ನಟ ರಮೇಶ್ ಮನೆಯಲ್ಲಿ ಮದುವೆ ಸಂಭ್ರಮ : ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪುತ್ರಿ ನಿಹಾರಿಕ…!
ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಮದುವೆ ಇಂದು ಬನ್ನೇರುಘಟ್ಟ ರಸ್ತೆಯಲ್ಲಿನ ಖಾಸಗಿ ರೆಸಾರ್ಟ್ ನಲ್ಲಿ ಅದ್ದೂರಿಯಾಗಿ ನೆರವೇರಿದೆ. ಇಂದು ಬೆಳಿಗ್ಗೆ 11 ರಿಂದ 11.30ರ ಮುಹೂರ್ತದಲ್ಲಿ ಮದುವೆ ನೆರವೇರಿದ್ದು ನಿಹಾರಿಕಾ ಮತ್ತು ಅಕ್ಷಯ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕುಟುಂಬದ ಸಮ್ಮುಖದಲ್ಲಿ ಮದುವೆ ಕಾರ್ಯಕ್ರಮಗಳು ನಡೆಯುತ್ತಿದ್ದು ಕೇವಲ ಆತ್ಮೀಯರಿಗೆ ಮಾತ್ರ ಆಹ್ವಾನವನ್ನು ನೀಡಲಾಗಿತ್ತು. ಅದ್ದೂರಿ ಮದುವೆಯಲ್ಲಿ ಸಿನಿ ತಾರೆಯರು ಆಗಮಿಸಿದ್ದು ಮದುವೆಯ ಮೆರುಗು ಹೆಚ್ಚಿಸಿದೆ. ಜನವರಿ 16ರಂದು ಆರತಕ್ಷತೆ ಕಾರ್ಕ್ರಮ ನಡೆಯಲಿದೆ. ಮದುವೆಯಲ್ಲಿ ಸಿನಿ ತಾರೆಯರು ಆಗಮಿಸಿದ್ದು ಮದುವೆಯ ಮೆರುಗು ಹೆಚ್ಚಿಸಿದೆ. ಜನವರಿ 16ರಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.
ಕೆಲವೇ ಜನರ ಸಮ್ಮುಕದಲ್ಲಿ ಮದುವೆ ಕಾರ್ಯಕ್ರಮ ನಡೆದಿದ್ದು ಕುಟುಂಬದ ಆಪ್ತರಿಗೆ ಮತ್ತು ಸಿನಿ ತಾರೆಯರಿಗೆ ಮಾತ್ರ ಮದುವೆಗೆ ಆಹ್ವಾನಿಸಲಾಗಿತ್ತು.


