ದೇಶದಲ್ಲಿ ಹೊಸದಾಗಿ 18,177 ಕೇಸ್ : 217 ಸೋಂಕಿತರು ಸಾವು!
ದೇಶಾದ್ಯಂತ ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಹೊಸದಾಗಿ 18,177 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 217 ಜನ ಮಹಾಮಾರಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.
ಈಗ ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 1,03,23,965 ಕ್ಕೆರಿಕೆಯಾಗಿದ್ದು ಈವರೆಗೆ 1,49,435 ಸೋಂಕಿತರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಈಗ 2,47,220 ಸಕ್ರಿಯ ಕೊರೊನಾವೈರಸ್ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ 20,923 ಜನ ಗುಣಮುಖರಾಗಿದ್ದು 99,27,310 ಜನ ಈವರೆಗೆ ಡಿಸ್ಚಾರ್ಜ್ ಆಗಿದ್ದಾರೆ.
India reports 18,177 new COVID-19 cases, 20,923 recoveries, and 217 deaths in last 24 hours, as per Union Health Ministry
Total cases: 1,03,23,965
Active cases: 2,47,220
Total recoveries: 99,27,310
Death toll: 1,49,435 pic.twitter.com/U5xEGTaei4
— ANI (@ANI) January 3, 2021
A total of 17,48,99,783 samples have been tested for #COVID19 up to January 2. Of these, 9,58,125 samples were tested yesterday: Indian Council of Medical Research (ICMR) pic.twitter.com/R4YWT8JWXV
— ANI (@ANI) January 3, 2021
ಕಳೆದ 24 ಗಂಟೆಗಳಲ್ಲಿ ಕೊರೋನಾ ಸೋಂಕಿನ ಕಾರಣಕ್ಕೆ 9,58,125 ಮಂದಿಯ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಆ ಮೂಲಕ ದೇಶದಲ್ಲಿ ಈ ವರೆಗೂ ಅಂದರೆ ಜ.2ರವರೆಗೂ 17,48,99,783ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಾಹಿತಿ ನೀಡಿದೆ
ದೆಹಲಿಯ ನ್ಯಾಷನಲ್ ಮೀಡಿಯಾ ಸೆಂಟರ್ ನಲ್ಲಿ ಇಂದು ಮಹತ್ವದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಜಿಐ ಅಧ್ಯಕ್ಷ ವಿ.ಜಿ ಸೋಮಾನಿ, ಕೋವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಬಳಕೆಗೆ ಸೂಕ್ತವಾಗಿದೆ ಎಂದು ತಿಳಿಸಿದ್ದಾರೆ. ಎರಡು ಲಸಿಕೆಗಳಿಗೆ ಅಧಿಕೃತ ಅನುಮತಿ ಕೊಟ್ಟಿದ್ದು ತುರ್ತು ಸಂದರ್ಭದಲ್ಲಿ ಈ ಎರಡು ಲಸಿಕೆಗಳನ್ನು ಬಳಕೆ ಮಾಡಬಹುದು ಎಂದು ತಿಳಿಸಿದ್ದಾರೆ.

