ಭೀಕರ ರಸ್ತೆ ಅಪಘಾತ: ಕೆಲಸಕ್ಕೆ ಹೊರಟಿದ್ದ 09 ಕಾರ್ಮಿಕರು ಮಸಣಕ್ಕೆ…

ಭೀರಕ ಅಪಘಾತದಲ್ಲಿ ಕೂಲಿ ಕೆಲಸಕ್ಕೆ ತೆರಳಿದ್ದ 09 ಕಾರ್ಮಿಕರು ಸಾವನ್ನಪ್ಪಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ದೇವರಕೊಂಡಮಂಡಲದ ಅಂಗಡಿಪೇಟ್‌ ರಸ್ತೆಯಲ್ಲಿ, ಕಾರ್ಮಿಕರನ್ನು ಹೊತ್ತು ಸಾಗುತ್ತಿದ್ದ ಆಟೋ ಮತ್ತು ಕಂಟೇನರ್​ ಡಿಕ್ಕಿ ಹೊಡೆದಿದೆ. ಪರಿಣಾಮ ಆಟೋದಲ್ಲಿದ್ದ 9 ಮಂದಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತಪಟ್ಟ ಕಾರ್ಮಿಕರೆಲ್ಲರೂ ಚಿಂತಬಾವಿ ಗ್ರಾಮದ ನಿವಾಸಿಗಳೆಂದು ಗುರುತಿಸಲಾಗಿದೆ. ಘಟನೆಯಲ್ಲಿ ಹಲವರಿಗೆ ಗಂಭೀರಗಾಯಗಳಾಗಿದ್ದು, ಎಲ್ಲರನ್ನೂ ದೇವರಕೊಂಡ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

09 ಮಂದಿ ಕಾರ್ಮಿಕರು ಮೃತಪಟ್ಟಿದ್ದು, ಐದಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆಟೊದಲ್ಲಿ 20ಕ್ಕೂ ಹೆಚ್ಚು ಜನರು ಇದ್ದರು ಎಂದು ತಿಳಿದುಬಂದಿದೆ.

ಅಪಘಾತದ ಸ್ಥಳದಲ್ಲಿ ಕೊನೆಯುಸಿರೆಳೆದವರನ್ನು ಆಟೋ ಚಾಲಕ ಕೊಟ್ಟಮ್ ಮಲ್ಲೇಶಮ್ (40) ಎಂದು ಗುರುತಿಸಿದ್ದಾರೆ; ನೋಮುಲಾ ಪೆದ್ದಮ್ಮ, 40; ನೋಮುಲಾ ಅಂಜಮ್ಮ, 50; ಗೊಡುಗು ಇಡಮ್ಮ, 48; ಕೊಟ್ಟಮ್ ಪೆದ್ದಮ್ಮ, 50; ಕೊಟ್ಟಂ ಚಂದ್ರಮ್ಮ, 35 ಮತ್ತು ನೋಮುಲಾ ಸೈದಮ್ಮ ಎಂದು ಗುರುತಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

30 ಕಿ.ಮೀ ದೂರದಲ್ಲಿರುವ ಪೆಡ್ಡವೂರ ಮಂಡಲದ ಪೊಥ್ನೂರ್ ಗ್ರಾಮದಲ್ಲಿ ಭತ್ತ ಕಸಿ ಕೆಲಸಕ್ಕಾಗಿ ಮಹಿಳೆಯರು ಮುಂಜಾನೆ ಗ್ರಾಮದಿಂದ ತೆರಳಿದ್ದರು ಎಂದು ಮೃತರ ಸಂಬಂಧಿಕರು ತಿಳಿಸಿದ್ದಾರೆ.

ಶವಗಳನ್ನು ಮರಣೋತ್ತರ ಪರೀಕ್ಷೆಗೆ ದೇವರಕೊಂಡ ಏರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ.

ಇದನ್ನೂ ಓದಿ: ಇತಿಹಾಸವನ್ನು ಬಳಿಸಿಕೊಂಡು ಹೈದರಾಬಾದ್‌ನಲ್ಲಿ ಭರ್ಜರಿ ಲಾಭ ಗಳಿಸಿದ BJP: ಅದು ಹೇಳಿದ್ದು ಎಷ್ಟು ಸತ್ಯ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights