ಸಂಪುಟ ವಿಸ್ತರಣೆ ಹೈಕಮಾಂಡ್‌ ಕೈಯಲ್ಲಿದೆ; ಅರುಣ್‌ ಸಿಂಗ್‌ ಯಾವ ಸುದ್ದಿ ತರುತ್ತಾರೆ ನೋಡೋಣ: ಸಿಎಂ ಬಿಎಸ್‌ವೈ

ಕರ್ನಾಟಕ ಬಿಜೆಪಿಯ ಉಸ್ತುವಾರಿ ವಹಿಸಿಕೊಂಡಿರುವ ಅರುಣ್‌ ಸಿಂಗ್‌ ಅವರು ಶನಿವಾರ ರಾಜ್ಯಕ್ಕೆ ಆಗಮಿಸಲಿದ್ದಾರೆ. ಅವರು ಸಂಪುಟ ವಿಸ್ತರಣೆಯ ಬಗ್ಗೆ ಯಾವ ಸುದ್ದಿ ತರುತ್ತಾರೆ ಕಾದುನೋಡೋಣ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ರಾಜ್ಯಪಾಲರಿಗೆ ಹೊಸ ವರ್ಷದ ಶುಭಾಷಯ ತಿಳಿಸಿ, ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆಯ ನಿರ್ಧಾರ ಹೈಕಮಾಂಡ್‌ ಕೈಯಲ್ಲಿದೆ. ನಾಳೆ ಅರುಣ್‌ ಸಿಂಗ್‌ ಅವರು ರಾಜ್ಯಕ್ಕೆ ಬರಲಿದ್ದು, ಏನು ಮಾಹಿತಿ ತರುತ್ತಾರೆ ನೋಡೋಣ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಆಪರೇಷನ್‌ ಮಾಡಿ ಬಿಜೆಪಿ ಸರ್ಕಾರ ರಚಿಸಿ ಒಂದು ವರ್ಷ ದಾಟಿದೆ. ಆದರೂ ಸಂಪುಟ ವಿಸ್ತರಣೆ ಕಸರತ್ತು ಮಾತ್ರ ಇನ್ನೂ ಮುಗಿದಿಲ್ಲ.

ಸಿಎಂ ಬಿಎಸ್‌ವೈ ಹಲವು ಬಾರಿ ದೆಹಲಿಗೆ ತೆರಳಿ ಹೈಕಮಾಂಡ್‌ ಕಚೇರಿ ಮೆಟ್ಟಿಲು ಸವೆಸಿ ಬಂದಿದ್ದಾರೆ. ಹೈಕಮಾಂಡ್‌ ಜೊತೆಗೆ ಸಾಕಷ್ಟು ಚರ್ಚೆ ನಡೆಸಿದ್ದಾರೆ. ಆದರೆ, ಬಿಜೆಪಿ ಹೈಕಮಾಂಡ್‌  ಮಾತ್ರ ಯಾವುದೇ ಒಪ್ಪಿಗೆಯನ್ನು ನೀಡುತ್ತಿಲ್ಲ.

ಇದರಿಂದಾಗಿ ಬಿಎಸ್‌ವೈ ಕಂಗಾಲಾಗಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಗಳು ಯಡಿಯೂರಪ್ಪ ವಿರುದ್ಧವೇ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಶಾಸಕ ಯತ್ನಾಳ್‌ ಬಹಿರಂಗವಾಗಿಯೇ ವಾಗ್ದಾಳಿ ನಡೆಸುತ್ತಿದ್ದಾರೆ. ಆದರೆ, ಸಂಪುಟ ವಿಸ್ತರಣೆ ವಿಚಾರದಲ್ಲಿ ಅಸಾಹಯಕರಾಗಿರುವ ಬಿಎಸ್‌ವೈ ಆಕಾಂಕ್ಷಿಗಳ ಒತ್ತಡವನ್ನು ನಿಭಾಯಸಲಾರದೆ, ಒದ್ದಾಡುತ್ತಿದ್ದಾರೆ.


ಇದನ್ನೂ ಓದಿ: ಬಿಎಸ್‌ವೈ ವಿರುದ್ದ ಮತ್ತೆ ಯತ್ನಾಳ್‌ ವಾಗ್ದಾಳಿ: BJPಗೆ ತಲೆನೋವಾದ ಕೇಸರಿ ಶಾಸಕ‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights