‘ಯಾವ ಸಿಡಿ ಇಲ್ಲ’ ಪರೋಕ್ಷವಾಗಿ ಯತ್ನಾಳ್ ಗೆ ಟಾಂಗ್ ಕೊಟ್ಟ ನಿರಾಣಿ..!
ಸಚಿವ ಸ್ಥಾನದಿಂದ ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನದ ಹೊಗೆ ದಟ್ಟವಾಗಿ ಹರಡಿಕೊಳ್ಳುತ್ತಿದೆ. ಇದಕ್ಕೆ ನೂತನ ಸಚಿವ ಮುರುಗೇಶ್ ನಿರಾಣಿ ಪ್ರತಿಕ್ರಿಯೆ ನೀಡಿದ್ದು ಪರೋಕ್ಷವಾಗಿ ಯತ್ನಾಳ್ ಗೆ ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ನೂತನ ಸಚಿವ ಮುರುಗೇಶ್ ನಿರಾಣಿ, ” ಯಾವ ಸಿಡಿನೂ ಇಲ್ಲ, ಯಾವ ಪೆಂಡ್ರೈವೂ ಇಲ್ಲ. ಇದು ನೂರಕ್ಕೆ ನೂರು ಸುಳ್ಳು” ಎಂದು ಪರೋಕ್ಷವಾಗಿ ಯತ್ನಾಳ್ ಗೆ ಟಾಂಗ್ ಕೊಟ್ಟಿದ್ದಾರೆ. ಮಾತ್ರವಲ್ಲದೇ ತಾವು ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ ಎಂದಿದ್ದಾರೆ.
ಶಾಸಕ ಬಸನಗೌಡ ಯತ್ನಾಳ್ ,” ನೂತನ ಸಚಿವರಾಗಿ ಆಯ್ಕೆಯಾದ 7 ಜನರ ಪೈಕಿ ಕೆಲವರಿಗೆ ಸಿಡಿ ಕೋಟಾದಲ್ಲಿ ಸಚಿವ ಸ್ಥಾನ ಕೊಡಲಾಗಿದೆ. ಸಿಡಿ ತೋರಿಸಿ ಬ್ಲಾಕ್ ಮೇಲ್ ಮಾಡಿದವರು ಸಚಿವ ಸ್ಥಾನ ಪಡೆದುಕೊಂಡಿದ್ದಾರೆ. ಆ ಸಿಡಿ ಕೇವಲ ಭ್ರಷ್ಟಾಚಾರದ ಸಿಡಿ ಅಲ್ಲ. ಬದಲಿಗೆ ಅದು ನೋಡಲು ಸಾಧ್ಯವಾಗದಂತಹ ದೃಶ್ಯವಾಗಿದೆ” ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು.
ಬಿಜೆಪಿಯಲ್ಲಿ ಯತ್ನಾಳ್, ರೇಣುಕಾಚಾರ್ಯ, ವಿಶ್ವನಾಥ್ ಹೀಗೆ ಹಲವಾರು ಸಚಿವಾಕಾಂಕ್ಷಿಗಳು ಅಸಮಾಧಾನ ಹೊರಹಾಕಿದ್ದು, ಸಂಪುಟ ಪುನರ್ರಚನೆಯಾಗುವ ಸಾಧ್ಯತೆಗಳು ಇವೆ. ಜೊತೆಗೆ ನಾಳೆ ಬೆಂಗಳೂರಿನಲ್ಲಿ ರಾಜ್ಯ ಕೋರ್ ಕಮಿಟಿ ಮೀಟಿಂಗ್ ನಡೆಯಲಿದ್ದು, ಸಭೆಯಲ್ಲಿ ಆಂತರಿಕ ಅಸಮಧಾನ ಸ್ಪೋಟ ಗೊಳ್ಳಲಿದೆ ಎನ್ನಲಾಗುತ್ತಿದೆ. ಜೊತೆಗೆ ಉಪಚುನಾವಣೆ ಬಗ್ಗೆ ಚರ್ಚೆ ನಡೆಯಲಿದೆ. ಸಭೆಗೆ ಗೃಹ ಸಚಿವ ಅಮಿತ್ ಶಾ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕೂಡ ಭಾಗಿಯಾರುತ್ತಾರೆ ಎನ್ನಲಾಗುತ್ತಿದೆ.

