ಕೇಂದ್ರ ಸರ್ಕಾರದ 2021ರ ಬಜೆಟ್ ಮಂಡನೆ: ಆಯವ್ಯಯದ ಪ್ರಮುಖ ಅಂಶಗಳು ಹೀಗಿವೆ!
2021 ಮತ್ತು 2022ನೇ ಸಾಲಿನ ಕೇಂದ್ರ ಬಜೆಟ್ಅನ್ನು ಇಂದು (ಸೋಮವಾರ) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡನೆ ಮಾಡಿದ್ದಾರೆ. ಕೊರೊನಾ ನಂತರದಲ್ಲಿ ಮಂಡನೆಯಾದ ಮೊದಲ ಬಜೆಟ್ ಇದಾಗಿದ್ದು, ಈ ಮೂಲಕ ದೇಶದಲ್ಲಿ ಅಧಿಕವಾಗಿರುವ ನಿರುದ್ಯೋಗ, ಆರ್ಥಿಕ ಕುಸಿತವನ್ನು ಸುಧಾರಿಸುವ ಯೋಜನೆಗಳನ್ನು ದೇಶದ ಜನರು ನಿರೀಕ್ಷಿಸಿದ್ದಾರೆ.
2021-2022ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರವು 12 ಲಕ್ಷ ಕೋಟಿ ರೂ ಮೊತ್ತದಷ್ಟು ಸಾಲ ಪಡೆಯಲು ಮುಂದಾಗಿದೆ. ಸದ್ಯ ಸಂಸತ್ನಲ್ಲಿ ಮಂಡನೆಯಾದ ಬಜೆಟ್ನ ಪ್ರಮುಖ ಅಂಶಗಳು ಹೀಗಿವೆ:
- ಗ್ರಾಮೀಣ ಮೂಲ ಅಭಿವೃದ್ಧಿ ನಿಧಿಗೆ 30,000 ಕೋಟಿಯಿಂದ 40,000 ಕೋಟಿ ರೂ. ಮತ್ತು ಐದು ಪ್ರಮುಖ ಮೀನುಗಾರಿಕೆ ಬಂದರುಗಳನ್ನು ಆರ್ಥಿಕ ಚಟುವಟಿಕೆಯ ಕೇಂದ್ರಗಳಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಲಾಗಿದೆ.
- ಕೃಷಿ ಸಾಲ ಗುರಿಯನ್ನು 16.5 ಲಕ್ಷ ಕೋ.ಗೆ ಹೆಚ್ಚಿಸಲು ವಿತ್ತ ಸಚಿವರ ಪ್ರಸ್ತಾವ
- ಕೃಷಿ ಕ್ಷೇತ್ರದ ಸಂವರ್ಧನೆಗಾಗಿ 2022 ರ ಹಣಕಾಸು ವರ್ಷದಲ್ಲಿ ಕೃಷಿ ಸಾಲದ ಗುರಿಯನ್ನು ವಿಸ್ತರಿಸಲಾಗುತ್ತದೆ. ಇದಕ್ಕಾಗಿ ಹಲವು ಕಲ್ಯಾಣ ಯೋಜನೆಗಳನ್ನು ನವೀಕರಣ.
- 2022 ರ ಹಣಕಾಸು ವರ್ಷದಲ್ಲಿ 2 ಪಿಎಸ್ಯು ಬ್ಯಾಂಕುಗಳು ಮತ್ತು ಒಂದು ಸಾಮಾನ್ಯ ವಿಮಾ ಕಂಪನಿಯನ್ನು ಖಾಸಗೀಕರಣಗೊಳಿಸಲು ಸರ್ಕಾರ ನಿರ್ಧಾರ.
- 1 ಕೋಟಿ ಜನರಿಗೆ ಉಜ್ವಲಾ ಯೋಜನೆ ವಿಸ್ತರಣೆ. ಮುಂದಿನ ಮೂರು ವರ್ಷಗಳಲ್ಲಿ 100 ಜಿಲ್ಲೆಗಳು ಯೋಜನೆ ವ್ಯಾಪ್ತಿಗೆ.
- 1.15 ಲಕ್ಷ ಕೋಟಿ ರೂ. ರೈಲ್ವೆ ಇಲಾಖೆ ಮತ್ತು ವಿಮಾನಗಳ ಖಾಸಗೀಕರಣಕ್ಕೆ ವಿನಿಯೋಗ 2 ಮತ್ತು ಮೂರನೇ ಹಂತದ ನಗರಗಳಲ್ಲಿ ವಿಮಾನಗಳ ಖಾಸಗೀಕರಣ.
- ಮಾರ್ಚ್ 2022ರ ಹೊತ್ತಿಗೆ 8500 ಕಿ.ಮೀ. ಹೆದ್ದಾರಿ ನಿರ್ಮಾಣ, ತಮಿಳುನಾಡಿನಲ್ಲಿ 3500 ಕಿ.ಮೀ. ಕಾರಿಡಾರ್, ಕೇರಳದಲ್ಲಿ 65,000 ಕೋಟಿ ರೂ.ಗಳ 1100 ಕಿ.ಮೀ. ಉದ್ದದ ಹೆದ್ದಾರಿ, ಪಶ್ಚಿಮ ಬಂಗಾಳದಲ್ಲಿ 95,000 ಕೋಟಿ ರೂ. ವೆಚ್ಚದ 675 ಕಿ.ಮೀ. ಹೆದ್ದಾರಿ ಮತ್ತು ಮುಂದಿನ 3 ವರ್ಷಗಳಲ್ಲಿ ಅಸ್ಸಾಮ್ನಲ್ಲಿ 1300. ಕಿ.ಮೀ.
- 61,000 ಕೋಟಿ ರೂ.ಗಳ ಹೊಸ ಆರೋಗ್ಯ ಮೂಲ ಸೌಕರ್ಯಗಳ ಯೋಜನೆ
- 17,000 ಗ್ರಾಮೀಣ ಮತ್ತು 11000 ನಗರ ಆರೋಗ್ಯ ಕೇಂದ್ರಗಳ ಆರಂಭ.
- ಮುಂದಿನ ಆರು ವರ್ಷಗಳಿಗೆ ಆರೋಗ್ಯ ಸೇವೆಗೆ 64,180 ಕೋಟಿ ರೂ.ಗಳು ಈ ಮೊತ್ತ ಮೂರು ಹಂತಗಳಲ್ಲಿ ವಿನಿಯೋಗಿಸಲಾಗುತ್ತದೆ. ರಾಷ್ಟ್ರೀಯ ಆರೋಗ್ಯ ಮಿಷನ್ ಆಡಿಯಲ್ಲಿ ಕಾರ್ಯಚಟುವಟಿಕೆಗಳು
- ಇಲ್ಲಿಯವರೆಗೆ ಕೋವಿಡ್ ಪರಿಹಾರಕ್ಕೆ 27.1 ಲಕ್ಷ ಕೋಟಿ ಘೋಷಣೆ
- ಆಹಾರಧಾನ್ಯಗಳ ಖರೀದಿಗೆ 1.41 930 ಕೋಟಿ ವೆಚ್ಚ
- ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಬಂಡವಾಳ ಹಿಂತೆಗೆತ
- ಎಲ್ಐಸಿ ನಿಗಮದಲ್ಲಿ ಬಂಡವಾಳ ಹಿಂತೆಗೆತ
- ಬೇಳೆಕಾಳು ಖರೀದಿಗೆ10530ಕೋಟಿ ವೆಚ್ಚ
- ಕೃಷಿ ಸಾಲ ಗುರಿ 6.7 ಲಕ್ಷ ಕೋಟಿ ರೂ.
