ಭಾರತ V/S ಆಸ್ಟ್ರೇಲಿಯಾ: ಮತ್ತೆ ಎಡವಿದ ಆಸಿಸ್‌; ಗೆಲ್ಲುವ ಹಾದಿಯಲ್ಲಿ ಟೀಂ ಇಂಡಿಯಾ!

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್‌ನಲ್ಲಿ ಹೀನಾಯ ಸೋಲು ಕಂಡು ಕಂಗಾಲಾಗಿದ್ದ ಭಾರತ ತಂಡ, ಎರಡನೇ ಟೆಸ್ಟ್‌ನಲ್ಲಿ ಮೈಕೊಡವಿ ನಿಂತಿದೆ. 2ನೇ ಟೆಸ್ಟ್‌ನ ಮೊದಲ ಇನ್ಸಿಂಗ್ಸ್‌ನಲ್ಲಿ ಭರ್ಜರಿ ರನ್‌ಗಳನ್ನು ಭಾರಿಸಿದ್ದು, 131 ರನ್‌ಗಳ ಮುನ್ನಡೆ ಸಾಧಿಸಿಕೊಂಡಿದೆ.

2ನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಸೆಕೆಂಟ್‌ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್‌‌ ಆರಂಭಿಸಿದ್ದು, 133 ರನ್‌ಗಳಿಗೆ 06 ವಿಕೇಟ್ ಕಳೆದುಕೊಂಡಿದೆ. ಆಸ್ಟ್ರೇಲಿಯಾ ಪರ ಎರಡನೇ ಇನ್ನಿಂಗ್ಸ್ ನಲ್ಲಿ ಮ್ಯಾಥ್ಯೂ ವೇಡ್ 40 ರನ್, ಮಾರ್ನಸ್ ಲಬುಶೇನ್ 28 ರನ್ ಗಳಿಸಿದ್ದೇ ದೊಡ್ಡ ಮೊತ್ತವೆಂಬಂತಾಗಿದೆ. ಕ್ಯಾಮರೂನ್ ಗ್ರಿನ್ ಅಜೇಯ 17 ಮತ್ತು ಪ್ಯಾಟ್ ಕಮ್ಮಿನ್ಸ್ ಅಜೇಯ 15 ರನ್ ಗಳಿಸಿದ್ದು ನಾಲ್ಕನೇ ದಿನದಾಟವನ್ನು ಆರಂಭಿಸಲಿದ್ದಾರೆ.

ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಕಡಿಮೆ ರನ್‌ಗಳನ್ನು ಕಲೆ ಹಾಕಿದ್ದು, ಮೊದಲ ಇನ್ನಿಂಗ್ಸ್‌ನಲ್ಲೇ 326 ರನ್ನುಗಳಿಸಿರುವ ಭಾರತ ಈ ಟೆಸ್ಟ್‌ನ ಗೆಲುವನ್ನು ತನ್ನ ಭುಜದ ಮೇಲೆ ಹೊತ್ತುಕೊಳ್ಳುವ ಸಾಧ್ಯತೆ ಇದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಪರ ಬ್ಯಾಟಿಂಗ್‌ ಮಾಡಿದ ತಂಡದ ನಾಯಕ ಅಜಿಂಕ್ಯಾ ರಹಾನೆ 112 ರನ್ ಗಳಿಸಿ ಔಟಾದರೆ ರವೀಂದ್ರ ಜಡೇಜಾ 57 ರನ್ ಗಳಿಸಿ ಮಿಂಚಿದ್ದಾರೆ.

ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾವನ್ನು 195 ರನ್ ಗಳಿಗೆ ಆಲೌಟ್ ಮಾಡಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ಭಾರತ 326 ರನ್ ಬಾರಿಸಿ 131 ರನ್ ಗಳ ಮುನ್ನಡೆ ಸಾಧಿಸಿತ್ತು.

ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಆಸ್ಟ್ರೇಲಿಯಾ 133 ರನ್ ಗಳಿಗೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.


ಇದನ್ನೂ ಓದಿ: ICC ದಶಕದ ಒನ್‌ಡೇ ಮತ್ತು ಟಿ20 ತಂಡದ ನಾಯಕನಾಗಿ ಎಂಎಸ್‌ ಧೋನಿ ಆಯ್ಕೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights