ಸಚಿವರಿಗೆ ಖಾತೆ ಹಂಚಿಕೆ; ಹಲವು ಸಚಿವರ ಖಾತೆ ಬಲದಲಾವಣೆ! ಅಧಿಕೃತ ಪಟ್ಟಿ ಇಲ್ಲಿದೆ!
ಬಹುತಿಂಗಳುಗಳಿಂದ ಬಿಜೆಪಿಗೆ ತಲೆನೋವಾಗಿದ್ದ ಸಂಪುಟ ವಿಸ್ತರಣೆ ಕಸರತ್ತು ಮುಗಿದಿದ್ದು, ಖಾತೆ ಹಂಚಿಕೆ ಪ್ರಕ್ರಿಯೆ ನಡೆಯುತ್ತಿದೆ. ಹೊಸದಾಗಿ ಸಚಿವ ಸಂಪುಟಕ್ಕೆ ಆಯ್ಕೆಯಾಗಿರುವ 07 ಮಂದಿ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ಈಗಾಗಲೇ ಹಲವು ಖಾತೆಗಳನ್ನು ನಿಭಾಯಿಸುತ್ತಿದ್ದ ಸಚಿವರಿಗೂ ಖಾತೆಗಳನ್ನು ಬದಲಾವಣೆ ಮಾಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನೇತೃತ್ವದ ಸಂಪುಟ ವಿಸ್ತರಣೆಯಲ್ಲಿ 7 ಶಾಸಕರು ನೂತನ ಸಚಿವರಾಗಿ ಸಂಪುಟ ಸೇರಿದ್ದಾರೆ. ಎಸ್. ಅಂಗಾರ, ಸಿ.ಪಿ. ಯೋಗೇಶ್ವರ್, ಎಂ.ಟಿ.ಬಿ. ನಾಗರಾಜ್, ಆರ್.ಶಂಕರ್, ಅರವಿಂದ ಲಿಂಬಾವಳಿ, ಮುರುಗೇಶ ನಿರಾಣಿ, ಉಮೇಶ್ ಕತ್ತಿ ಸೇರಿ 7 ಮಂದಿ ನೂತನ ಸಚಿವರಾಗಿದ್ದಾರೆ.
ಹೀಗಾಗಿ ಒಂದೆಡೆ ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಅಸಮಾಧಾನ ಸ್ಪೋಟಗೊಂಡಿದೆ. ಇದರ ನಡುವೆಯೂ ಖಾತೆ ಹಂಚಿಕೆ, ಮರುಹಂಚಿಕೆ ಮಾಡಲಾದಂತ ಸಚಿವರ ಪಟ್ಟಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಇಂತಹ ರಾಜ್ಯಪಾಲರ ಅಂಕಿತ ಸಚಿವರ ಪಟ್ಟಿಯನ್ನು ಸರ್ಕಾರ ಗೆಜೆಟ್ ಅಧಿಸೂಚನೆ ಮೂಲಕ ಅಧಿಕೃತವಾಗಿ ಪ್ರಕಟಿಸಿದೆ. ಅಂತಹ ಸಂಪೂರ್ಣ ಪಟ್ಟಿ ಇಲ್ಲಿದೆ.
ಯಾವ ಸಚಿವರಿಗೆ ಯಾವ ಖಾತೆ? ಪಟ್ಟಿ ಇಲ್ಲಿದೆ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ – ಡಿಪಿಎಆರ್, ಕ್ಯಾಬಿನೆಟ್ ಅಫೈರ್, ಹಣಕಾಸು, ಬೆಂಗಳೂರು ಅಭಿವೃದ್ಧಿ, ಎನರ್ಜಿ, ಗುಪ್ತಚರ, ಪ್ಲಾನಿಂಗ್, ಪ್ರೋಗ್ರಾಂ ಮಾನಿಟರಿಂಗ್ ಅಂಡ್ ಸ್ಟಾಟಿಸ್ಟಿಕ್ಸ್, ಇನ್ಫಾಸ್ಟ್ರಕ್ಚರ್ ಡೆವೆಲ್ಮೆಂಟ್
ಉಮೇಶ್ ಕತ್ತಿ – ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ಖಾತೆ
ಎಸ್ ಅಂಗಾರ – ಮೀನುಗಾರಿಕೆ, ಒಳನಾಡು ಸಾರಿಗೆ
ಬಸವರಾಜ್ ಬೊಮ್ಮಾಯಿ – ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಖಾತೆ
ಜೆಸಿ ಮಾಧುಸ್ವಾಮಿ – ವೈದ್ಯಕೀಯ ಶಿಕ್ಷಣ ಖಾತೆ, ಕನ್ನಡ ಮತ್ತು ಸಂಸ್ಕೃತಿ ಖಾತೆ
ಸಿಸಿ ಪಾಟೀಲ್ – ಸಣ್ಣ ಕೈಗಾರಿಕಾ ಖಾತೆ, ವಾರ್ತಾ ಮತ್ತು ಸಂಪರ್ಕ ಖಾತೆ
ಅರವಿಂದ ಲಿಂಬಾವಳಿ – ಅರಣ್ಯ ಖಾತೆ
ಮುರುಗೇಶ್ ನಿರಾಣಿ – ಗಣಿ ಮತ್ತು ಭೂ ವಿಜ್ಞಾನ ಖಾತೆ
ಎಂ.ಟಿ.ಬಿ.ನಾಗರಾಜ್ – ಅಬಕಾರಿ ಖಾತೆ
ಕೋಟಾ ಶ್ರೀನಿವಾಸ್ ಪೂಜಾರಿ – ಮುಜುರಾಯಿ, ಹಿಂದುಳಿದ ವರ್ಗಗಳ ಖಾತೆ
ಡಾ.ಕೆ.ಸುಧಾಕರ್ – ಆರೋಗ್ಯ ಖಾತೆ
ಆನಂದ್ ಸಿಂಗ್ – ಪ್ರವಾಸೋದ್ಯಮ
ಸಿಪಿ ಯೋಗೀಶ್ವರ್ – ಸಣ್ಣ ನೀರಾವರಿ ಖಾತೆ
ಪ್ರಭು ಚೌವ್ಹಾಣ್ – ಪಶು ಸಂಗೋಪನಾ ಸಚಿವರ ಖಾತೆ
ಶಿವರಾಂ ಹೆಬ್ಬಾರ್ – ಕಾರ್ಮಿಕ ಖಾತೆ
ಆರ್ ಶಂಕರ್ – ಪೌರಾಡಳಿತ ಮತ್ತು ರೇಷ್ಮೆ ಸಚಿವರ ಖಾತೆ
ಕೆ ಗೋಪಾಲಯ್ಯ – ತೋಟಗಾರಿಕಾ ಖಾತೆ, ಸಕ್ಕರೆ ಖಾತೆ
ಕೆಸಿ ನಾರಾಯಣ ಗೌಡ – ಯುವಜನ ಸೇವೆ ಮತ್ತು ಕ್ರೀಢಾ ಸಬಲೀಕರಣ ಖಾತೆ
ಇದನ್ನೂ ಓದಿ: ಭಗವಾನ್ ರ ವಿವಾದಿತ ಪುಸ್ತಕವನ್ನು ಗ್ರಂಥಾಲಯ ಖರೀದಿ ಪಟ್ಟಿಯಿಂದ ಕೈಬಿಟ್ಟ ಸರ್ಕಾರ!