- 22 ಬೆಳೆಗಳಿಗೆ ವಿಮೆ ವಿಸ್ತರಣೆ
- ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ 40 ಸಾವಿರ ಕೋಟಿ
- ಕೃಷಿ ನೀರಾವರಿಗೆ ಹೆಚ್ಚುವರಿ 5000 ಕೋಟಿ
- ರೈತರಿಗೆ ಒಂದುವರೆ ಪಟ್ಟು ಹೆಚ್ಚು ಬೆಂಬಲ ಬೆಲೆ
- ಭತ್ತ 63928 ಕೋಟಿ ಬೆಂಬಲ ಬೆಲೆ
- 1000 ಕೃಷಿ ಮಾರುಕಟ್ಟೆಯಲ್ಲಿ ಇನಾಂ ವಿಸ್ತರಣೆ
- 5 ಮೀನುಗಾರಿಕಾ ಬಂದರುಗಳ ಅಭಿವೃದ್ಧಿ
- ಆಹಾರಧಾನ್ಯ ಖರೀದಿಗೆ 1.72 ಕೋಟಿ ಮೀಸಲು
- ಇಲ್ಲ ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ವೇತನ ಕಾನೂನು ಅನ್ವಯ
- ಕೃಷಿ ಕ್ಷೇತ್ರ ಮೂಲಸೌಕರ್ಯಕ್ಕೆ 40 ಸಾವಿರ ಕೋಟಿ ಮೀಸಲು
- ತಮಿಳುನಾಡಿನಲ್ಲಿ ಮೀನುಗಾರಿಕೆಗೆ ವಿಶೇಷ ಯೋಜನೆ
- ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಇಎಸ್ಐ ಕಡ್ಡಾಯ
- ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ
- 100 ಸೈನಿಕ ಶಾಲೆ ಸ್ಥಾಪನೆ
- 15000 ಹೊಸ ಶಾಲೆಗಳ ಸ್ಥಾಪನೆ
- ಲೇಹ್ ನಲ್ಲಿ ಕೇಂದ್ರ ವಿದ್ಯಾಲಯ ಸ್ಥಾಪನೆ
- ಬುಡಕಟ್ಟು ಪ್ರದೇಶಗಳಲ್ಲಿ ಮಾದರಿ ಶಾಲೆಗಳ ಸ್ಥಾಪನೆ
- ಗೃಹ ಸಾಲದ ಮೇಲಿನ ತೆರಿಗೆ ವಿನಾಯಿತಿ ಇನ್ನೊಂದು ವರ್ಷ ವಿಸ್ತರಣೆ
- ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಬಂಡವಾಳ ಹಿಂತೆಗೆತ.
- ಚಾರಿಟೇಬಲ್ ಟ್ರಸ್ಟ್ ಗಳಿಗೆ ವಿನಾಯಿತಿ
- ಕಾರ್ಮಿಕರಿಗೆ ಬಾಡಿಗೆ ಮನೆ ನೀಡುವ ಮನೆಮಾಲೀಕರಿಗೆ ತೆರಿಗೆ ವಿನಾಯಿತಿ.
- ಸ್ಟಾರ್ಟ ಅಪ್ ಗಳಿಗೆ ತೆರಿಗೆ ರಜೆ ಘೋಷಣೆ.
- ಅಬಕಾರಿ ಸುಂಕದಲ್ಲಿ ಬದಲಾವಣೆ
- ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಅಬಕಾರಿ ಸುಂಕ ಹೆಚ್ಚಳ 2. 5 ರಷ್ಟು ಹೆಚ್ಚಳ
- ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ದುಬಾರಿ ಮಾಡಿದ ಕೇಂದ್ರ ಸರ್ಕಾರ
- ಟಿವಿ ಹವಾನಿಯಂತ್ರಿತ ಮತ್ತು ಮೊಬೈಲ್ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ಸ್ ವಸ್ತುಗಳು ದುಬಾರಿ
- ಜವಳಿ ಉಕ್ಕು ಉತ್ಪನ್ನಗಳ ಮೇಲೆ ಅಬಕಾರಿ ಸುಂಕ ಹೆಚ್ಚಳ
- ಚಿನ್ನದ ಒಡವೆಗಳ ಮೇಲೆ 12.5 ಅಬಕಾರಿ ಸುಂಕ ಮುಂದುವರಿಕೆ
- ಆಟೋಮೊಬೈಲ್ ಉತ್ಪನ್ನಗಳ ಮೇಲೆ ಸುಂಕ ಹೆಚ್ಚಳ
- ಪ್ಲಾಸ್ಟಿಕ್ ಉತ್ಪನ್ನಗಳ ಮೇಲೆ ಸುಂಕ ಹೆಚ್ಚಳ
- ಚಿನ್ನದ ಬೆಲೆ ಕೊಂಚ ಕಡಿಮೆ
- ಚಿನ್ನದ ಆಭರಣಗಳ ಮೇಲೆ ಅಬಕಾರಿ ಸುಂಕ ಇಳಿಕೆ
- ಮನೆಗೆ ಖರೀದಿಸುವ ವಿವಿಧ ಬಣ್ಣಗಳು ಅಗ್ಗ
- ಕೃಷಿ ಸೆಸ್ ಷೋಷಣೆ
- ಹತ್ತಿ ಉತ್ಪನ್ನದ ಮೇಲೆ ಅಬಕಾರಿ ಸುಂಕ ಹೆಚ್ಚಳ
- ಡಿಸೆಂಬರ್ನಲ್ಲಿ ಮಾನವರಹಿತ ಬಾಹ್ಯಾಕಾಶ ಯಾನ
- 75 ಏಕಲವ್ಯ ಮಾದರಿ ಶಾಲೆಗಳ ಸ್ಥಾಪನೆ
- ಭಾರತ ಜಪಾನ್ ನಡುವೆ ವಿದ್ಯಾರ್ಥಿಗಳಿಗೆ ತರಬೇತಿ
- ರಾಷ್ಟ್ರೀಯ ಭಾಷಾಂತರ ನೀತಿ ಜಾರಿ
- ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ
- ಟೀ ಕಾರ್ಮಿಕರಿಗೆ 300 ಕೋಟಿ ರೂ ಘೋಷಣೆ
- ಹೆದ್ದಾರೆ ಸಂಪರ್ಕವಾಗಿ ಯೋಜನೆ ವಿಸ್ತರಣೆ
- ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆ ಜಾರಿ
- ಅಸ್ಸಾಂ ಪಶ್ಚಿಮ ಬಂಗಾಳಕ್ಕೆ ಮತ್ತೆ ಬಂಪರ್
- ಚುನಾವಣೆ ಇರುವ ರಾಜ್ಯಗಳಿಗೆ ಬಂಪರ್ ಕೊಡುಗೆ ನೀಡಿದ ನಿರ್ಮಲಾ ಸೀತಾರಾಮ್
- ದೇಶದಲ್ಲಿ ಮೊದಲ ಡಿಜಿಟಲ್ ಗಣತಿಗಾಗಿ 3700 ಸಾವಿರ ಕೋಟಿ ಘೋಷಣೆ
- ವಿತ್ತೀಯ ಕೊರತೆ ಜಿಡಿಪಿಯ 9.5ರಷ್ಟು ಇಳಿಯಲಿದೆ
- 20 ವರ್ಷ ಮೇಲ್ಪಟ್ಟ ವಾಹನಗಳು ಗುಜರಿಗೆ
- ಕೇಂದ್ರ ಸರ್ಕಾರದ ಮೇಲೆ 12 ಲಕ್ಷ ಕೋಟಿ ರು ಮೊತ್ತದಷ್ಟು ಸಾಲ.
- ವಿಮಾ ಕಂಪನಿಗಳಿಗೆ ವಿದೇಶಿ ಬಂಡವಾಳ ಹೆಚ್ಚಳ
- ಬಂಡವಾಳ ಹಿಂತೆಗೆತ ದಿಂದ ಆದಾಯ ಹೆಚ್ಚಳ
- ಭಾರತೀಯ ವಿಮಾ ಸಂಸ್ಥೆಯನ್ನು ಖಾಸಗೀಕರಣದಿಂದ ಹೆಜ್ಜೆ.
- ಆಹಾರ ನಿಗಮಕ್ಕೆ ಕೊಡುತ್ತಿದ್ದ ಸಾಲ ರದ್ದು
- ರಾಷ್ಟ್ರೀಯ ಸಾಮಾಜಿಕ ಭದ್ರತಾ ನಿಧಿಯಿಂದ ಕೊಡಲಾಗುತ್ತಿದ್ದ ಸಾಲ ರದ್ದು
- ರಷ್ಯಾದಲ್ಲಿ ಭಾರತದ ಗಗನಯಾನಿ ಗಳಿಗೆ ತರಬೇತಿ
- 17 ನೂತನ ಮೊಬೈಲ್ ಹೆಲ್ತ್ ಯೂನಿಟ್ ಸ್ಥಾಪನೆ
- ನೇರ ತೆರಿಗೆಯಲ್ಲಿ ಬದಲಾವಣೆ
- 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪಿಂಚಣಿ, ಬಡ್ಡಿ ಆದಾಯಕ್ಕೆ ತೆರಿಗೆ ಇಲ್ಲ
- 15ಲಕ್ಷ ಮೇಲ್ಪಟ್ಟ ತೆರಿಗೆ ವಂಚನೆಗೆ ಮಾತ್ರ ಕೇಸ್
- ಅನಿವಾಸಿ ಭಾರತೀಯರಿಗೆ ದ್ವಿ ತೆರಿಗೆ ಇಲ್ಲ
- ಎಲ್ಐಸಿಯಲ್ಲಿಯೂ ಬಂಡವಾಳ ಹಿಂತೆಗೆತ
ಇದನ್ನೂ ಓದಿ: ಕೇಂದ್ರ ಬಜೆಟ್ನಲ್ಲಿ ಮುಖ್ಯವಾಗಿ ಏನಿರಬೇಕು: ರಾಹುಲ್ಗಾಂಧಿ ಹೇಳಿದ ಮೂರು ಅಂಶಗಳು!

