ಬಿಜೆಪಿಯ ಬ್ರಾಹ್ಮಣ್ಯ v/s ಸಿದ್ದರಾಮಯ್ಯರ ಬಾಡೂಟ: ಮಾಂಸಾಹಾರದ ಬಗ್ಗೆ ಸಿದ್ದು ಹೇಳಿಕೆಗಳು ಹೀಗಿವೆ!
ಸಂಘಪರಿವಾರದ ನಿಯಂತ್ರಣದಲ್ಲಿರುವ ಬಿಜೆಪಿ ಮೇಲ್ಜಾತಿಯವರ ಅಡ್ಡವಾಗಿದೆ. ಸಸ್ಯಾಹಾರ ಶ್ರೇಷ್ಠ, ಮಾಂಸಾಹಾರ ಕನಿಷ್ಠವೆಂಬ ಧೋರಣೆಯನ್ನು ಹರಿಬಿಡುತ್ತಿರುವ ಬಿಜೆಪಿ, ಗೋಹತ್ಯೆ, ಗೋಮಾಂಸ ನಿಷೇಧ, ಕೆಲವು ಜಯಂತಿಗಳಲ್ಲಿ ಮಾಂಸಾಹಾರ ತಿನ್ನಬಾರದು ಎಂಬ ತನ್ನ ರಾಜಕೀಯದ ಅಜೆಂಡಾವನ್ನು ಜನರ ಮನಸ್ಸಿನಲ್ಲಿ ತುಂಬಿಸುತ್ತಿದೆ.
ಇತ್ತ, ಎಲ್ಲಾ ಆಹಾರವೂ ಒಂದೇ, ಆಹಾರ ನಮ್ಮ ಹಕ್ಕು ಮತ್ತು ಆಯ್ಕೆ. ನಮಗೆ ಇಷ್ಟಬಂದಿದ್ದನ್ನು, ಯಾವಾಗ ಬೇಕೋ ಅವಾಗ ತಿನ್ನುತ್ತೇವೆ. ಅದನ್ನು ಪ್ರಶ್ನಿಸುವವರು ಯಾರು? ಯಾರಿಗೂ ನಮ್ಮ ಆಹಾರ ಪದ್ದತಿಯನ್ನು ಪ್ರಶ್ನಿಸುವ ಹಕ್ಕು ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾದಿಸುತ್ತಿದ್ದಾರೆ.
ಇತ್ತೀಚೆಗಿನ ದಿನಗಳಲ್ಲಿ ಬಿಜೆಪಿ ಮತ್ತು ಸಿದ್ದರಾಮಯ್ಯ ನಡುವೆಯ ಬಾಡೂಟದ ಬಗೆಗಿನ ಚರ್ಚೆಗಳು ನಡೆಯುತ್ತಲೇ ಇವೆ. ಇಂತಹ ಸಂದರ್ಭಗಳಲ್ಲಿ ಸಿದ್ದರಾಮಯ್ಯ ಹೇಳಿಕೆಗಳು ಹೀಗಿವೆ.
ಹನುಮನ ಬರ್ತ್‌ಡೇಟ್ ಕಿರಿಕ್..!
ಸಿದ್ದರಾಮಯ್ಯನವರ ತವರು ಊರಾದ ಸಿದ್ದರಾಮನಹುಂಡಿಯ ಮತಗಟ್ಟೆಯಲ್ಲಿ ಗ್ರಾಮ ಪಂಚಾಯತಿ ಚುನಾವಣೆಗೆ ಮತದಾನ ಮಾಡಿ, ತಮ್ಮ ಸ್ನೇಹಿತರ ಮನೆಯಲ್ಲಿ ಸಿದ್ದರಾಮಯ್ಯ ಭರ್ಜರಿ ಬಾಡೂಟ ಮಾಡಿದ್ದರು. ಆ ವೇಳೆ, ಅವರ ಆಪ್ತರೊಬ್ಬರು, ಸರ್..ಇವತ್ತು ಹನುಮ ಜಯಂತಿ, ಮಾಂಸಾಹಾರ ತಿನ್ನುವುದೇ ಎಂದು ಹೇಳಿದ್ದಾರೆ. ಆಗ, “ಏನು ಇವತ್ತು ಹನುಮಜ್ಜಯಂತಿನಾ, ಹನುಮ ಹುಟ್ಟಿದ ಡೇಟ್ ನಿನಗೆ ಗೊತ್ತಾ, ಸುಮ್ನೆ ಚಿಕನ್ ತಿನ್ನು”ಎಂದು ಪ್ರೀತಿಯಿಂದ ಸಿದ್ದರಾಮಯ್ಯ ಗದರಿಸಿದ್ದರು. ಸಿದ್ಧು ಈ ಮಾತನ್ನು ಬಿಜೆಪಿ ಈಗ ಬ್ರಹ್ಮಾಸ್ತ್ರವಾಗಿ ಬಳಸಿಕೊಂಡಿತು. ಆದ್ರೆ, ನೆಟ್ಟಿಗರು ಬಿಜೆಪಿಗೇ ಚಳಿಬಿಡಿಸಿದ್ದರು.
ಗೋಮಾಂಸ ತಿಂದ್ರೆ ಏನಾಗುತ್ತೆ..?
ನಾನು ಗೋಮಾಂಸ ತಿನ್ನುತ್ತೇನೆ, ಅದರಲ್ಲಿ ತಪ್ಪೇನಿದೆ. ನನ್ನ ಆಹಾರದ ಪದ್ದತಿ ನನ್ನದು, ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. ವಯಸ್ಸಾದ, ಆರೋಗ್ಯವಾಗಿ ಇಲ್ಲದ ಹಸುಗಳನ್ನು ಮನೆಯಲ್ಲೇ ಇಟ್ಟುಕೊಳ್ಳಲು ಬಿಜೆಪಿಯವರು ದುಡ್ಡು ಕೊಡುತ್ತಾರಾ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ. ಅಲ್ಲದೆ, ಗೋವನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದ್ದರು.
ಕಳೆದ ಚುನಾವಣೆಯಲ್ಲಿ ಮೀನೂಟ..!
ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ, ಮೀನೂಟ ಮಾಡಿ ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದಿದ್ದರು. ಅವರ ವಿರುದ್ದ ಸಂಘಪರಿವಾರದ ಹುಸಿ ಹಿಂದುತ್ವವಾದಿಗಳು ತಿರುಗಿಬಿದ್ದಿದ್ದರು.
ಇದನ್ನೂ ಓದಿ: ಹನುಮ ಹುಟ್ಟಿದ್ ಡೇಟ್ ಗೊತ್ತೇನ್ಲಾ? ಸುಮ್ನೆ ಚಿಕ್ಕನ್ ತಿನ್ಲಾ!: ಸಿದ್ದರಾಮಯ್ಯ

