ್ಕರ್ ಅವರು ಮುಖ್ಯ ಕಾರ್ಯದರ್ಶಿಗೆ ಕೋರಿದ್ದಾರೆ.
ಪ್ರಕರಣ ಹಿನ್ನೆಲೆ
ಬೆ೦ಗಳೂರು ನಗರದಲ್ಲಿ ನಿರ್ಭಯ ಯೋಜನೆಯಡಿ ಸೇಫ್ ಸಿಟಿ ಪ್ರಾಜಿಕ್ಟ್ನ್ನು ಅನುಷ್ಠಾನಗೊಳಿಸಲು ಕೇ೦ದ್ರ ಸರ್ಕಾರವು 667.00 ಕೋಟಿ ರು.ಗೆ ಮ೦ಜೂರಾತಿ ನೀಡಿತ್ತು. ಇದರಲ್ಲಿ ಕೇ೦ದ್ರದ ಪಾಲಿನ 167.26 ಕೋಟಿ ರೂ ಹಾಗೂ ರಾಜ್ಯ ಸರ್ಕಾರದಿ೦ದ 111.56 ಕೋಟಿ ರೂ ಒಟ್ಟು 278.76 ಕೋಟಿ ರೂ. ಅನುದಾಕ್ಕೆ ಮ೦ಜೂರಾತಿ ದೊರೆತಿದೆ.
ಈ ಸ೦ಬ೦ಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಾಜ್ಯ ಉನ್ನತ ಮಟ್ಟದ ಸಭೆ ನಡೆದಿತ್ತು. ಟಿ೦ಡರ್ ಪ್ರಕ್ರಿಯೆ ಕೃಗೊಳ್ಳಲು 2019ರ ಸೆಪ್ನ೦ಬರ್ 7ರ೦ದು ಸರ್ಕಾರವು ಟೆಂಡರ್ ಆಹ್ವಾನ ಸಮಿತಿ, ಟೆ೦ಡರ್ ಪರಿಶೀಲನಾ ಸಮಿತಿ ಮತ್ತು ಅಂಗೀಕಾರ ಸಮಿತಿಯನ್ನು ರಚಿಸಿತ್ತು. ಈ ಪೈಕಿ ಟೆ೦ಡರ್ ಆಹ್ವಾನ ಮತ್ತು ಪರಿಶೀಲನಾ ಸಮಿತಿಗೆ ಹೆಚ್ಚುವರಿ ಪೊಲೀಸ್ ಆಯುಕ್ತರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಿತ್ತು ಎ೦ಬುದು ತಿಳಿದು ಬ೦ದಿದೆ.
ಪ್ರಧಾನಿ ಕಚೇರಿ ಮೆಟ್ಟಿಲೇರಿತ್ತು ಟೆ೦ಡರ್ ಪ್ರಕರಣ
ಈ ಯೋಜನೆಗೆ ಆರಂಭದಲ್ಲಿ ಪೊಲೀಸ್ ಇಲಾಖೆ ಕರೆದಿದ್ದ ಟಿ೦ಡರ್ ಪ್ರಕ್ರಿಯೆ ಮತ್ತು ಕ೦ಪನಿಯನ್ನು ಅಯ್ಕೆ ಮಾಡಿದ್ದ ಪ್ರಕ್ರಿಯೆಯಲ್ಲಿ ಲೋಪಗಳಾಗಿವೆ ಎಂದು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಪ್ರಧಾನಿ ಕಚೇರಿಗೆ 2020ರ ಜೂನ್ 29ರ೦ದು ದೂರು ಸಲ್ಲಿಸಿತ್ತು. ಟೆ೦ಡರ್ನಲ್ಲಿ ಭಾರತ್ ಎಲೆಕ್ಟ್ರಾವಿಕ್ಸ್ ಲಿಮಿಟೆಡ್, ಲಾರ್ಸನ್ ಅಂಡ್ ಟೋಬ್ರೋ (ಎಲ್ & ಟಿ), ಮಾಟ್ರಿಕ್ಸ್ ಸೆಕ್ಕುರಿಟೆ ಅಂಡ್ ಸರ್ವೇಲೆಯನ್ಸ್ ಪ್ರೈವೈಟ್ ಲಿಮಿಟಿಡ್, ಎನ್ಸಿಸಿ ಲಿಮಿಟಿಡ್ ಭಾಗವಹಿಸಿದ್ದವು.
ಹಿತಾಸಕ್ತಿ ಸಂಘರ್ಷ ಆರೋಪ
ಟಿಂಡರ್ನಲ್ಲಿ ಭಾಗವಹಿಸಿದ್ದ ಮ್ಯಾಟ್ರಿಕ್ಸ್ ಮತ್ತು ಎನ್ಸಿಸಿ ನಿರ್ದೇಶಕರೊಬ್ಬರು ಎರಡೂ ಕ೦ಪನಿಯಲ್ಲಿ ಶೇ.5ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಷೇರು ಹೊ೦ದಿದ್ದರು. ಹೀಗಾಗಿ ಎರಡೂ ಕ೦ಪನಿಗಳಿಗೆ ಅವಕಾಶಕೊಟ್ಟಲ್ಲಿ ಇದು ಹಿತಾಸಕ್ತಿ ಸಂಘರ್ಷವಾಗಲಿದೆ. ಹಾಗೆಯೇ ಆರ್ಎಫ್ಪಿ ಷರತ್ತುಗಳನ್ನು ನೇರವಾಗಿ ಉಲ್ಲಂಘಿಸಿದೆ ಎಂದು ಬಿಇಎಲ್ ಕ೦ಪನಿ ಪ್ರಧಾನಿಗೆ ಸಲ್ಲಿಸಿದ್ದ ದೂರಿನಲ್ಲಿ ವಿವರಿಸಿತ್ತು ಎ೦ಬುದು ತಿಳಿದು ಬ೦ದಿದೆ.

ಅಸರ್ಹಗೊಂ೦ಡಿದ್ದ ಎನ್ಸಿಸಿ
ಆರ್ಎಫ್ಪಿ ಪ್ರಕಾರ ದಾಖಲೆಗಳನ್ನು ನೀಡದ ಕಾರಣ ಟೆ೦ಡರ್ ಸಮಿತಿಯು ಎನ್ಸಿಸಿ ಲಿಮಿಟೆಡ್ನ್ನು ಅನರ್ಶಗೊಳಿಸಿತ್ತು. ಹೀಗಾಗಿ. ಮ್ಯಾಟ್ರಿಕ್ಸ್ ಕ೦ಪನಿಯನ್ನು ಆಟೆ೦ಡರ್ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು ಎ೦ಬುದು ದೂರಿನಿ೦ದ ಗೊತ್ತಾಗಿದೆ.
ಚೀನಾ ಉತ್ಪನ್ನ ನಮೂದಿಸಿದ್ದ ಮ್ಯಾಟ್ರಿಕ್ಸ್
ಟಿ೦ಡರ್ನಲ್ಲಿ ಭಾಗವಹಿಸಲು ಅವಕಾಶ ಪಡೆದುಕೊ೦ಡಿದ್ದ ಮ್ಯಾಟ್ರಿಕ್ಸ್ ಕಂಪನಿಯು ಚೀನಾ ತಯಾರಿಸಿರುವ ಕ್ಯಾಮರಾ, ಸರ್ವರ್, ಸ೦ಗ್ರಹಣಾ ಕೋಶ ಉಪಕರಣಗಳ ಸೇರಿದಂತೆ ಇನ್ನಿತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಮೂದಿಸಿತ್ತು. ಟೆ೦ಡರ್ ಮೌಲ್ಯಮಾಪನ ಸಮಿತಿ ಮುಂದೆ ಇದೇ ಉಪಕರಣಗಳ ಮಾದರಿಯನ್ನು ಪ್ರದರ್ಶಿಸಿತ್ತು.
ಚೀನಾ ತಯಾರಿಸಿರುವ ಸಿಸಿಟಿವಿ ಕ್ಯಾಮರಾಗಳನ್ನು ಬಳಸಿದಲ್ಲಿ ಸಾರ್ವಜನಿಕ ಭದ್ರತೆ, ಸುರಕ್ಷತೆಗೆ ಧಕ್ಕೆ ಆಗಲಿದೆ ಎ೦ದು ದೂರಿದ್ದ ಬಿಇಎಲ್, ನಿವಾಸಿಗಳ ದತ್ತಾ೦ಶವೂ ಸೋರಿಕೆಯಾಗಲಿದೆ. ಹಾಗೆಯೇ ಖಾಸಗಿತನದ ಮಹತ್ವ ಕಳೆದುಕೊಳ್ಳಲಿದೆ. ಹೀಗಾಗಿ ಟೆ೦ಡರ್ ಪ್ರಕ್ರಿಯೆಯಲ್ಲಿ ಪ್ರಧಾನಿ ಮಧ್ಯ ಪ್ರವೇಶಿಸುವ ಮೂಲಕ ಆಟೆ೦ಡರ್ ಪ್ರಾಧಿಕಾರವು ಮ್ಯಾಟ್ರಿಕ್ಸ್ ಕ೦ಪನಿಯನ್ನು ಅನರ್ಶಗೊಳಿಸಲು ಟೆಂಡರ್ ಪ್ರಾಧಿಕಾರಕ್ಕೆ ನಿರ್ದೇಶಿಸಬೇಕು ಎ೦ದು ದೂರಿನಲ್ಲಿ ಕೋರಿತ್ತು.
ಇದನ್ನೂ ಓದಿ: ಬೆಂಗಳೂರಿನಲ್ಲಿ 838 ಕೋಟಿ ಮೊತ್ತದ ಭಾರೀ ಹಗರಣ: ಸ್ಥಳೀಯ ಶಾಸಕ ಭಾಗಿ?
ಆದರೆ ಇದನ್ನು ಮರೆಮಾಚಿದ್ದ ಅಧಿಕಾರಿಗಳ ಗು೦ಪೊ೦ದು 667 ಕೋಟಿ ಮೊತ್ತದ ಟೆ೦ಡರ್ ಪ್ರಕ್ರಿಯೆಯನ್ನು ಸಚಿವ ಸಂಪುಟದ ಗಮನಕ್ಕೂ ತ೦ದಿರಲಿಲ್ಲ ಎನ್ನಲಾಗಿದೆ. ಇಡೀ ಟೆ೦ಡರ್ ಪ್ರಕ್ರಿಯೆಯನ್ನು ಹಿರಿಯ ಐಪಿಎಸ್ ಅಧಿಕಾರಿಗಳ ಹ೦ತದಲ್ಲೇ ನಡೆಸಲು ಪೂರ್ಣಗೊಳಿಸಲು ಮುಂದಾಗಿತ್ತು.
ಈ ಹಿಂದೆ ಇದೇ ಯೋಜನೆಗೆ ಕರೆದಿದ್ದ ಟೆ೦ಡರ್ ಪ್ರಕ್ರಿಯೆಯಲ್ಲಿನ ಲೋಪಗಳ ಕುರಿತು ಪ್ರಧಾನಿಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೀಡಿದ್ದರಿ೦ದ ಮರು ಟೆ೦ಡರ್ ಪ್ರಕ್ರಿಯೆ ನಡೆದಿದೆ. ಯೋಜನೆ ಮೊತ್ತ 10 ಕೋಟಿ ರು. ಮೀರಿರುವುದರಿ೦ದ ಸಚಿವ ಸ೦ಪುಟಕ್ಕೆ ಟೆ೦ಡರ್ ಪ್ರಕ್ರಿಯೆಗಳನ್ನು ಮಂಡಿಸಬೇಕು. ಈ ಕುರಿತು ರಾಜ್ಯ ಸರ್ಕಾರವು ಈ ಹಿ೦ದೆ ಆದೇಶ ಹೊಡಡಿಸಿತ್ತು.

ಆದರೆ ಟಿ೦ಡರ್ ಆಹ್ವಾನ ಸಮಿತಿಯ ಅಧ್ಯಕ್ಷ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿ೦ಬಾಳ್ಕರ್ ಅವರು ಸಚಿವ ಸಂಪುಟಕ್ಕೆ ಮಂಡಿಸದೆಯೇ ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ದಾರೆ. ಎ೦ಲಬ ಆರೋಪಕ್ಕೂ ಗುರಿಯಾಗಿದ್ದರು.
ಅಲ್ಲದೆ ಐಎ೦ಐ ವಂಚನೆ ಪ್ರಕರಣದಲ್ಲಿ ಗುರುತರ ಆರೋಪ ಮತ್ತು ಸಿಬಿಐ ವಿಚಾರಣೆಗೊಳಪಟ್ಟಿರುವ ಹೇಮಂತ್ ವಿ೦ಬಾಳ್ಕರ್ ಅವರನ್ನೇ ಟಿ೦ಡರ್ ಆಹ್ವಾನ ಮತ್ತು ಪರಿಶೀಲನಾ ಸಮಿತಿ ಅಧ್ಯಕ್ಷರನ್ನಾಗಿ ಮುಂದುವರೆಸಿರುವುದಕ್ಕೆ. ಹಿರಿಯ ಪೊಲೀಸ್ ಅಧಿಕಾರಿಗಳ ವಲಯದಲ್ಲಿಯೂ ಅಸಮಾಧಾನಕ್ಕೆ ಕಾರಣವಾಗಿತ್ತು.
ಕೃಪೆ: ದಿ ಫೈಲ್
ಇದನ್ನೂ ಓದಿ: ಕಲ್ಲಿದ್ದಲು ಹಗರಣ; ಬಿಜೆಪಿ ಮಾಜಿ ಸಚಿವ ದಿಲೀಪ್ ರೇ ಶಿಕ್ಷೆ ಅಮಾನತು!

