ಉದ್ಧವ್ ಠಾಕ್ರೆ ಉದ್ದಟತನದ ಟ್ವೀಟ್ : ಬೆಂಗಳೂರಿನಲ್ಲೂ ವಾಟಾಳ್ ಪ್ರತಿಭಟನೆ..!
ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಉದ್ದಟತನದ ಟ್ವೀಟ್ ವಿರೋಧಿಸಿ ಕನ್ನಡಪರ ಸಂಘಟನೆಗಳು ಬೆಳಗಾವಿ ಮಾತ್ರವಲ್ಲದೇ ಬೆಂಗಳೂರಿನ ಮೈಸೂರ್ ಬ್ಯಾಂಕ್ ಸರ್ಕಲ್ ನಲ್ಲೂ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ.
ಮರಾಠಿ ಭಾಷಿತ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎನ್ನುವ ಹೇಳಿಕೆಯನ್ನು ನೀಡಿದ ಶಿವಸೇನೆ ಪುಂಡರು ಮತ್ತು ಉದ್ಧವ್ ಠಾಕ್ರೆ ಟ್ವೀಟ್ ವಿರುದ್ಧ ವಾಟಾಳ್ ನಾಗರಾಜ್ ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮದ ಮುಂದೆ ಮಾತನಾಡಿದ ವಾಟಾಳ್, ” ಉದ್ಧವ್ ಠಾಕ್ರೆ ಅವಿವೇಕಿ, ಹುಚ್ಚ, ಅವರ ಅಪ್ಪ ಬಾಲಾಠಾಕ್ರೆ ಕೂಡ ಹುಚ್ಚ. ಕಾರವಾರ, ಬೆಳಗಾವಿ ಯಾರದು ಅನ್ನೋದು ಅವನಿಗೆ ಗೊತ್ತಿಲ್ಲ. ಸೊಲ್ಲಾಪುರ ಕರ್ನಾಟಕಕ್ಕೆ ಬರಲೇಬೇಕು. ಬಾಯಿಗೆ ಬಂದಂತೆ ಮಾತನಾಡಬಾರದು. ಬೆಳಗಾವಿ ಮತ್ತು ಕಾರವಾಗಲಿ ಬಿಟ್ಟುಕೊಟ್ಟರೆ ರಾಜ್ಯದಲ್ಲಿ ರಕ್ತಕ್ರಾಂತಿಯಾಗುತ್ತದೆ. ಮಹಾರಾಷ್ಟ್ರ ಬೆಳಗಾವಿ ಗಡಿ ಬಂದ್ ಮಾಡುತ್ತೇವೆ. ಶಿವ ಸೇನೆ ಕರ್ನಾಟಕಕ್ಕೆ ಬಂದರೆ ಅವರನ್ನು ಜೈಲಿಗೆ ಹಾಕಬೇಕು. ಎಂಇಎಸ್ ಬಂದ್ ಮಾಡಬೇಕು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಇವರೆಲ್ಲರೂ ಸಂಪೂರ್ಣ ಮರಾಠಿ ಪರ. ಶಿವ ಸೇನೆ ಮತ್ತು ಎಂಇಎಸ್ ಪರವಾಗಿದ್ದಾರೆ” ಎಂದು ಆಕ್ರೋಶಗೊಂಡಿದ್ದಾರೆ.
“ರಾಜ್ಯದ ಸಮಗ್ರ ಸಂಘಟನೆಗಳೊಂದಿಗೆ ರಾಜ್ಯದ ಹಿತಕ್ಕಾಗಿ ನಾಳೆ ಇಲ್ಲ ನಾಡಿದ್ದು ವುಡ್ ಲ್ಯಾಂಡ್ ಹೋಟೆಲ್ ನಲ್ಲಿ ಮಾತುನಾಡಿ ಬಂದ್ ಮಾಡುತ್ತೇವೆ. ನಿನ್ನೆ ಬೆಳಗಾವಿ ಯಲ್ಲಿ ಅಮಿತಾ ಶಾ ರೊಂದಿಗೆ ಸಭೆ ಮಾಡಿದ್ದಾರೆ. ಯಡಿಯೂರಪ್ಪ ಸರ್ಕಾರ ಏನ್ ಮಾಡ್ತಾಯಿದೆ. ಭಾರತ ದೇಶದ ಬಗ್ಗೆ ಮಾತನಾಡುವ ಅವರು ಗಂಭೀರವಾಗಿ ಹೇಳುವುದಾದರೆ ಯಡಿಯೂರಪ್ಪ ಹೇಳ್ಬೇಕು. ಇಲ್ಲ ರಾಜಿನಾಮೆ ಕೊಡಿ. ತೀವ್ರವಾದ ಹೋರಾಟ ಮಾಡುವುದು ನಮಗೆ ಅನಿವಾರ್ಯವಾಗಿದೆ. ಬೆಂಗೂರಿನಿಂದ ಬೆಳಗಾವಿವರೆಗೆ ಮಾರಾಠಿ ಗಡಿ ಬಂದ್ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಮರಾಠಿಗರು ಬೆಳಗಾವಿಗೆ ಬರಕೂಡದು” ಎಂದು ವಾಟಾಳ್ ಆಗ್ರಹಿಸಿದ್ದಾರೆ.

