ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಚಿರತೆ ಪತ್ತೆ : ಸಿಸಿಟಿವಿ ದೃಶ್ಯಕಂಡು ಬೆಚ್ಚಿಬಿದ್ದ ಜನ..!

ಹೈದರಾಬಾದ್ ವಿಮಾನ ನಿಲ್ದಾಣದ ದಾರಿಯಲ್ಲಿ ಚಿರತೆ ಪತ್ತೆಯಾಗಿದ್ದು ಸುತ್ತಮುತ್ತ ವಾಸಿಸುವ ಜನರು ಭಯಭೀತರಾಗಿದ್ದಾರೆ.

ಜನವರಿ19 ಮಂಗಳವಾರ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಚಿರತೆ ಸುಮಾರು 10 ನಿಮಿಷಗಳ ಕಾಲ ನಿಲ್ದಾಣ ದಾರಿಯಲ್ಲಿ ಸಂಚರಿಸುತ್ತಿರುವುದನ್ನು ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಕಂಡುಕೊಮಡಿದ್ದಾರೆ. ಕೊಂಚ ಹೊತ್ತಿನ ಬಳಿಕ ಅದು ತಂತಿಬೇಲಿನ್ನು ಹಾರಿ ಹೋಗಿರುವುದು ಕೂಡ ದೃಶ್ಯದಲ್ಲಿದೆ.

ಭದ್ರತಾ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ಪ್ರಕರಣದ ತನಿಖೆಯಲ್ಲಿ ಭಾಗಿಯಾಗಿದ್ದಾರೆ. “ಚಿರತೆ ಶಂಶಾಬಾದ್ ಕಡೆಗೆ ಹೋಗಿರಬಹುದೆಂದು ಶಂಕಿಸಲಾಗಿದೆ. ಗ್ರಾಮಸ್ಥರೊಬ್ಬರು ಅದನ್ನು ನೋಡಿದ್ದೇವೆಂದು ಹೇಳಿಕೊಂಡರು ಮತ್ತು ತಕ್ಷಣ ನಮಗೆ ಮಾಹಿತಿ ನೀಡಿದರು. ನಮ್ಮ ಗಸ್ತು ಮೊಬೈಲ್ ಕಾರ್ ಸಿಬ್ಬಂದಿ ಸ್ಥಳಕ್ಕೆ ತಲುಪಿ ಸತ್ಯಗಳನ್ನು ಪರಿಶೀಲಿಸಿದರು. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಾಣಿಗಳ ಚಲನೆಯನ್ನು ಶಂಕಿಸಲಾಗಿರುವ ಹತ್ತಿರದ ಪ್ರದೇಶಗಳಲ್ಲಿನ ನಿವಾಸಿಗಳಿಗೆ ಸಂದೇಶಗಳನ್ನು ಕಳುಹಿಸಿ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights