Fact Check: ಈ ಮಗು ಅಪಘಾತಕ್ಕೀಡಾದ ಇಂಡೋನೇಷ್ಯಾ ವಿಮಾನದಲ್ಲಿ ಇತ್ತಾ..?
ಇಂಡೋನೇಷ್ಯಾದ ವಿಮಾನ ಅಪಘಾತದಿಂದ ಮಗುವೊಂದು ಬದುಕುಳಿದಿದೆ ಎಂಬ ಹೇಳಿಕೆಯೊಂದಿಗೆ ಲೈಫ್ ಜಾಕೆಟ್ನಲ್ಲಿ ಮಗು ಮತ್ತು ಜನರಿಂದ ಸುತ್ತುವರೆದಿರುವ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
62 ಜನರೊಂದಿಗೆ ಜಕಾರ್ತಾದಿಂದ ಹೊರಟ ಶ್ರೀವಿಜಯ ಏರ್ ಬೋಯಿಂಗ್ 737-500 ಜನವರಿ 9 ರಂದು ಬೊರ್ನಿಯೊಗೆ ಹೋಗುವಾಗ ರಾಡಾರ್ನಿಂದ ಕಣ್ಮರೆಯಾಯಿತು. ರಕ್ಷಣಾ ತಂಡಗಳು ವಿಮಾನದ ಕೆಲವು ಭಾಗಗಳನ್ನು ಮತ್ತು ಮಾನವ ದೇಹದ ಭಾಗಗಳನ್ನು ಸಮುದ್ರದಿಂದ ಪತ್ತೆ ಮಾಡಿವೆ.
ಈ ಮಧ್ಯೆ ಹಲವಾರು ಫೇಸ್ಬುಕ್ ಬಳಕೆದಾರರು ಮಗುವಿನ ಚಿತ್ರವನ್ನು ಹಂಚಿಕೊಮಡು “ಬ್ರೇಕಿಂಗ್ ನ್ಯೂಸ್ # ಅಲ್ಲಾ ಹು ಅಕ್ಬರ್, ಜಕಾರ್ತಾ ಇಂಡೋನೇಷ್ಯಾ ವಿಮಾನ ಅಪಘಾತದಲ್ಲಿ ಒಂದು ಮಗು ಬದುಕುಳಿದಿದೆ ..” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ.

ಆದರೆ ಈ ಮಗು ಇಂಡೋನೇಷ್ಯಾದ ವಿಮಾನ ಅಪಘಾತದಿಂದ ಬದುಕುಳಿದಿಲ್ಲ ಬದಲಿಗೆ 2018 ರ ಜುಲೈ 3 ರಂದು ಇಂಡೋನೇಷ್ಯಾದ ಸೆಲಾಯಾರ್ ದ್ವೀಪದಿಂದ ಮುಳುಗಿದ ದೋಣಿಯಿಂದ ಬದುಕುಳಿದಿದೆ. ಇಂಡೋನೇಷ್ಯದ ಜಕಾರ್ತಾ ಕರಾವಳಿಯಲ್ಲಿ ಅಪಘಾತಕ್ಕೀಡಾದ ವಿಮಾನದಲ್ಲಿದ್ದ 62 ಜನರ ಭವಿಷ್ಯ ಇನ್ನೂ ತಿಳಿದಿಲ್ಲ. ಅದಾಗಲೇ ಇಂಥಹ ಸುಳ್ಳು ಸುದ್ದಿ ಹರಿದಾಡುತ್ತಿದೆ.
ಮಗುವಿನ ಕಥೆ
ಮಗುವಿನ ಚಿತ್ರ ಅಂತರ್ಜಾಲದಲ್ಲಿ 2018 ರಿಂದ ಲಭ್ಯವಿದೆ. ಅದೇ ಚಿತ್ರ 2018 ರಲ್ಲಿ ವೈರಲ್ ಆಗಿದೆ. ಅದೇ ವರ್ಷ ಅದನ್ನು ಮತ್ತೊಂದು ವಿಮಾನ ಅಪಘಾತಕ್ಕೆ ತಪ್ಪಾಗಿ ಜೋಡಿಸಿದ್ದದ್ದು ಕಂಡುಬಂದಿದೆ. ಇಂಡೋನೇಷ್ಯಾದ ಜಾವಾ ಸಮುದ್ರದಲ್ಲಿ 189 ಪ್ರಯಾಣಿಕರೊಂದಿಗೆ ಲಯನ್ ಏರ್ ಫ್ಲೈಟ್ ಜೆಟಿ 610 ಅಪಘಾತಕ್ಕೀಡಾಯಿತು. ಈ ವೇಳೆ ಈ ಮಗು ಬದುಕುಳಿದಿದೆ ಎಂದು ಫೋಟೋ ವೈರಲ್ ಆಗಿತ್ತು. ಈ ವೇಳೆ ಇಂಡೋನೇಷ್ಯಾ ಸರ್ಕಾರ ವೈರಲ್ ಹೇಳಿಕೆಯನ್ನು ತಳ್ಳಿಹಾಕಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದು, ಇದನ್ನು ವಂಚನೆ ಎಂದು ಕರೆದಿತ್ತು.

ಜುಲೈ 3, 2018 ರಂದು ಇಂಡೋನೇಷ್ಯಾದ ಸೆಲಾಯಾರ್ ದ್ವೀಪದ ನೀರಿನಲ್ಲಿ ಮುಳುಗಿದ ದೋಣಿಯಿಂದ ಮಗು ಬದುಕುಳಿದಿದೆ ಎಂದು ಇಂಡೋನೇಷ್ಯಾದ ವಿಪತ್ತು ತಗ್ಗಿಸುವಿಕೆಯ ಏಜೆನ್ಸಿಯ ವಕ್ತಾರ ಸುಟೊಪೊ ಪರ್ವೊ ನುಗ್ರೊಹೋ ಟ್ವಿಟರ್ನಲ್ಲಿ ತಿಳಿಸಿದ್ದರು. ಇದಕ್ಕೂ ಲಯನ್ ಏರ್ ಫ್ಲೈಟ್ ಜೆಟಿ 610 ಕ್ರ್ಯಾಶ್ ನೊಂದಿಗೆ ಯಾವುದೇ ಸಂಬಂಧವಿಲ್ಲ.ಇಂಡೋನೇಷ್ಯಾದ ಸುದ್ದಿ ವೆಬ್ಸೈಟ್ ಜುಲೈ 7, 2018 ರಂದು ಮಗುವಿನ ಚಿತ್ರದೊಂದಿಗೆ ಹಲವಾರು ದೋಣಿ ಅಪಘಾತಗಳ ಕುರಿತು ಲೇಖನವನ್ನು ಪ್ರಕಟಿಸಿದೆ.
Banyak postingan foto di media sosial bahwa ada bayi penumpang pesawat JT-610 yang selamat. Foto bayi ini adalah bayi yang selamat dari tenggelamnya kapal KM Lestari Maju, di Perairan Selayar, pada Selasa 3/7/2018. Jadi info tersebut adalah Hoax. Jangan menyebarkan hoax. pic.twitter.com/SziiS6Uoog
— Sutopo Purwo Nugroho (@Sutopo_PN) October 30, 2018
ಆದ್ದರಿಂದ ಮಗುವಿನ ವೈರಲ್ ಚಿತ್ರದಲ್ಲಿರುವ ಮಗು ಯಾವುದೇ ವಿಮಾನ ಅಪಘಾತದಿಂದ ಬದುಕುಳಿದಿಲ್ಲ ಬದಲಿಗೆ ದಟ್ಟಗಾಲಿಡುವ ಮಗು 2018 ರಲ್ಲಿ ದೋಣಿ ಕ್ಯಾಪ್ಸೈಜ್ನಿಂದ ಬದುಕುಳಿದಿದೆ.

