ಮತ್ತೆ ಮಾಧುಸ್ವಾಮಿಗೆ ‘ಖಾತೆ’ ಶಾಕ್! : ಖಾತೆ ಅದಲು ಬದಲು ಆಟದಲ್ಲಿ ಸಚಿವರು ಸುಸ್ತೋ ಸುಸ್ತು…

ರಾಜ್ಯ ರಾಜಕೀಯದಲ್ಲಿ ಖಾತೆ ಕ್ಯಾತೆ ಮುಗಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಖಾತೆ ಅದಲು ಬದಲು ಆಟದಲ್ಲಿ ಸಚಿವರು ಸುಸ್ತಾಗಿ ಹೋಗಿದ್ದಾರೆ. ಯಾರಾದರು ತಮಗೆ ಈ ಖಾತೆ ನೀಡಲಾಗಿದೆ ಎಂದು ಹೇಳುವ ಹೊತ್ತಿಗೆ ಆ ಖಾತೆ ಬದಲಾಗಿ ಹೋಗುತ್ತಿದೆ. ಹೀಗಾಗಿ ಖಾತೆ ಕ್ಯಾತೆ ಕಾಮಿಡಿ ಆಟದಂತಾಗಿದೆ. ಇದರಲ್ಲಿ ಮಾಧು ಸ್ವಾಮಿ ಖಾತೆ ಕೂಡ ಮ್ಯೂಸಿಕಲ್ ಚೇರ್ ನಂತಾಗಿದೆ.

ಸಚಿವ ಜೆಸಿ ಮಾಧುಸ್ವಾಮಿ ಬಳಿ ಇದ್ದ ಎರಡು ಖಾತೆಯನ್ನು ಕಿತ್ತುಗೊಳ್ಳಲಾಗಿದೆ. ಡಾ. ಸುಧಾಕರ್ ಅವರ ಬಳಿ ಇದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಕಿತ್ತು ಕೊಂಡು ಮಾಧುಸ್ವಾಮಿಗೆ ಕೊಡಲಾಗಿತ್ತು. ಆದರೆ ಈಗ ಸಚಿವ ಸುಧಾಕರ್ ಇದರ ಬಗ್ಗೆ ಬೇಸರ ವ್ಯಕ್ತಪಡಿಸಿ ಒತ್ತಡ ತಂದಿದ್ದರಿಂದ ಪುನ: ಸಚಿವ ಸುಧಾಕರ್ ಅವರಿಗೆ ಮಾಧುಸ್ವಾಮಿಗೆ ಕೊಟ್ಟಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ವಾಪಸ್ ಕೊಡಲು ನಿರ್ಧರಿಸಲಾಗಿದೆ. ಇದಕ್ಕೆ ಸಚಿವ ಮಾಧುಸ್ವಾಮಿ ಬೇಸರಗೊಂಡಿದ್ದಾರೆ.

ಇನ್ನೂ ಮೂಲ ಸೌಕರ್ಯ, ಹಜ್ ಮತ್ತು ವಕ್ಫ್ ಖಾತೆಯನ್ನು ಸಚಿವ ಆನಂದ್ ಸಿಂಗ್ ಕೊಡಲು ತೀರ್ಮಾನಿಸಲಾಗಿದೆ. ಒಂದು ವೇಳೆ ಈ ಖಾತೆ ಕೊಡುವುದಾದರೆ ನನಗೆ ಬೇಡ ಎಂದು ಸಚಿವ ಆನಂದ್ ಸಿಂಗ್ ನೇರವಾಗಿ ಹೇಳಿಕೊಂಡಿದ್ದಾರೆ.

ಹೀಗಾಗಿ ಹತ್ತು ಹದಿನೈದು ದಿನಕ್ಕೊಮ್ಮೆ ಖಾತೆ ಅದಲು ಬದಲು ಮಾಡುತ್ತಾ ಹೋದರೆ ಅಧಿಕಾರಿಗಳಿಗೆ ಉಡಾಫೆ ಮನೋಭಾವ ಉಂಟಾಗುತ್ತದೆ. ಜನರಿಗೆ ಸಚಿವರಿಗೆ ಸರ್ಕಾರದ ಮೇಲೆ ನಂಬಿಕೆ ಕಳೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗುತ್ತದೆ.

ಸದ್ಯ ಸುಧಾಕರ್ ಅವರಿಗೆ ಪಟ್ಟು ಹಿಡಿದಿದ್ದರಿಂದ ವೈದ್ಯಕೀಯ ಶಿಕ್ಷಣ ಖಾತೆ ಸಿಕ್ಕಿರುವುದಾದರೆ ಉಳಿದ ಸಚಿವರು ಕೂಡ ಪಟ್ಟು ಹಿಡಿದು ತಮಗಿಷ್ಟವಾದ ಖಾತೆ ಪಡೆಯಲು ಮುಂದಾಗುತ್ತಾರೆ. ಹೀಗಾಗಿ ಸಿಎಂ ಈ ಬಗ್ಗೆ ಗಟ್ಟಿ ನಿರ್ಧಾರ ಮಾಡಬೇಕು. ಸಚಿವರು ಈಗಿರುವ ಖಾತೆಯಲ್ಲೇ ಮುಂದುವರೆಯಬೇಕು ಎಂದು ಹೇಳಿದರೆ ಬಹುಶ: ಅದಲು ಬದಲು ಮನಸ್ತಾಪಗಳಿಗೆ ಕೊಂಚ ಹಾದಿ ಕಡಿಮೆಯಾಗುತ್ತದೆ. ಪಟ್ಟುಹಿಡಿದವರಿಗೆಲ್ಲಾ ಮಣೆ ಹಾಕುತ್ತಾ ಹೋದರೆ ಮುಂದೆ ಎಲ್ಲರೂ ಪಟ್ಟು ಹಿಡಿಯುವ ಪ್ರೌವೃತ್ತಿ ರೂಢಿಸಿಕೊಳ್ಳುತ್ತಾರೆ. ಇದಕ್ಕೆ ಸಿಎಂ ಅವಕಾಶ ನೀಡಕೂಡದು. ಒಟ್ಟಿನಲ್ಲಿ ಖಾತೆ ಕ್ಯಾತೆ ಮತ್ತೆ ಶುರುವಾಗಿದ್ದು ಯಾವ ಹಂತಕ್ಕೆ ಬಂದು ತಲುಪುತ್ತದೆ ಎಂದು ಕಾದು ನೋಡಬೇಕಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights